
ಬೆಂಗಳೂರು(ನ.02): ನಿನ್ನೆಯಷ್ಟೆ ಮೈಸೂರು ಜಿಲ್ಲಾಡಳಿತದ ನಗದು ರಹಿತ ಪ್ರವಾಸೋದ್ಯಮದ ಆನ್ ಲೈನ್ ಸೇವೆಗಳಿಗೆ ಅಸ್ತು ಎಂದಿದ್ದ ರಾಜ್ಯ ಸರ್ಕಾರ ಇಂದು ಮತ್ತೊಂದು ಮೈಲುಗಲ್ಲು ದಾಟಿದೆ. ಸದ್ಯ ರಾಜ್ಯ ಸರ್ಕಾರ ಪಡಿತರ ವಿತರಣೆಗೂ ನಗದು ರಹಿತ ವ್ಯವಸ್ಥೆಗೆ ಮುಂದಾಗಿದ್ದು ಅದರ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ಪಡಿತರ ಪಡೆಯಲು ಬೇಕಿಲ್ಲ ಚಿಲ್ಲರೆ : ಕ್ಯಾಶ್ ಲೆಸ್ ವ್ಯವಸ್ಥೆಗೆ ಆಹಾರ ಇಲಾಖೆಯ ಚಿಂತನೆ
ಪ್ರಧಾನಿ ನರೇಂದ್ರ ಮೋದಿ 500, 1000 ರೂಪಾಯಿ ನೋಟ್ ಬ್ಯಾನ್ ಮಾಡಿದ ಬೆನ್ನಲ್ಲೇ, ಆರ್ಥಿಕ ಸುಧಾರಣೆಗಾಗಿ ದೇಶದಲ್ಲಿ ಹೊಸ ಮಾದರಿಯ ಕ್ಯಾಶ್ ಲೆಸ್ ವ್ಯವಸ್ಥೆಯತ್ತ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಚಿಂತನೆಗೆ ಪುಷ್ಠಿ ಎನ್ನುವಂತೆ ರಾಜ್ಯ ಸರ್ಕಾರ ಮೋದಿ ಪ್ರಯತ್ನಕ್ಕೆ ಸಾಥ್ ನೀಡುತ್ತಿದೆ, ಇದರಿಂದಾಗಿ ಪಡಿತರ ವಿತರಿಸಲು ಆಹಾರ ಇಲಾಖೆಯ ಮೂಲಕ ಕ್ಯಾಶ್ ಲೆಸ್ ವ್ಯವಸ್ಥೆಯ ಜಾರಿಗೆ ಮುಂದಾಗುತ್ತಿದೆ.
ಈಗಾಗಲೇ ರೇಷನ್ ಕಾರ್ಡುದಾರರನ್ನು ಆಧಾರ್ ವ್ಯವಸ್ಥೆಗೆ ಲಿಂಕ್ ಮಾಡಿರುವ ಆಹಾರ ಮತ್ತು ನಾಗರಿಕ ಇಲಾಖೆ. ಈಗ ಕೂಪನ್ ವ್ಯವಸ್ಥೆಯನ್ನೂ ಜಾರಿಗೊಳಿಸಿದೆ. ಹಾಗಾಗಿ ಇನ್ನು ಮುಂದೆ ರೇಷನ್ ಕಾರ್ಡ್'ದಾರರು ತಮ್ಮ ಆಧಾರ ಲಿಂಕ್ ಹೊಂದಿರುವ ಜನ್ ಧನ್ ಖಾತೆಗೆ ತಮ್ಮ ಮೊಬೈಲ್ ಸಂಖೆಯನ್ನು ನೀಡಿದರೆ ಸಾಕು, ಅವರಿಗೆ ಬ್ಯಾಂಕ್'ನಿಂದ ನಾಲ್ಕು ಸಂಖ್ಯೆಯ ರಹಸ್ಯ ಪಿನ್ ನಂಬರ್ ನೀಡಲಾಗುತ್ತದೆ. ಅಂತಹ ಕಾರ್ಡ್'ದಾರರು ಪ್ರತಿ ತಿಂಗಳು ರೇಷನ್ ಪಡೆದಾಗ ಅವರ ಬ್ಯಾಂಕ್ ಖಾತೆಯಿಂದ ಸಂಬಂಧ ಪಟ್ಟ ರೇಷನ್ ಅಂಗಡಿಯವರಿಗೆ ಹಣ ವರ್ಗಾವಣೆ ಮಾಡಬಹುದು
ಸದ್ಯ ರಾಜ್ಯದಲ್ಲಿ ಒಂದು ಕೋಟಿ ಪಡಿತರ ಚೀಟಿದಾರರು ಆಧಾರ ಲಿಂಕ್ ಮಾಡಿದ್ದು , ಕೂಪನ್ ಪಡೆಯಲು ಯಾವುದೇ ಮೊಬೈಲ್ ನಿಂದ 161 ಗೆ ಕರೆ ಮಾಡಿದರೆ ಸಾಕು ಕುಡಲೆ ಅವರಿಗೆ ಹಣ ಪಾವತಿಸಲು ಮೆಸೆಜ್ ಬರುತ್ತದೆ. ಈ ಮೂಲಕ ಗ್ರಾಹಕರು ನಾಲ್ಕು ಸಂಖ್ಯೆಯ ಪಿನ್ ನಂಬರ್ ಬಳಿಸಿ ಸರಳವಾಗಿ ತಮ್ಮ ಹಣವನ್ನು ರೇಷನ್ ಅಂಗಡಿಯವರಿಗೆ ವರ್ಗಾವಣೆ ಮಾಡಬಹುದು.
ಎಲ್ಲವು ಅಂದು ಕೊಂಡಂತೆ ನಡೆದರೆ 2017 ರ ಜನವರಿಯಿಂದ ಹೊಸ ವ್ಯವಸ್ಥೆ ಜಾರಿಗೆ ಬರುವುದು ನಿಶ್ಚಿತ. ಅದರೊಡನೆ ನೋಟ್ ಬ್ಯಾನ್'ನಿಂದಾಗಿ ಒಂದೆಡೆ ಕಾಳ ಧನಿಕರು ಕಂಗಾಲಾಗಿದ್ದರೆ, ಮತ್ತೊಂದೆಡೆ ಚಿಲ್ಲರೆ ಅಭಾವದಿಂದಾಗಿ ವ್ಯವಸ್ಥೆಯಲ್ಲಿ ಹೇಗೆಲ್ಲಾ ಬದಲಾವಣೆ ಶುರುವಾಗಿದೆ ಅಂತ .
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.