
ತುಮಕೂರು (ಮಾ. 04): ಇಲ್ಲಿನ ರಾಮಕೃಷ್ಣ ಆಶ್ರಮಕ್ಕೆ 25 ವರ್ಷದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ದೆಹಲಿಯಿಂದಲೇ ವಿಡಿಯೋ ಕಾನ್ಫರೆನ್ಸ್’ನಲ್ಲಿ ಮಾತನಾಡಿದ್ದಾರೆ. ಶತಾಯುಶಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗೆ ಪ್ರಣಾಮಗಳು ಎನ್ನುವ ಮೂಲಕ ಭಾಷಣ ಆರಂಭಿಸಿದ್ದಾರೆ.
ಪ್ರೀತಿಯ ಸೋದರ ಸಹೋದರಿಯರಿಗೆ ಆತ್ಮೀಯ ಸ್ವಾಗತ ಎಂದು ಮಾತು ಆರಂಭಿಸಿದ್ದಾರೆ. ಹಿಂದೊಮ್ಮೆ ಶಿವಕುಮಾರ ಸ್ವಾಮೀಜಿ ಆಶೀರ್ವಾದ ಪಡೆಯಲು ಬಂದಿದ್ದೆ. ರಾಷ್ಟ್ರ ನಿರ್ಮಾಣದಲ್ಲಿ ಶಿವಕುಮಾರ ಸ್ವಾಮೀಜಿ ಸಮರ್ಪಣೆ ಮಾಡಿದ್ದಾರೆ. ಅವರ ಜೊತೆಗಿದ್ದ ಅನುಭವ ಮರೆಯುವಂತಿಲ್ಲ. ಅವರ ದೀರ್ಘಾಯುಷ್ಯಕ್ಕಾಗಿ ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಇಂದು ತುಮಕೂರಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಸಂತಸದ ವಿಚಾರ. ಇವತ್ತಿನ ಕಾರ್ಯಕ್ರಮದ ಕೇಂದ್ರ ಬಿಂದು ಸ್ವಾಮೀಜಿ ವಿವೇಕಾನಂದರು. ಕರ್ನಾಟಕಕ್ಕೂ ವಿವೇಕಾನಂದರಿಗೂ ಸಂಬಂಧವಿದೆ. ಸಾಧು ಭಕ್ತರ ಸಮ್ಮೇಳನ ಖುಷಿ ತಂದಿದೆ. ಧಾರ್ಮಿಕ ಮತ್ತು ವಿಜ್ಞಾನದ ಅರಿವು ಒಂದೇ ಸಿಗುವ ಕಾರ್ಯಕ್ರಮ ಇದಾಗಿದೆ ಎಂದು ಶ್ಲಾಘಿಸಿದ್ದಾರೆ.
ನಿನ್ನೆ ಹೊರಬಿದ್ದ ತ್ರಿಪುರ, ನಾಗಾಲ್ಯಾಂಡ್, ಮೇಘಾಲಯ ರಾಜ್ಯದ ಚುನಾವಣಾ ಫಲಿತಾಂತ ಐತಿಹಾಸಿಕವಾದದ್ದು. ಅಲ್ಲಿನ ಜನತೆ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದೆ. ತ್ರಿಪುರ ಎಡಪಂಥೀಯರ ಅಭೇಧ್ಯ ಕೋಟೆ ಎನ್ನಲಾಗುತ್ತಿತ್ತು. ಆ ಕೋಟೆಯನ್ನು ಯುವಶಕ್ತಿ, ನಾರಿ ಶಕ್ತಿ ಜತೆಗೂಡಿ ಧೂಳೀಪಟಗೊಳಿಸಿದರು. ಬಿಜೆಪಿ ನೇತೃತ್ವದಲ್ಲಿ ದೇಶದ ಯುವ ಸರ್ಕಾರ ನಿರ್ಮಾಣವಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯ ಯುವ ಶಾಸಕರೇ ಗೆದ್ದಿದ್ದಾರೆ. ಈ ರಾಜ್ಯದ 20 ಸ್ಥಾಗಳಲ್ಲಿ ನನ್ನ ಆದಿವಾಸಿ ಸೋದರ, ಸೋದರಿಯರೇ ಅಧಿಕ ಸಂಖ್ಯೆಯಲ್ಲಿದ್ದರು. ತ್ರಿಪುರಾದ ಯುವ ಜನಾಂಗ ಭಯ, ಭ್ರಷ್ಟಾಚಾರ, ಸೇಡು, ವೈಷಮ್ಯದ ರಾಜಕೀಯವನ್ನು ಪರಾಭವಗೊಳಿಸಿದ್ದಾರೆ. ಯುವ ಸಂಕಲ್ಪದ ಈ ಪ್ರವಾಹ ಮುಂದೆ ಕರ್ನಾಟಕದಲ್ಲೂ ಹರಿಯಲಿದೆ ಎಂದು ಮೋದಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.