
ಉತ್ತರಪ್ರದೇಶ(ಡಿ.13): ಲಖೀಮ್'ಪುರ್ ಖೀರಿ ಪ್ರದೇಶದ ಓರ್ವ ಕ್ಷೌರಿಕನ ಪಾಲಿಗೆ ಕಳೆದ ಭಾನುವಾರ ಮರೆಯಲಾಗದ ಸಿಹಿ ಅನುಭವ ನೀಡಿದೆ. ಕ್ಷೌರ ಮಾಡಿ ತನ್ನ ಹಾಗೂ ತನ್ನ ಕುಟುಂಬದ ಹೊಟ್ಟೆ ತುಂಬಿಸುತ್ತಿದ್ದ 'ದಿಲ್ಶಾನ್' ಎಂಬ ವೃದ್ಧ ಒಂದೇ ದಿನದಲ್ಲಿ 100 ಕೋಟಿಯ ಒಡೆಯನಾಗಿದ್ದಾನೆ.
ಲಖೀಮ್'ಪುರ್ ಖೀರಿಯ ಸುಂದರ್'ವಲ್'ನಲ್ಲಿ ಹೇರ್ ಕಟ್ಟಿಂಗ್ ಶಾಪ್ ಇಟ್ಟುಕೊಂಡಿರುವ ದಿಲ್ಶಾನ್ ಮೊಬೈಲ್'ಗೆ ರವಿವಾರದಂದು 99.9 ಕೋಟಿ ರೂಪಾಯಿ ಖಾತೆಗೆ ಜಮೆಯಾಗಿರುವ ಸಂದೇಶ ಬಂದಿದ್ದು, ಇದು ಆತನನ್ನು ತಬ್ಬಿಬ್ಬುಗೊಳಿಸಿದೆ. ಮೊಬೈಲ್'ಗೆ ಈ ಸಂದೇಶ ಬಂದಾಗಿನಿಂದಲೂ 'ಮೋದಿ ಸರ್ಕಾರ ತನ್ನ ಮಾತನ್ನು ಉಳಿಸಿಕೊಂಡಿದೆ. ಸರ್ಕಾರ ನನ್ನ ಖಾತೆಗೆ ಹಣ ಜಮಾವಣೆ ಮಾಡಿದೆ' ಎನ್ನುತ್ತಿದ್ದಾನೆ.
ಗಮನಿಸಬೇಕಾದ ವಿಚಾರವೆಂದರೆ ಈ ಮೆಸೇಜ್ ದಿಲ್ಶಾನ್'ನನ್ನು ಚಿಂತೆಗೀಡು ಮಾಡಿದೆ. ಹೀಗಾಗಿ ಈತ ತನ್ನ ಕೆಲಸದಲ್ಲೂ ಸರಿಯಾಗಿ ತೊಡಗಿಸಿಕೊಳ್ಳುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಶನಿವಾರದಂದು ಸುಖವಾಗಿ ನಿದ್ರಿಸಿದ್ದ ಈತ ರವಿವಾರದಂದು ಸ್ಟೇಟ್ ಬ್ಯಾಂಕ್'ನಿಂದ ಬಂದ ಈ ಮೆಸೇಜ್ ಈತನ ನಿದ್ದೆಯನ್ನು ಕಸಿದುಕೊಂಡಿದೆ.
ಬ್ಯಾಂಕ್'ಗಳಿಗೆ ರಜೆ ಇದ್ದ ಕಾರಣ ಈ ಮೆಸೇಜ್ ಹಿಂದಿನ ವಾಸ್ತವ ತಿಳಿಯಲು ರವಿವಾರದಂದೇ ATMಗೆ ತೆರಳಿ ಅಕೌಂಟ್ ಬ್ಯಾಲೆನ್ಸ್ ಪರಿಶೀಲಿಸಿದಾಗಲೂ ಖಾತೆಯಲ್ಲಿ 99 ಕೋಟಿಯ 99 ಲಕ್ಷವಿದೆ ಎಂಬ ರಿಸಿಪ್ಟ್ ಬಂದಿದೆಯಂತೆ. ಇದನ್ನು ಗಮನಿಸಿದ ಕೆಲವರು 'ನೀನು ಕೋಟ್ಯಾಧಿಪತಿ ಆಗಿದ್ದೀ ಎಂದು ಪ್ರಶಂಸಿಸಿದರೆ ಮತ್ತೆ ಕೆಲವರು ಈತನಲ್ಲಿ ಇಡಿ ದಾಳಿಯ ಭಯ ಮೂಡಿಸಿದ್ದಾರೆ.
ಅದೇನಿದ್ದರೂ ಸದ್ಯಕ್ಕಂತೂ ದಿಲ್ಶಾನ್'ನನ್ನು ಈ ಮೆಸೇಜ್ ಕೋಟ್ಯಾಧಿಪತಿ ಮಾಡಿದೆ ಎಂಬ ವಿಚಾರ ಒಂದೆಡೆಯಾದರೆ, ಇದೇ ಸಂದೇಶ ಕಷ್ಟಪಟ್ಟು ದುಡಿದು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾತನ ನಿದ್ದೆ ಕೆಡಿಸಿರುವುದೂ ಸತ್ಯ.
ಕೃಪೆ: ಲೈವ್ ಇಂಡಿಯಾ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.