ಲೋಟ ಗುದದ್ವಾರದ ಮೂಲಕ ಗಂಡಸಿನ ಹೊಟ್ಟೆ ಸೇರಿದ್ದೇಗೆ?

Published : Oct 03, 2018, 07:32 PM ISTUpdated : Oct 03, 2018, 07:40 PM IST
ಲೋಟ ಗುದದ್ವಾರದ ಮೂಲಕ ಗಂಡಸಿನ ಹೊಟ್ಟೆ ಸೇರಿದ್ದೇಗೆ?

ಸಾರಾಂಶ

ಇದೊಂದು ಸುದ್ದಿಯನ್ನು ನಂಬಲೇಬೇಕಾಗಿದೆ. ಚಮಚ ನುಂಗಿದವರನ್ನು, ನಾಣ್ಯ ನುಂಗಿದವರ ಸುದ್ದಿ ಕೇಳಿದ್ದೇವೆ. ಹೊಟ್ಟೆಯಿಂದ ಕೆಜಿಗಟ್ಟಲೆ ದುರ್ಮಾಂಸ ಹೊರಕ್ಕೆ ತೆಗೆದಿದ್ದು ಇದೆ. ಆದರೆ ಈ ಸುದ್ದಿ ಅದೆಲ್ಲಕ್ಕಿಂತ ಭಿನ್ನ.

ಫರೀದಾಬಾದ್[ಅ.03]  ಹರಿಯಾಣದ ಫರೀದಾಬಾದ್ ನಲ್ಲಿ ವ್ಯಕ್ತಿಯೊಬ್ಬ ಹೊಟ್ಟೆ ನೋವಿನ ಚಿಕಿತ್ಸೆಗಾಗಿ ವೈದ್ಯರ ಬಳಿ ಬಂದಾಗ ತೆಗೆದ ಎಕ್ಸರೆಯಲ್ಲಿ ಸ್ಟೀಲ್ ಲೋಟವೊಂದು ಕಾಣಿಸಿದೆ.

ಫರೀದಾಬಾದ್ ನ ಬಿ.ಕೆ. ಆಸ್ಪತ್ರೆಗೆ 30 ವರ್ಷದ ವ್ಯಕ್ತಿ ಬಂದು ಹೊಟ್ಟೆ ನೋವು ಜೋರಾಗಿದೆ ಎಂದಿದ್ದಾನೆ. ಎಕ್ಸರೆ ಮಾಡಿದಾಗ ಹೊಟ್ಟೆಯಲ್ಲಿ ಸ್ಟೀಲ್ ಲೋಟ ಕಾಣಿಸಿದೆ.  ಇದು ಹೊಟ್ಟೆ ಒಳಗೆ ಹೇಗೆ ಸೇರಿತು ಎಂದು ವೈದ್ಯರು ಪ್ರಶ್ನೆ ಮಾಡಿದ್ದಾರೆ.

ಗುದದ್ವಾರದ ಮೂಲಕವೇ ಲೋಟ ತೆಗೆಯಲು ವೈದ್ಯರು ಮುಂದಾಗಿದ್ದಾರೆ. ಆದ್ರೆ ಗುದದ್ವಾರ ಗಾಯಗೊಂಡಿದ್ದರಿಂದ ಚಿಕಿತ್ಸೆ ಸಾಧ್ಯವಿಲ್ಲ ಎಂದು ತೀರ್ಮಾನಕ್ಕೆ ಬಂದಿದ್ದು  ದೆಹಲಿಯ ಏಮ್ಸ್ ಆಸ್ಪತ್ರೆಗೆ ತೆರಳಲು ಸೂಚಿಸಿದ್ದಾರೆ.


 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ಭಾರತದಲ್ಲಿ ಭರ್ಜರಿ ಹೂಡಿಕೆಯ ಘೋಷಣೆ ಮಾಡಿದ ದೈತ್ಯ ಕಂಪನಿಗಳು
ಬಿಜೆಪಿ ಬುರುಡೆ ಗ್ಯಾಂಗಿಂದ ಗ್ಯಾರಂಟಿ ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ