ಗೋವಾ ಸರ್ಕಾರದ ಮೇಲೆ ಸುಪ್ರೀಂಕೋರ್ಟ್ ಗದಾ ಪ್ರಹಾರ..!

By Suvarna Web DeskFirst Published Feb 8, 2018, 9:19 AM IST
Highlights

ಗಣಿಗಾರಿಕೆ ಗುತ್ತಿಗೆಯನ್ನು ಹರಾಜು ಮೂಲಕವೇ ಹಂಚಿಕೆ ಮಾಡಬೇಕು ಎಂಬ ಕಾಯ್ದೆ ಜಾರಿಗೆ ಬರುವ ಮುನ್ನ ಆತುರಾತುರವಾಗಿ 2015ರಲ್ಲಿ 88 ಗಣಿಗಳ ಲೈಸೆನ್ಸ್ ಅನ್ನು 20 ವರ್ಷಗಳ ಅವಧಿಗೆ ನವೀಕರಣ ಮಾಡಿದ್ದ ಗೋವಾ ಸರ್ಕಾರದ ಮೇಲೆ ಸುಪ್ರೀಂಕೋರ್ಟ್ ಗದಾಪ್ರಹಾರ ಮಾಡಿದೆ.

ನವದೆಹಲಿ: ಗಣಿಗಾರಿಕೆ ಗುತ್ತಿಗೆಯನ್ನು ಹರಾಜು ಮೂಲಕವೇ ಹಂಚಿಕೆ ಮಾಡಬೇಕು ಎಂಬ ಕಾಯ್ದೆ ಜಾರಿಗೆ ಬರುವ ಮುನ್ನ ಆತುರಾತುರವಾಗಿ 2015ರಲ್ಲಿ 88 ಗಣಿಗಳ ಲೈಸೆನ್ಸ್ ಅನ್ನು 20 ವರ್ಷಗಳ ಅವಧಿಗೆ ನವೀಕರಣ ಮಾಡಿದ್ದ ಗೋವಾ ಸರ್ಕಾರದ ಮೇಲೆ ಸುಪ್ರೀಂಕೋರ್ಟ್ ಗದಾಪ್ರಹಾರ ಮಾಡಿದೆ.

ಆ ಎಲ್ಲ 88 ಗಣಿ ಲೈಸೆನ್ಸ್ ನವೀಕರಣವನ್ನು ನ್ಯಾಯಾಲಯ ಬುಧವಾರ ರದ್ದುಗೊಳಿಸಿದೆ. ನ್ಯಾಯಪೀಠ 88 ಕಂಪನಿಗಳ ಲೈಸೆನ್ಸ್ ಅನ್ನು ರದ್ದುಗೊಳಿಸಿದೆಯಾದರೂ, ಮಾರ್ಚ್ 15ರವರೆಗೆ ಈ ಕಂಪನಿಗಳು ಗಣಿಗಾರಿಕೆ ಮುಂದುವರಿಸಬಹುದು. ಮಾ.16ರಿಂದ ಹೊಸದಾಗಿ ಗಣಿ ಲೈಸೆನ್ಸ್ ಪಡೆಯುವವರೆಗೆ ಗಣಿಗಾರಿಕೆ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು ಎಂದು ತಾಕೀತು ಮಾಡಿದೆ.

click me!