
ಬೆಂಗಳೂರು (ಆ.06): ಇನ್ನಾದ್ರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ. ರಾಜಧಾನಿಯಲ್ಲಿರೋ ಬಾಂಗ್ಲಾ ನುಸುಳುಕೋರರನ್ನು ದೇಶದಿಂದ ಹೊರದಬ್ಬಬೇಕಾಗಿದೆ. ಇಲ್ಲದಿದ್ರೆ ನಮ್ಮ ನೆಮ್ಮದಿಗೆ, ಆಂತರಿಕ ಭದ್ರತೆಗೆ ಧಕ್ಕೆ ಬರೋದ್ರಲ್ಲಿ ಡೌಟೇ ಇಲ್ಲ!
ಸಿಎಂ ಸಿದ್ದರಾಮಯ್ಯ ಸರ್ಕಾರ ನಿದ್ದೆಯಿಂದ ಹೊರಬರಬೇಕಾಗಿದೆ. ಇಲ್ಲದಿದ್ದರೆ ರಾಜಧಾನಿ ಬೆಂಗಳೂರಿಗೆ ಅಪಾಯ ತಪ್ಪಿದಲ್ಲ. ನುಸುಳುಕೋರರ ಸಾಮ್ರಾಜ್ಯವಾಗೋದ್ರಲ್ಲಿ ಡೌಟೇ ಇಲ್ಲ. ಹೌದು, ಬೆಂಗಳೂರಿನಲ್ಲಿ 4 ಲಕ್ಷ ಅಕ್ರಮ ಬಾಂಗ್ಲಾ ನುಸುಳುಕೋರರು ಇರುವ ಆತಂಕಕಾರಿ ವಿಷಯವನ್ನು ಸುವರ್ಣನ್ಯೂಸ್‌ನ ಕವರ್ ಸ್ಟೋರಿ ತಂಡ ರಹಸ್ಯ ಕಾರ್ಯಾಚರಣೆ ನಡೆಸಿ ಬಯಲಿಗೆಳೆದಿತ್ತು.
ಗಡಿಯಲ್ಲಿ ಬಿಎಸ್ಎಫ್ ಯೋಧರಿಗೆ ಲಂಚ ಕೊಟ್ಟು ಭಾರತ ಪ್ರವೇಶಿಸುವ ಈ ನುಸುಳುಕೋರರು ಕಾನೂನುಬಾಹಿರವಾಗಿ ಲಂಚ ಕೊಟ್ಟು ಆಧಾರ್ ಕಾರ್ಡ್, ಪಾನ್ ಕಾರ್ಡ್, ಓಟರ್ ಐಡಿ ಮಾಡಿಸಿಕೊಂಡಿರೋದನ್ನು ಬಯಲಿಗೆಳೆದಿತ್ತು. ಆದರೆ ರಾಜ್ಯ ಸರ್ಕಾರವಾಗಲಿ, ಪೊಲೀಸ್ ಅಧಿಕಾರಿಗಳಾಗಲಿ ಎಚ್ಚೆತ್ತುಕೊಂಡಿಲ್ಲ. ಈ ಬಗ್ಗೆ ಮತ್ತೆ ಯಾಕೆ ಎಚ್ಚರಿಸುತ್ತೀದ್ದೀವಿ ಅಂದರೆ ಉತ್ತರ ಪ್ರದೇಶದಲ್ಲಿ ಬಾಂಗ್ಲಾದೇಶದ ಉಗ್ರನನ್ನು ಅರೆಸ್ಟ್ ಮಾಡಲಾಗಿದೆ.
ಬೆಂಗಳೂರಿನಲ್ಲಿ ‘ಬಾಂಗ್ಲಾ’ ಬಾಂಬ್..!
ಉತ್ತರ ಪ್ರದೇಶದ ಮುಜಾಫ್ಫರ್‌ನಗರ ಜಿಲ್ಲೆಯ ಕುಟೇಸರ ಗ್ರಾಮದಲ್ಲಿ ಬಾಂಗ್ಲದೇಶದ ಉಗ್ರ ಅಬ್ದುಲ್ಲಾನನ್ನು ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಅನ್ಸುರುಲ್ಲಾ ಬಾಂಗ್ಲಾ ಎಂಬ ಭಯೋತ್ಪಾದಕ ಸಂಘಟನೆ ಜೊತೆ ನಂಟು ಹೊಂದಿದ್ದ. ಈತ ಇತರ ಬಾಂಗ್ಲಾ ಉಗ್ರರಿಗೆ ನಕಲಿ ಗುರುತಿನ ಚೀಟಿ ಹಾಗೂ ಪಾಸ್‌ಪೋರ್ಟ್‌ಗಳನ್ನು ಒದಗಿಸುತ್ತಿದ್ದ .
ಈಗಲಾದ್ರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ. ಪೊಲೀಸರು, ರಾಜಧಾನಿಯಲ್ಲಿರೋ ಬಾಂಗ್ಲಾ ನುಸುಳುಕೋರರನ್ನು ಹೊರದಬ್ಬಬೇಕಾಗಿದೆ. ಇಲ್ಲದಿದ್ದರೆ ಆಂತರಿಕ ಭದ್ರತೆಗೆ ಧಕ್ಕೆ ಬರೋದ್ರಲ್ಲಿ ಡೌಟೆ ಇಲ್ಲ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.