ಸಿಬಿಐನ ಮಾಜಿ ಮುಖ್ಯಸ್ಥರ ವಿರುದ್ಧ ತನಿಖೆಗೆ ಸುಪ್ರೀಂಕೋರ್ಟ್ ಆದೇಶ

By suvarna web deskFirst Published Jan 23, 2017, 9:47 AM IST
Highlights

ರಂಜೀತ್ ಸಿನ್ಹಾ ತಮ್ಮ ಸ್ಥಾನ ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ತನಿಖೆ ನಡೆಯಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.

ನವದೆಹಲಿ(ಜ.23): ಬಹುಕೋಟಿ ರೂಪಾಯಿ ಕಲ್ಲಿದ್ದಲು ಹಗರಣದ ತನಿಖೆಗೆ ಸಂಬಂಧಿಸಿದಂತೆ ಸಿಬಿಐನ ಮಾಜಿ ಮುಖ್ಯಸ್ಥ ರಂಜೀತ್ ಸಿನ್ಹಾ ವಿರುದ್ಧ ಮೇಲ್ನೋಟಕ್ಕೆ ಕಂಡುಬಂದಿರುವ ಆರೋಪಗಳ ಕುರಿತ ತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಿದೆ.

ಕಲ್ಲಿದ್ದಲು ಹಗರಣದ ತನಿಖೆ ಮೇಲೆ ಪ್ರಭಾವ ಬೀರಲು ಸಿನ್ಹಾ ಯತ್ನಿಸಿದ್ದರು ಎಂಬ ನ್ಯಾಯಾಂಗ ಸಮಿತಿಯ ವರದಿ ಆಧರಿಸಿ ಎಂ.ಬಿ. ಲೋಕೂರ್ ನೇತೃತ್ವದ ವಿಶೇಷ ನ್ಯಾಯಪೀಠ ಈ ತೀರ್ಪನ್ನ ನೀಡಿದೆ.

ರಂಜೀತ್ ಸಿನ್ಹಾ ತಮ್ಮ ಸ್ಥಾನ ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ತನಿಖೆ ನಡೆಯಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.

ತನಿಖೆಗೆ ವಿಶೇಷ ತಂಡ ರಚಿಸುವಂತೆ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾರಿಗೆ ಆದೇಶಿಸಿರುವ ಕೋರ್ಟ್, ತನಿಖೆ ವೇಳೆ ಕೇಂದ್ರೀಯ ಜಾಗೃತ ದಳವನ್ನ ವಿಶ್ವಾಸಕ್ಕೆ ತೆಗದುಕೊಳ್ಳುವಂತೆ ಸೂಚಿಸಿದೆ. ತನಿಖಾ ತಂಡ ರಚನೆ ಮತ್ತು ತನಿಖೆ ಪೂರ್ಣಗೊಳ್ಳಲು ನಿಗದಿತ ಸಮಯ ಸೂಚಿಸುವಂತೆ ಕೋರ್ಟ್ ಆದೇಶಿಸಿದೆ.

 

 

click me!