ರಾಜಕೀಯ ಲಾಭಕ್ಕಾಗಿ ಸೈನಿಕರ ರಕ್ತ ಬಳಕೆ:ನಿವೃತ್ತ ಯೋಧರಿಂದ ರಾಷ್ಟ್ರಪತಿಗೆ ಪತ್ರ?

By Web DeskFirst Published Apr 12, 2019, 2:30 PM IST
Highlights

ರಾಜಕೀಯ ಅಜೆಂಡಾಗಾಗಿ ಸೇನೆಯ ದುರ್ಬಳಕೆ ಆರೋಪ| 'ನಿಮ್ಮ ಲಾಭಕ್ಕಾಗಿ ನಮ್ಮ ರಕ್ತವನ್ನೇಕೆ ಅವಮಾನಿಸುತ್ತೀರಿ'?| ರಾಜಕೀಯ ಲಾಭಕ್ಕಾಗಿ ಸಶಸ್ತ್ರಪಡೆಗಳ ದರ್ಬಳಕೆಗೆ ನಿವೃತ್ತ ಯೋಧರ ವಿರೋಧ?| ರಾಷ್ಟ್ರಪತಿಗೆ ಪತ್ರ ಬರೆದು ಅಸಮಾಧಾನ ಹೊರಹಾಕಿದ ನಿವೃತ್ತ ಯೋಧರು| ಭೂಸೇನೆ, ವಾಯುಸೇನೆ, ನೌಕಾಸೇನೆಯ ನಿವೃತ್ತ ಮುಖ್ಯಸ್ಥರಿಂದ ರಾಷ್ಟ್ರಪತಿಗೆ ಪತ್ರ| ನಿವೃತ್ತ ಯೋಧರ ಯಾವುದೇ ಪತ್ರ ಬಂದಿಲ್ಲ ಎಂದ ರಾಷ್ಟ್ರಪತಿ ಭವನ|

ನವದೆಹಲಿ(ಏ.12): ಸಶಸ್ತ್ರಪಡೆಗಳ ಸಾಹಸವನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ನಿವೃತ್ತ ಮಿಲಿಟರಿ ಅಧಿಕಾರಿಗಳು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

General SF Rodrigues who is mentioned as the first signatory in the purported letter (in pic- first page of the letter) written by armed forces veterans to President, denies signing it. pic.twitter.com/oidGb8ex0Z

— ANI (@ANI)

8 ಮಾಜಿ ಸೇನಾ ಮುಖ್ಯಸ್ಥರು ಮತ್ತು 156 ಇತರ ಮಿಲಿಟರಿ ಪರಿಣತರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದು, ಸಶಸ್ತ್ರಪಡೆಗಳ ದುರ್ಬಳಕೆಯನ್ನು ನಿಲ್ಲಿಸುವಂತೆ ಕೋರಿದ್ದಾರೆ ಎಂದು ಹೇಳಲಾಗಿದೆ.

Goa: General SF Rodrigues who is mentioned as the first signatory in the purported letter written by armed forces veterans to President, denies signing it. pic.twitter.com/h1PNBCV909

— ANI (@ANI)

ಭೂ ಸೇನೆಯ ಮಾಜಿ ಮುಖ್ಯಸ್ಥರಾದ ಜನರಲ್ (ನಿವೃತ್ತ) ಎಸ್.ಎಫ್ ರೋಡ್ರಿಗಸ್, ಜನರಲ್ (ನಿವೃತ್ತ) ಶಂಕರ್ ರಾಯ್ ಚೌಧರಿ ಮತ್ತು ಜನರಲ್ (ನಿವೃತ್ತ) ದೀಪಕ್ ಕಪೂರ್ ಪತ್ರಕ್ಕೆ ಸಹಿ ಹಾಕಿದ ಭೂ ಸೇನೆಯ ಪ್ರಮುಖರು.

Air Chief Marshal NC Suri to ANI: This is not Admiral Ramdas’ letter (purported letter written by armed forces veterans to President) & it has been done by some Major Chaudhary. He has written this & it was coming on WhatsApp & emails. 1/2 pic.twitter.com/hWeg3apB4M

— ANI (@ANI)

ಇನ್ನು ವಾಯುಸೇನಾ ಮಾಜಿ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ (ನಿವೃತ್ತ) ಎನ್ಸಿ ಸೂರಿ ಪತ್ರಕ್ಕೆ ಸಹಿ ಹಾಕಿದ ವಾಯುಸೇನೆಯ ಪ್ರಮುಖರು.

General SF Rodrigues: We in the services have always done what the Govt in power ordered us, we are an instrument of the state.We are apolitical. Anyone can say anything and then sell it as fake news, I don't know who this gentleman is who wrote this(purported letter to Pres) pic.twitter.com/InUUEDHyhO

— ANI (@ANI)

ಅದರಂತೆ ಅಡ್ಮಿರಲ್ (ನಿವೃತ್ತ) ಎಲ್ ರಾಮದಾಸ್, ಅಡ್ಮಿರಲ್ (ನಿವೃತ್ತ) ಅರುಣ್ ಪ್ರಕಾಶ್, ಅಡ್ಮಿರಲ್ (ನಿವೃತ್ತ) ಮೆಹ್ತಾ ಮತ್ತು ಅಡ್ಮಿರಲ್ (ನಿವೃತ್ತ) ವಿಷ್ಣು ಭಾಗವತ್ ಪತ್ರಕ್ಕೆ ಸಹಿ ಹಾಕಿದ ನೌಕಾಸೇನೆಯ ಪ್ರಮುಖರು.

ಇತ್ತೀಚಿಗೆ ನಡೆದ ಬಾಲಾಕೋಟ್ ವಾಯುದಾಳಿ, ಈ ಹಿಂದೆ ನಡೆದಿದ್ದ ಸರ್ಜಿಕಲ್ ಸ್ಟ್ರೈಕ್ ಗಳನ್ನು ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಚಾರದ ವಸ್ತುವಾಗಿ ಬಳಸಿಕೊಳ್ಳುತ್ತಿವೆ ಎಂದು ಈ ಪ್ರಮುಖರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸಶಸ್ತ್ರ ಪಡೆಗಳನ್ನು 'ಮೋದಿ ಸೇನೆ' ಎನ್ನುವ ಮೂಲಕ ಅವಮಾನಿಸಲಾಗುತ್ತಿದೆ ಎಂದು ಈ ಹಿರಿಯರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಅಲ್ಲದೇ ಚುನಾವಣಾ ಪ್ರಚಾರಗಳಲ್ಲಿ ಸೇನೆಯ ಭಾವಚಿತ್ರಗಳು, ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಭಾವಚಿತ್ರಗಳನ್ನು ಬಳಸಿದ್ದಕ್ಕೆ ನಿವೃತ್ತ ಯೋಧರು ವಿರೋಧ ವ್ಯಕ್ತಪಡಿಸಿದ್ದಾರೆ.

Gen SF Rodrigues: Don’t know what it(purported letter written by armed forces veterans to Pres)is all about.All my life,we've been apolitical.Aftr,42 yrs as officer,it's a little late to change.Always put India first.Don’t know who these ppl are,classic manifestation of fake news pic.twitter.com/Cgpo57sVhq

— ANI (@ANI)

ಪತ್ರ ಬಂದಿಲ್ಲ ಎಂದ ರಾಷ್ಟ್ರಪತಿ ಭವನ:

ಆದರೆ ಈ ಸುದ್ದಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿರುವ ರಾಷ್ಟ್ರಪತಿ ಭವನ ಮಾಜಿ ಯೋಧರಿಂದ ಇಂತಹ ಯಾವುದೇ ಪತ್ರ ಬಂದಿಲ್ಲ ಎಂದು ಸ್ಪಷ್ಟಪಡಿಸಿದೆ.

ಭಾರತೀಯ ಸೇನಾಪಡೆಗಳ ಕಾರ್ಯಾಚರಣೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ರಾಷ್ಟ್ರಪತಿಗೆ ಮಾಜಿ ಸೈನಿಕರು ದೂರು ಸಲ್ಲಿಸಿದ್ದಾರೆ ಎಂಬ ಸುದ್ದಿ ಸುಳ್ಳು,  ಅಂತಹ ಯಾವುದೇ ಪತ್ರ ರಾಷ್ಟ್ರಪತಿಗಳಿಗೆ ತಲುಪಿಲ್ಲ ಎಂದು ರಾಷ್ಟರಪತಿ ಭವನ ಸ್ಪಷ್ತನೆ ನೀಡಿದೆ.

ದೇಶದಲ್ಲಿ ಏ.11 ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!