ಹೆದ್ದಾರಿ ಸವಾರಿ ದುಬಾರಿ: ಟೋಲ್ ದರ ಹೆಚ್ಚಳದಿಂದ ಸವಾರರು ಗಲಿಬಿಲಿ

By Suvarna Web DeskFirst Published Jul 6, 2017, 9:30 AM IST
Highlights

ಒಂದೆಡೆ ಜಿಎಸ್​ಟಿಯಿಂದ ಜನರಲ್ಲಿ ಗೊಂದಲ ಮೂಡಿದೆ. ಇದರ ಮಧ್ಯೆ ಇದೀಗ ಹೆದ್ದಾರಿಗಳ ಟೋಲ್​ ದರ ಏರಿಕೆಯಾಗಿದೆ. ಟೋಲ್​'ಗಳ ಬೆಲೆ ಏರಿಕೆಗೆ ಸವಾರರು ಬಾರಿ ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು(ಜು.06): ಒಂದೆಡೆ ಜಿಎಸ್​ಟಿಯಿಂದ ಜನರಲ್ಲಿ ಗೊಂದಲ ಮೂಡಿದೆ. ಇದರ ಮಧ್ಯೆ ಇದೀಗ ಹೆದ್ದಾರಿಗಳ ಟೋಲ್​ ದರ ಏರಿಕೆಯಾಗಿದೆ. ಟೋಲ್​'ಗಳ ಬೆಲೆ ಏರಿಕೆಗೆ ಸವಾರರು ಬಾರಿ ವಿರೋಧ ವ್ಯಕ್ತಪಡಿಸಿದ್ದಾರೆ.

ಜಿಎಸ್‌ಟಿ ಗೊಂದಲದಲ್ಲಿದ್ದ ಜನತೆಗೆ ರಾಷ್ಟ್ರೀಯ ಹೆದ್ದಾರಿ ಟೋಲ್‌'ಗಳು ಶಾಕ್ ನೀಡಿವೆ. ಅತ್ತಿಬೆಲೆಯಲ್ಲಿರುವ ಬಿಇಟಿಎಲ್ ಟೋಲ್, ನೆಲಮಂಗಲದ ನವಯುಗ ಟೋಲ್‌ಗಳ ದರದಲ್ಲಿ ಶೇಕಡಾ 10ರಷ್ಟು ಹೆಚ್ಚಳವಾಗಿದೆ. ಜುಲೈ 1ರಿಂದಲೇ ಬಿಇಟಿಎಲ್​ ಟೋಲ್ ದರದಲ್ಲಿ ಹೆಚ್ಚಳವಾಗಿದ್ದು, ದ್ವಿಚಕ್ರ ವಾಹನ, ಕಾರುಗಳ ಟೋಲ್​​ ದರವನ್ನ ಹೆಚ್ಚಳ ಮಾಡಿಲ್ಲ. ಇದು ವಾಹನ ಮಾಲೀಕರಿಗೆ ಕೊಂಚ ರಿಲೀಫ್​ ನೀಡಿದೆ. ಆದ್ರೆ ಟ್ರಕ್, ಬಸ್, ಮಲ್ಟಿ ಆಕ್ಸೆಲ್ ವಾಹನಗಳ ಟೋಲ್ ದರ 5 ರಿಂದ 10 ರೂಪಾಯಿ ವರಗೆ ಹೆಚ್ಚಳವಾಗಿದೆ. ಡೇ ಪಾಸ್ ವಾಹನಗಳ ಟೋಲ್​ ದರ 15 ರೂಪಾಯಿ ಹೆಚ್ಚಳವಾಗಿದೆ.

ರಾಷ್ಟ್ರೀಯ ಹೆದ್ದಾರಿ ಟೋಲ್‌ಗಳು ಕೊಂಚ ಶಾಕ್‌ ನೀಡಿದರೆ, ನೈಸ್ ಮಾತ್ರ ವಾಹನ ಸವಾರರಿಂದ ನೈಸಾಗೆ ಹಣ ಕೀಳುತ್ತಿದೆ. ರಾಷ್ಟ್ರೀಯ ಹೆದ್ದಾರಿ ಟೋಲ್‌ಗಳು 10ರಷ್ಟು ದರ ಹೆಚ್ಚಿಸಿದರೆ, ನೈಸ್ ಟೋಲ್ 20 ರಷ್ಟು ದರ ಹೆಚ್ಚಿಸಿದೆ. ಹಾಗಾದರೆ ನೈಸ್ ಟೋಲ್‌ನಲ್ಲಿ ದರ ಎಷ್ಟು ಹೆಚ್ಚಳವಾಗಿ ಎಂಬುದನ್ನ ನೋಡುವುದಾದರೆ.

ನೈಸ್ ಸವಾರಿ ದುಬಾರಿ

ನೈಸ್ ರಸ್ತೆಯ ಟೋಲ್ ದರದಲ್ಲಿ ಶೇ.20ರಷ್ಟು ಹೆಚ್ಚಳ ಮಾಡಲಾಗಿದೆ. ಕ್ಲೋವರ್ ಲೀಫ್ ರಸ್ತೆವರೆಗೆ ಕಾರಿಗೆ 15 ರೂ. ಇದ್ದರೆ. ಕನಕಪುರ ರಸ್ತೆವರೆಗೆ 35 ರೂ. ಬನ್ನೇರುಘಟ್ಟದವರೆಗೆ 65 ರೂಪಾಯಿ. ಹೊಸೂರು ರಸ್ತೆಗೆ 105 ರೂ. ಲಿಂಕ್ ರಸ್ತೆಗೆ 60 ರೂಪಾಯಿ ಇದೆ. ಇನ್ನೂ ಬಸ್‌ಗಳಿಗೆ ನೋಡೋವುದಾದ್ರೆ, ಕ್ಲೋವರ್ ಲೀಫ್‌ಗೆ 45 ರೂ. ಕನಕಪುರ ರಸ್ತೆಗೆ 100 ರೂ. ಬನ್ನೇರುಘಟ್ಟಕ್ಕೆ 185 ರೂ. ಹೊಸೂರು ರಸ್ತೆಗೆ 290 ರೂ. ಲಿಂಕ್ ರಸ್ತೆಗೆ 155 ರೂ. ಇದೆ. ಇನ್ನೂ ಟ್ರಕ್‌ಗಳ ಟೋಲ್ ಕ್ಲೋವರ್ ಲೀಫ್‌ಗೆ 30 ರೂ. ಕನಕಪುರ ರಸ್ತೆಗೆ 65 ರೂ. ಬನ್ನೇರುಘಟ್ಟಕ್ಕೆ 120 ರೂ. ಹೊಸೂರು ರಸ್ತೆಗೆ 190 ರೂ. ಲಿಂಕ್ ರಸ್ತೆಗೆ 105 ರೂಪಾಯಿಗೆ ಹೆಚ್ಚಿಸಲಾಗಿದೆ. ಇನ್ನೂ ದ್ವಿಚಕ್ರ ವಾಹನಗಳ ಟೋಲ್ ಕೂಡ ದುಪ್ಪಟ್ಟಾಗಿದೆ. ಕ್ಲೋವರ್ ಲೀಫ್‌ಗೆ 6 ರೂ. ಕನಕಪುರ ರಸ್ತೆಗೆ 13 ರೂ. ಬನ್ನೇರುಘಟ್ಟಕ್ಕೆ 23 ರೂ. ಹೊಸೂರು ರಸ್ತೆಗೆ 38 ರೂ. ಲಿಂಕ್ ರಸ್ತೆಗೆ 25 ರೂಪಾಯಿ ಫಿಕ್ಸ್ ಮಾಡಲಾಗಿದೆ.

ಈಗಿರುವ ಟೋಲ್​ ದರವೇ ಹೆಚ್ಚು.. ಅದರಲ್ಲಿ ಮತ್ತಷ್ಟು ಏರಿಕೆ ಮಾಡಿರುವುದು ಸವಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಜನ ಜಿಎಸ್​ಟಿಯಿಂದಾಗಿ ಟೋಲ್​ ದರ ಹೆಚ್ಚಳವಾಗಿದೆ ಎಂದು ಸರ್ಕಾರದ ವಿರುದ್ದ ಹಿಡಿಶಾಪ ಹಾಕ್ತಿದ್ರೆ, ಇತ್ತ ಟೋಲ್​ ಕಂಪನಿಗಳು ಪ್ರತಿವರ್ಷ ದರ ಏರಿಕೆ ಮಾಡುವಂತೆ ಈಗಲೂ ಮಾಡಲಾಗಿದೆ ಎಂದು ಸಮಜಾಯಿಷಿ ನೀಡುತ್ತಿದ್ದಾರೆ..

click me!