ದೇಶದಲ್ಲಿ ಶಾಂತಿ ಇರೋದು ನಿಮಗೆ ಬೇಡ: ಅಯೋಧ್ಯೆಯಲ್ಲಿ ಪೂಜೆಗೆ ಸುಪ್ರೀಂ ನಿರಾಕರಣೆ!

By Web DeskFirst Published Apr 12, 2019, 3:17 PM IST
Highlights

ಅಯೋಧ್ಯೆಯಲ್ಲಿ ಪೂಜೆಗೆ ಆಗ್ರಹಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ| 'ದೇಶದ ಜನತೆ ಶಾಂತಿಯಿಂದ ಬದುಕಲು ನೀವು ಬಿಡುವುದಿಲ್ಲ'| ಪೂಜೆಗೆ ಆಗ್ರಹಿಸಿದ್ದ ಅರ್ಜಿದಾರನಿಗೆ ಸುಪ್ರೀಂ ಕೋರ್ಟ್ ತಪರಾಕಿ| ಅಯೋಧ್ಯೆಯ ವಿವಾದಿತ ಭೂಮಿಯಲ್ಲಿ ಪೂಜೆಗೆ ಸುಪ್ರೀಂ ನಿರಾಕರಣೆ| ಅಯೋಧ್ಯೆ ಜನರು ಶಾಂತಿಯಿಂದ ಇರುವುದು ನಿಮಗೆ ಇಷ್ಟವಿಲ್ಲ ಎಂದ ಸುಪ್ರೀಂ|

ನವದೆಹಲಿ(ಏ.12): ಮಹತ್ವದ ಬೆಳವಣಿಗೆಯೊಂದರಲ್ಲಿ ಅಯೋಧ್ಯೆಯ ವಿವಾದಿತ ಭೂಮಿಯಲ್ಲಿ ಪೂಜೆ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ ನಿರಾಕರಿಸಿದೆ.

ಅಯೋಧ್ಯೆಯಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, 'ಈ ದೇಶ ಶಾಂತಿಯಿಂದ ಇರುವುದನ್ನು ನೀವು ಬಯಸುವುದಿಲ್ಲ. ಯಾವಾಗಲೂ ಯಾರಾದರೊಬ್ಬರು ಈ ವಿಷಯದಲ್ಲಿ ಮೂಗು ತೂರಿಸುತ್ತಾರೆ..' ಎಂದು ಛೀಮಾರಿ ಹಾಕಿದೆ.

ಅಯೋಧ್ಯೆ ಜನರು ಶಾಂತಿಯಿಂದ ಇರುವುದು ನಿಮಗೆ ಇಷ್ಟವಿಲ್ಲವೇ ಎಂದು ಅರ್ಜಿದಾರರನ್ನು ಪ್ರಶ್ನಿಸಿದ ನ್ಯಾಯಾಲಯ, ಪೂಜೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದೇ ವೇಳೆ ಅರ್ಜಿದಾರರಿಗೆ 5 ಲಕ್ಷ ರೂ. ವೆಚ್ಚ ನೀಡಬೇಕೆಂಬ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಹಿಂತೆಗೆದುಕೊಳ್ಳಲು ಕೂಡ ಸುಪ್ರೀಂಕೋರ್ಟ್ ನಿರಾಕರಿಸಿದೆ.

ದೇಶದಲ್ಲಿ ಏ.11 ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!