6ನೇ ವೇತನ ಆಯೋಗದ ವರದಿಗೆ ಸಂಪುಟ ಒಪ್ಪಿಗೆ : ಸರ್ಕಾರಿ ನೌಕರರು ಖುಷ್

By Suvarna Web DeskFirst Published Mar 4, 2018, 12:27 PM IST
Highlights

ಆರನೇ ವೇತನ ಆಯೋಗದ ಬಗ್ಗೆ ಎಂ.ಆರ್. ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ರಚಿಸಿದ್ದ ಆರನೇ ವೇತನ ಆಯೋಗದ ವರದಿಯನ್ನು ಯತಾವತ್ತಾಗಿ ಅಂಗೀಕರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಅಂಕಿತ ಹಾಕಿದ್ದರು.

ಬೆಂಗಳೂರು(ಮಾ.04): ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ  ಸಂಬಂಧ ಆರನೇ ವೇತನ ಆಯೋಗದ ವರದಿ ಅನುಷ್ಠಾನದ ಸಂಬಂಧ ಸರ್ಕಾರ ಹೊರಡಿಸಿರುವ ಅಧಿಕೃತ ಆದೇಶಕ್ಕೆ ಶನಿವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಘಟನೋತ್ತರ ಒಪ್ಪಿಗೆ ನೀಡಲಾಯಿತು.

ಆರನೇ ವೇತನ ಆಯೋಗದ ಬಗ್ಗೆ ಎಂ.ಆರ್. ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ರಚಿಸಿದ್ದ ಆರನೇ ವೇತನ ಆಯೋಗದ ವರದಿಯನ್ನು ಯತಾವತ್ತಾಗಿ ಅಂಗೀಕರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಅಂಕಿತ ಹಾಕಿದ್ದರು.ಇದಕ್ಕೆ ಶನಿವಾರ ಅಂಗೀಕಾರ ದೊರೆತಿದ್ದು, ಸರ್ಕಾರಿ ನೌಕರರ ಶೇ.30 ರಷ್ಟು ವೇತನ ಪರಿಷ್ಕರಣೆ ಸೇರಿದಂತೆ ವೇತನ ಆಯೋಗದ ಎಲ್ಲಾ ಶಿಫಾರಸ್ಸುಗಳಿಗೂ ಸಚಿವ ಸಂಪುಟ ಸಭೆಯ ಒಪ್ಪಿಗೆ ದೊರೆತಿದೆ.

click me!