
ನವದೆಹಲಿ[ಸೆ.23]: ಸುಪ್ರೀಂ ಕೋರ್ಟ್ ಗೆ ನೂತನ ನಾಲ್ವರು ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗಿದ್ದು, ಸಿಜೆಐ ರಂಜನ್ ಗೋಗೋಯ್ ಸಮ್ಮುಖದಲ್ಲಿ ಇವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 34ಕ್ಕೆ ಏರಿಕೆಯಾಗಿದೆ.
ಕೃಷ್ಣ ಮುರಾರಿ, ಎಸ್. ರವೀಂದ್ರ ಭಟ್, ಜೆ. ವಿ ರಾಮಸುಬ್ರಮಣಿಯನ್ ಹಾಗೂ ಹೃಷಿಕೇಶ್ ರಾಯ್ ಸುಪ್ರೀಂ ಕೋರ್ಟ್ ಗೆ ನೇಮಕಗೊಂಡ ನೂತನ ನಾಲ್ವರು ನ್ಯಾಯಮೂರ್ತಿಗಳು. ಕೇಂದ್ರ ಸರ್ಕಾರ ಈ ಹಿಂದೆಯೇ ಇವರ ನಿಯುಕ್ತಿಗೆ ಗ್ರೀನ್ ಸಿಗ್ನಲ್ ನೀಡಿದ್ದು, ಇಂದು ಸಿಜೆಐ ರಂಜನ್ ಗೊಗೋಯ್ ಪ್ರಮಾಣ ವಚನ ಬೋಧಿಸಿದ್ದಾರೆ. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನ ಹಲವಾರು ವಕೀಲರು ಹಾಗೂ ನ್ಯಾಯಾಧೀಶರು ಹಾಜರಿದ್ದರು.
ನ್ಯಾಯಮೂರ್ತಿ ಮುರಾರಿ ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್, ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ರಾಜಸ್ಥಾನ ಹೈ ಕೋರ್ಟ್, ನ್ಯಾಯಮೂರ್ತಿ ಜೆ. ವಿ ರಾಮಸುಬ್ರಮಣಿಯನ್ ಹಿಮಾಚಲ ಪ್ರದೇಶ ಹೈಕೋರ್ಟ್ ಹಾಗೂ ಹೃಷಿಕೇಶ್ ರಾಯ್ ಕೇರಳ ಹೈಕೋರ್ಟ್ ನ್ಯಾಯಧೀಶರಾಗಿ ಸೇವೆ ಸಲ್ಲಿಸಿದ್ದಾರೆ.
ಸುಪ್ರೀಂ ಕೋರ್ಟ್ನಲ್ಲಿ ಖಾಲಿ ಇದ್ದ 4 ನ್ಯಾಯಮೂರ್ತಿಗಳ ಸ್ಥಾನಕ್ಕೆ ನಾಲ್ವರು ಜಡ್ಜ್ಗಳನ್ನು ನೇಮಕ ಮಾಡುವಂತೆ ಆಗಸ್ಟ್ 30ರಂದು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಶಿಫಾರಸ್ಸು ಮಾಡಿತ್ತು. 4 ಜಡ್ಜ್ಗಳ ನೇಮದಿಂದ ಸುಪ್ರೀಂ ಕೋರ್ಟ್ನಲ್ಲಿ ಎರಡು ಹೆಚ್ಚುವರಿ ಕೋರ್ಟ್ ಕೊಠಡಿಗಳನ್ನು ನಿರ್ಮಿಸಲಾಗಿದೆ. ಈ ಮೊದಲು ಸುಪ್ರೀಂ ಕೋರ್ಟ್ನಲ್ಲಿ 15 ಕೋರ್ಟ್ ರೂಂಗಳಿದ್ದವು, ಈಗ ಅವುಗಳ ಸಂಖ್ಯೆ 17 ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.