
ಚಿಕ್ಕಮಗಳೂರು(ಜು.06): ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಪಣತೊಟ್ಟಿದೆ. ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಉಚಿತ ಸಮವಸ್ತ್ರ ಅಂತ ಕೋಟ್ಯಾಂತರ ಹಣ ಬಿಡುಗಡೆ ಮಾಡುತ್ತಿದೆ. ಆದರೆ ವಿದ್ಯಾರ್ಥಿಗಳ ಕೈಗೆ ತಲುಪುತ್ತಿರುವುದು ಮಾತ್ರ ಅರೆಕಾಸಿನ ಮಜ್ಜಿಗೆ. ಇದಕ್ಕೆ ಸಾಕ್ಷಿ ಚಿಕ್ಕಮಗಳೂರಿನ ಸರ್ಕಾರಿ ಶಾಲೆಗಳು. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾಫಿ ನಾಡಿನ ಮಕ್ಕಳು ಪರಿತಪಿಸುತ್ತಿದ್ದಾರೆ.
ಬೇಸಿಗೆ ರಜೆ ಮುಗಿಸಿದ ಮಕ್ಕಳು ಶಾಲೆಯತ್ತ ಮುಖಮಾಡಿ ತಿಂಗಳು ಕಳೆಯುತ್ತಾ ಬಂದರೂ ಪಠ್ಯ ಪುಸ್ತಕಗಳು ಮಾತ್ರ ಇನ್ನೂ ಕೈ ಸೇರಿಲ್ಲ. ಚಿಕ್ಕಮಗಳೂರಿನ ಸರ್ಕಾರಿ ಶಾಲೆಗಳಲ್ಲಿ ಪುಸ್ತಕವಿಲ್ಲದೆ ವಿದ್ಯಾರ್ಥಿಗಳು, ಶಿಕ್ಷಕರು ಪರದಾಡುವಂತಾಗಿದೆ. ತಿಂಗಳೂ ಕಳೆಯುತ್ತಾ ಬಂದರೂ ಏನನ್ನು ಕಲಿಸಬೇಕೆಂದು ತೋಚದೆ ಶಿಕ್ಷಕರೂ ತಬ್ಬಿಬ್ಬಾಗಿದ್ದಾರೆ. ಇನ್ನೂ ಶಾಲೆ ತಲುಪಿರುವ ಕೆಲವು ಪುಸ್ತಕಗಳ ಹಾಳೆಗಳು ಗುಣಮಟ್ಟವೇ ಇಲ್ಲದೆ ಅಕ್ಷರಗಳನ್ನೂ ಓದಲೂ ಆಗುತ್ತಿಲ್ಲ.
ಪುಸ್ತಕಗಳ ಕಥೆ ಇಷ್ಟಾದರೆ. ಉಚಿತವಾಗಿ ನೀಡಿರುವ ಯೂನಿಫಾರ್ಮ್'ನಲ್ಲೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಶಾಲೆಯಲ್ಲಿ ಕೊಟ್ಟಿರುವ ಬಟ್ಟೆಗೆ ಗುಣಮಟ್ಟವೇ ಇಲ್ಲ. ಬಟ್ಟೆ ತೆಳುವಾಗಿದ್ದು ಸೊಳ್ಳೆಪರದೆಯಂತೆ ಕಾಣುತ್ತಿದೆ. ಬಟ್ಟೆ ನೋಡಿದ ಪೋಷಕರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಗುಣಮಟ್ಟವಿಲ್ಲದ ಪುಸ್ತಕ, ಸಮವಸ್ತ್ರಗಳನ್ನು ಉಚಿತವಾಗಿ ನೀಡಿದರೆ ಏನೂ ಪ್ರಯೋಜನ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದರೆ ವಿದ್ಯಾರ್ಥಿಗಳು ಸರ್ಕಾರಿ ಶಾಲೆಯಿಂದ ದೂರವಾಘುವುದು ಖಚಿತ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.