ಬಾಲಕನ ಕಿವಿಯಿಂದ ಉದುರುತ್ತಿವೆ ಕಲ್ಲಿನ ಹರಳುಗಳು! ವೈದ್ಯರನ್ನೇ ಬೆಚ್ಚಿಬೀಳಿಸಿದೆ ಈ ಘಟನೆ

Published : Dec 12, 2016, 11:45 PM ISTUpdated : Apr 11, 2018, 12:50 PM IST
ಬಾಲಕನ ಕಿವಿಯಿಂದ ಉದುರುತ್ತಿವೆ ಕಲ್ಲಿನ ಹರಳುಗಳು! ವೈದ್ಯರನ್ನೇ ಬೆಚ್ಚಿಬೀಳಿಸಿದೆ ಈ ಘಟನೆ

ಸಾರಾಂಶ

ಕಳೆದ 15 ದಿನಗಳಿಂದ  ಈ ಬಾಲಕ ರಾತ್ರಿ ಮಲಗಿದ ನಂತ್ರ ಬೆಳಗಿನ ಜಾವದ ಹೊತ್ತಿಗೆ ಆತನ ಕಿವಿಯಿಂದ ಈ ರೀತಿಯ ಕಲ್ಲಿನ ಹರಳುಗಳು ಉದುರುತ್ತಿವೆ. ಹೀಗೆ ತಮ್ಮ ಮಗನ ಕಿವಿಯಿಂದ ಕಲ್ಲುಗಳು ಉದುರುವುದನ್ನು ತಂದೆ ತಾಯಿ, ಅಜ್ಜ ಅಜ್ಜಿ ಎಲ್ಲರೂ ಕಣ್ಣಾರೆ ಕಂಡಿದ್ದೇವೆ ಎಂದು ಹೇಳುತ್ತಾರೆ. ಅವರೇ ಹೇಳಿದ ಪ್ರಕಾರ  ಕಲ್ಲು ಹರಳು ಕಿವಿಯಿಂದ ಬರುವುದಕ್ಕು ಮುನ್ನ ಬಿಳಿ ನೊರೆ ಒಮ್ಮೊಮ್ಮೆ ಕೀವು ರಕ್ತವು ಬರುತ್ತದೆ. ಕಳೆದ ರಾತ್ರಿ ಬಿಳಿ ನೊರೆಯೊಂದು ಕಾಣಿಸಿಕೊಂಡ ನಂತರ 20 ರಿಂದ 30 ಕಲ್ಲು ಹರಳು ಕಿವಿಯಿಂದ ಉಕ್ಕಿಬಂದವು ಎಂದು ಅಚ್ಚರಿವ್ಯಕ್ತಪಡಿಸಿದ್ದಾರೆ.

ದಾವಣ(ಡಿ.12): ಕಿವಿಯಿಂದ ಕಲ್ಲಿನ ಹರಳು ಬರೋದು ಸಾಧ್ಯಾನಾ..? ಆದರೆ ಇದು ಸಾಧ್ಯವಾಗಿದೆ ಜೊತೆಗೆ ಅಚ್ಚರಿಯನ್ನೂ ಮೂಡಿಸಿದೆ. ದಾವಣಗೆರೆ ಜಿಲ್ಲೆಯ ಜಗಳುರು ತಾಲೂಕಿನ ಬೆಣ್ಣೆಹಳ್ಳಿ ಗ್ರಾಮದಲ್ಲಿ  ಐದೂವರೆ ವರ್ಷದ ಬಾಲಕನ ಕಿವಿಯಿಂದ ಬಿಳಿ ಕಲ್ಲಿನ ಹರಳುಗಳು ಬರುತ್ತಿವೆ. ಇದು ಬಾಲಕನ ಫೋಷಕರು ಹಾಗು ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ.

ಕಳೆದ 15 ದಿನಗಳಿಂದ  ಈ ಬಾಲಕ ರಾತ್ರಿ ಮಲಗಿದ ನಂತ್ರ ಬೆಳಗಿನ ಜಾವದ ಹೊತ್ತಿಗೆ ಆತನ ಕಿವಿಯಿಂದ ಈ ರೀತಿಯ ಕಲ್ಲಿನ ಹರಳುಗಳು ಉದುರುತ್ತಿವೆ. ಹೀಗೆ ತಮ್ಮ ಮಗನ ಕಿವಿಯಿಂದ ಕಲ್ಲುಗಳು ಉದುರುವುದನ್ನು ತಂದೆ ತಾಯಿ, ಅಜ್ಜ ಅಜ್ಜಿ ಎಲ್ಲರೂ ಕಣ್ಣಾರೆ ಕಂಡಿದ್ದೇವೆ ಎಂದು ಹೇಳುತ್ತಾರೆ. ಅವರೇ ಹೇಳಿದ ಪ್ರಕಾರ  ಕಲ್ಲು ಹರಳು ಕಿವಿಯಿಂದ ಬರುವುದಕ್ಕು ಮುನ್ನ ಬಿಳಿ ನೊರೆ ಒಮ್ಮೊಮ್ಮೆ ಕೀವು ರಕ್ತವು ಬರುತ್ತದೆ. ಕಳೆದ ರಾತ್ರಿ ಬಿಳಿ ನೊರೆಯೊಂದು ಕಾಣಿಸಿಕೊಂಡ ನಂತರ 20 ರಿಂದ 30 ಕಲ್ಲು ಹರಳು ಕಿವಿಯಿಂದ ಉಕ್ಕಿಬಂದವು ಎಂದು ಅಚ್ಚರಿವ್ಯಕ್ತಪಡಿಸಿದ್ದಾರೆ.

ಕಳೆದ 15 ದಿನಗಳ ಹಿಂದೆಯಷ್ಟೇ ಈ ಬಾಲಕನಿಗೆ  ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ಕಿವಿ ಸೋರುತ್ತಿದೆ ಎಂಬ ಕಾರಣಕ್ಕೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆ ನಂತರ ಕಿವಿಯಿಂದ ಈ ರೀತಿಯ ಕಲ್ಲಿನ ಹರಳುಗಳು ಬರುತ್ತಿದ್ದು ವೈದ್ಯರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ದಿನಕ್ಕೆ 20 ರಿಂದ 30 ಕಲ್ಲಿನ ಹರಳು ಕಿವಿಯಿಂದ ಉದುರುತ್ತಿವೆಯಂತೆ.

ಕಳೆದ 15 ದಿನಗಳಿಂದ ಒಂದು ಲೋಟಕ್ಕು ಹೆಚ್ಚು ಕಲ್ಲು ಹರಳುಗಳನ್ನು ಈ ಕುಟುಂಬ ಸಂಗ್ರಹಿಸಿದ್ದೇವೆ ಎನ್ನುತ್ತಾರೆ ಪೋಷಕರು. ಈ ರೀತಿಯ ಕಲ್ಲು ಹರಳು ಬರುತ್ತಿರುವುದನ್ನು ಕೆಲವರು ದೇವರು ಪವಾಡ ಇರಬಹುದೆಂದು ಊಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಾಳೆ ಬೆಂಗಳೂರಿನ ಹಲೆವೆಡೆ ಪವರ್ ಕಟ್, ಸಾರ್ವಜನಿಕರಿಗೆ ಮಹತ್ವದ ಸೂಚನೆ
ಅನೇಕಲ್‌ನಲ್ಲಿ ಭೀಕರ ಅಪಘಾತ; 20 ವಾಹನಕ್ಕೆ ಕಂಟೈನರ್ ಡಿಕ್ಕಿ, 2ಕ್ಕೂ ಹೆಚ್ಚು ಸಾವು, ಹಲವರು ಗಂಭೀರ