ಮೇಕೆದಾಟು ಯೋಜನೆಗೆ ರಜನಿ ಅಪಸ್ವರ

Published : Dec 14, 2018, 09:16 AM IST
ಮೇಕೆದಾಟು ಯೋಜನೆಗೆ ರಜನಿ ಅಪಸ್ವರ

ಸಾರಾಂಶ

ಮೇಕೆದಾಟು ಅಣೆಕಟ್ಟು ಯೋಜನೆಯ ಬಗ್ಗೆ ತಮಿಳು ನಟ ಕಂ ರಾಜಕಾರಣಿ ರಜನೀಕಾಂತ್‌ ಅಪಸ್ವರ ಎತ್ತಿದ್ದಾರೆ.

ಚೆನ್ನೈ[ಡಿ.14]: ಕರ್ನಾಟಕವು ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲು ಯೋಚಿಸಿರುವ ಮೇಕೆದಾಟು ಅಣೆಕಟ್ಟು ಯೋಜನೆಯ ಬಗ್ಗೆ ತಮಿಳು ನಟ ಕಂ ರಾಜಕಾರಣಿ ರಜನೀಕಾಂತ್‌ ಅಪಸ್ವರ ಎತ್ತಿದ್ದಾರೆ.

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮೇಕೆದಾಟು ಅಣೆಕಟ್ಟು ನಿರ್ಮಾಣದಿಂದ ತಮಿಳುನಾಡಿಗೆ ಯಾವುದೇ ಹಾನಿ ಇಲ್ಲ ಎಂದು ಕರ್ನಾಟಕ ಹೇಳುತ್ತಿದೆ. ಕರ್ನಾಟಕದ ಹೇಳಿಕೆಯಲ್ಲಿ ನಿಜಾಂಶವಿದೆಯೇ ಎಂಬುದನ್ನು ನಾವು ಪರಿಶೀಲಿಸಬೇಕು. ತಮಿಳುನಾಡಿಗೆ ಬರುವ ನೀರಿನ ಹರಿವಿನ ಪ್ರಮಾಣ ತಗ್ಗಿದರೆ ನಾವು ನ್ಯಾಯಾಲಯದ ಮೊರೆ ಹೋಗಬೇಕು’ ಎಂದು ಹೇಳಿದ್ದಾರೆ.

ಈ ಮೂಲಕ ಕಾವೇರಿ ವಿವಾದದ ಬಳಿಕ ಮತ್ತೊಮ್ಮೆ ಕರ್ನಾಟಕ ಯೋಜನೆ ವಿರುದ್ಧ ಧ್ವನಿ ಎತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಲ್ಲೂ ಹಿಂಸೆ ಆದೀತು ಹುಷಾರ್‌: ರಾಜ್ಯಗಳಿಗೆ ಕೇಂದ್ರದಿಂದ ಅಲರ್ಟ್
India Latest News Live: ನಿನ್ನೆ 30 ಸಾವಿರ ಇಳಿಕೆ; ಇವತ್ತು ಮತ್ತೆ ಕುಸಿತವಾದ ಚಿನ್ನದ ಬೆಲೆ, ಇಲ್ಲಿದೆ ನೋಡಿ ಇಂದಿನ ದರ