ಕೊನೆಗೂ ರಾಜ್ಯದಲ್ಲಿ ಜಾರಿಗೆ ಬರುತ್ತಿದೆ ರೇರಾ ಕಾಯ್ದೆ : ರಿಯಲ್ ಎಸ್ಟೇಟ್ ವಂಚಕರಿಗೆ ಬೀಳಲಿದೆ ಬ್ರೇಕ್

Published : Jul 06, 2017, 09:57 AM ISTUpdated : Apr 11, 2018, 12:34 PM IST
ಕೊನೆಗೂ ರಾಜ್ಯದಲ್ಲಿ ಜಾರಿಗೆ ಬರುತ್ತಿದೆ ರೇರಾ ಕಾಯ್ದೆ : ರಿಯಲ್ ಎಸ್ಟೇಟ್ ವಂಚಕರಿಗೆ ಬೀಳಲಿದೆ ಬ್ರೇಕ್

ಸಾರಾಂಶ

ನೀವು ಮನೆ ಖರೀದಿಸುವಾಗ ಹಲವು ತೊಂದರೆಗಳು ಎದುರಾಗುತ್ತಿವೆಯಾ? ಹಾಗಿದ್ದರೆ ಇನ್ಮುಂದೆ ಆ ಚಿಂತೆ ಬಿಟ್ಟು ಬಿಡಿ. ಯಾಕಂದ್ರೆ ರಾಜ್ಯದಲ್ಲೂ ರೇರಾ ಕಾಯ್ದೆ ಜಾರಿಗೆ ಬರುತ್ತಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ ರೇರಾಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ.

ಬೆಂಗಳೂರು(ಜು.06): ನೀವು ಮನೆ ಖರೀದಿಸುವಾಗ ಹಲವು ತೊಂದರೆಗಳು ಎದುರಾಗುತ್ತಿವೆಯಾ? ಹಾಗಿದ್ದರೆ ಇನ್ಮುಂದೆ ಆ ಚಿಂತೆ ಬಿಟ್ಟು ಬಿಡಿ. ಯಾಕಂದ್ರೆ ರಾಜ್ಯದಲ್ಲೂ ರೇರಾ ಕಾಯ್ದೆ ಜಾರಿಗೆ ಬರುತ್ತಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ ರೇರಾಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ.

ರಿಯಲ್ ಎಸ್ಟೇಟ್ ವಂಚಕರಿಗೆ ಬ್ರೇಕ್ ಹಾಕಲು ರೆರಾ ಕಾಯ್ದೆ ಜಾರಿಗೆ ಬರ್ತಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಕಾಯ್ದೆಗಳಲ್ಲಿ ಒಂದಾದ ರೇರಾ ಕಾಯ್ದೆ ಜಾರಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ರೇರಾಗೆ ಪೂರಕವಾಗಿ ರಾಜ್ಯ ಸರ್ಕಾರವು ರೂಪಿಸಿರುವ ನಿಯಾಮಾವಳಿಗೆ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಈ ರೇರಾ ಕಾಯ್ದೆ ಜಾರಿಗೆ ಬರುವುದರಿಂದ ಮನೆ ಖರೀದಿದಾರರಿಗೆ ಹಲವು ಉಪಯೋಗಗ ಆಗಲಿದೆ. ಮನೆಯನ್ನು ಗ್ರಾಹಕರಿಗೆ ನೀಡುವ ಸಮಯ, ಅಗತ್ಯ ಕಾಗದ ಪತ್ರಗಳ ವ್ಯವಹಾರಗಳು ಉತ್ತಮವಾಗಲಿದೆ. ಇನ್ನೂ  ರಿಯಲ್ ಎಸ್ಟೇಟ್ ಮಾರುಕಟ್ಟೆಯ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ. ಕ್ಷೇತ್ರದಲ್ಲಿ ಯಾವುದೇ ಮೋಸ ಮಾಡದೆ ವ್ಯವಹಾರ ನಡೆಸುವ ಬಿಲ್ಡರ್‌ಗಳಿಗೆ ಇದು ಉತ್ತಮವಾಗಲಿದೆ.. ಇನ್ನೂ ಮೋಸ ಮಾಡುವ ಉದ್ದೇಶ ಇರುವ ಸಣ್ಣ ವ್ಯವಹಾರದಾರರಿಗೆ ಈ ಕಾಯ್ದೆ ಬ್ರೇಕ್ ಹಾಕಲಿದೆ.

2016 ಮಾರ್ಚ್‌'ನಲ್ಲಿಜಾರಿಗೆ ಬಂದ  ಈ ಕಾಯ್ದೆ ಗೆ 6 ತಿಂಗಳಲ್ಲಿ ನಿಯಮಗಳನ್ನು ರಚಿಸಬೇಕಿತ್ತು. ಆದರೆ ಸ್ವಲ್ಪ ತಡವಾಗಿದೆ. ಗುಜರಾತ್​, ರಾಜಸ್ತಾನ ಮಾದರಿಯಲ್ಲಿ ಕಾಯ್ದೆ ಜಾರಿಯಾಗಲಿದೆ ಅಂತ ಕಾನೂನು ಸಚಿವ ಟಿ.ಬಿ ಜಯಚಂದ್ರ ತಿಳಿಸಿದ್ದಾರೆ.

ಒಟ್ಟಾರೆ ಸ್ವಲ್ಪ ವಿಳಂಬವಾದರೂ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಕಾಯ್ದೆಯನ್ನು ಯಥವಾತ್ತಾಗೇ ಜಾರಿಗೆ ತರುತ್ತಿದೆ. ಇನ್ಮುಂದೆ ರಿಯಲ್ ಎಸ್ಟೇಟ್ ಹೆಸರಲ್ಲಿ ಗ್ರಾಹಕರ ಕಣ್ಣಿಗೆ ಬೂದಿ ಎರಚುತ್ತಿದ್ದ ಖದೀಮರಿಗೆ ಬ್ರೇಕ್ ಬೀಳಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಮಾನದಲ್ಲೇ CPR ನೀಡಿ ಅಮೆರಿಕ ಯುವತಿಯ ಪ್ರಾಣ ಉಳಿಸಿದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್
ಪ್ರಧಾನಿ ಮಾಡಿದ್ದೆಲ್ಲಾ ತಪ್ಪು ಅನ್ನೋದು ತಪ್ಪು: ಕೈಗೆ ಮಾಜಿ ಕಾಂಗ್ರೆಸ್ಸಿಗನ ಸಲಹೆ