ಆತ್ಮಹತ್ಯೆ ಮಾಡಿಕೊಂಡ ಯೋಧನ ಕುಟುಂಬಕ್ಕೆ 1 ಕೋಟಿ

By Suvarna Web DeskFirst Published Nov 3, 2016, 5:20 PM IST
Highlights

ಹರಿಯಾಣದ ಭಿವಾನಿಯಲ್ಲಿನ ನಿವಾಸಕ್ಕೆ ತೆರಳಿ ಅವರ ಶೋಕತಪ್ತ ಕುಟುಂಬ ಸದಸ್ಯರನ್ನು ಭೇಟಿಯಾಗಿ ಬಳಿಕ ಗ್ರೇವಾಲ್‌ ಅವರ ಅಂತ್ಯಕ್ರಿಯೆಯಲ್ಲೂ ಭಾಗಿಯಾದರು.

ಏಕ ಶ್ರೇಣಿ ಏಕ ರೀತಿಯ ಪಿಂಚಣಿ  ಯೋಜನೆಯ ಅನುಷ್ಠಾನದಲ್ಲಿನ ವಿಳಂಬಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಮಾಜಿ ಸೈನಿಕ ಗ್ರೇವಾಲ್‌ ಅವರ ಕುಟುಂಬಕ್ಕೆ ಸಿಎಂ ಅರವಿಂದ ಕೇಜ್ರಿವಾಲ್‌ 1 ಕೋಟಿ ರೂ. ಪರಿಹಾರ ಘೋಷಿಸಿದ್ದಾರೆ.  ಹರಿಯಾಣದ ಭಿವಾನಿಯಲ್ಲಿನ ನಿವಾಸಕ್ಕೆ ತೆರಳಿ ಅವರ ಶೋಕತಪ್ತ ಕುಟುಂಬ ಸದಸ್ಯರನ್ನು ಭೇಟಿಯಾಗಿ ಬಳಿಕ ಗ್ರೇವಾಲ್‌ ಅವರ ಅಂತ್ಯಕ್ರಿಯೆಯಲ್ಲೂ ಭಾಗಿಯಾದರು. ಗ್ರೇವಾಲ್‌ ಕುಟುಂಬದವರಿಗೆ ಸಾಂತ್ವನ ಹೇಳಿದ ಕೇಜ್ರಿವಾಲ್‌, ಮೃತ ಯೋಧನ ಕುಟುಂಬದವರನ್ನು ಪ್ರಧಾನಿ ಮೋದಿ ಭೇಟಿಯಾಗಬೇಕಿತ್ತು; ಯಾವ ದರ್ಪದ ಮನೋಭಾವದಿಂದಾಗಿ ಕಾಂಗ್ರೆಸ್‌ ಪಕ್ಷ ಅಧಿಕಾರದಿಂದ ಕೆಳಗಿಳಿಯಿತೋ ಅದೇ ದರ್ಪದ ಫ‌ಲವಾಗಿ ಬಿಜೆಪಿ ಕೂಡ ಅಧಿಕಾರದಿಂದ ಕೆಳಗಿಳಿಯಲಿದೆ ಎಂದು ಹೇಳುವ ಮೂಲಕ ಕೇಜ್ರಿವಾಲ್‌, ಓಆರ್‌ಓಪಿ ರಾಜಕೀಯದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿಯುವ ಕೆಲಸ ಮಾಡಿದರು.

click me!