ಮೂರನೇ ದಿನಕ್ಕೆ ಕಾಲಿಟ್ಟ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ

By Suvarna Web DeskFirst Published Feb 8, 2018, 9:18 AM IST
Highlights

ಷ್ಟ ವೇತನ ಬೇಡಿಕೆ ಈಡೇರಿಸದ ಹಿನ್ನಲೆ ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಬಿಸಿಯೂಟ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್ ಬಳಿ ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ.

ಬೆಂಗಳೂರು(ಫೆ.08): ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಬಿಸಿಯೂಟ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದೆ. ಇಂದು ರಾಜ್ಯಾದ್ಯಂತ ಬಿಸಿಯೂಟ ಬಂದ್​ ಮಾಡುವ ಮೂಲಕ ಹೋರಾಟವನ್ನು ತ್ರೀವ್ರಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ.

ಮೈಕೊರೆಯುವ ಚಳಿಯಲ್ಲೂ ಅಹೋರಾತ್ರಿ ಪ್ರತಿಭಟನೆ ಮುಂದುವರೆಸಿದ್ದ ಮಹಿಳೆಯರಿಗೆ ಎಮ್​'ಇ'ಪಿ ಪಕ್ಷದ ಕಾರ್ಯಕರ್ತರು ನಿನ್ನೆ ರಾತ್ರಿ 50 ಕ್ಕೂ ಹೆಚ್ಚು ಬೆಡ್​ ಶೀಟ್​ ವಿತರಿಸಿದರು. ಈ ವೇಳೆ ಚಳಿಗೆ ಬೇಸತ್ತಿದ್ದ ಮಹಿಳೆಯರು ಬೆಡ್​ಶೀಟ್​ಗಳಿಗೆ ತಾ ಮುಂದು, ನಾ ಮುಂದು ಅಂತ ಮುಗಿಬಿದ್ದರು. ಮಹಿಳೆಯರನ್ನೆಲ್ಲಾ ಕೂರಿಸಿ, ಒಬ್ಬೊಬ್ಬರಿಗೆ ಬೆಡ್​ ಶೀಟ್​​​ಗಳನ್ನು ಹಂಚಿದರು. ಕನಿಷ್ಟ ವೇತನ ಬೇಡಿಕೆ ಈಡೇರಿಸದ ಹಿನ್ನಲೆ ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಬಿಸಿಯೂಟ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್ ಬಳಿ ಅಹೋರಾತ್ರಿ ಧರಣಿ ಕೈಗೊಂಡಿದ್ದಾರೆ. ಕನಿಷ್ಠ ವೇತನ ಹತ್ತು ಸಾವಿರ ಮಾಡುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂಬುವುದು ಕಾರ್ಯಕರ್ತರ ಆಗ್ರಹವಾಗಿದೆ. ಇಂದು ಕೂಡ ರಾಜ್ಯದ ವಿವಿಧ ಭಾಗದಿಂದ ಕಾರ್ಯಕರ್ತೆಯರು ಆಗಮಿಸಲಿದ್ದು ಪ್ರತಿಭಟನೆ ಇನ್ನಷ್ಟೂ ತೀವ್ರಗೊಳ್ಳುವ ಸಾಧ್ಯತೆ ಇದೆ.

click me!