
ದಾವಣಗೆರೆ(ಮೇ.08): ಬಹು ಸಂಖ್ಯಾತ ವೀರಶೈವ ಸಮಾಜವನ್ನು ರಾಜ್ಯ ಸರ್ಕಾರ ತುಳಿಯುತ್ತಿದೆ ಎಂದು ಮಾಜಿ ಸಚಿವ ಡಾ| ಶಾಮನೂರು ಶಿವಶಂಕರಪ್ಪ ಗುಡುಗಿದ್ದಾರೆ. ಇದರ ವಿರುದ್ಧ ಬೆಂಗಳೂರಿನಲ್ಲಿ ನವೆಂಬರ್ ಅಥವಾ ಡಿಸೆಂಬ ರ್‌ನಲ್ಲಿ ಪ್ರತಿಭಟನಾ ರಾರಯಲಿ ನಡೆಸುವುದಾ ಗಿಯೂ ಅವರು ಎಚ್ಚರಿಸಿದ್ದಾರೆ.
ನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಹು ಸಂಖ್ಯಾತ ವೀರಶೈವ ಸಮಾಜವನ್ನು ರಾಜ್ಯ ಸರ್ಕಾರ ತುಳಿಯುತ್ತಿದ್ದು, ಇದರ ವಿರುದ್ಧ ಬೆಂಗಳೂರಿನಲ್ಲಿ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ರಾಜ್ಯ ಮಟ್ಟದ ಪ್ರತಿಭಟನಾ ರಾರಯಲಿ ನಡೆಸುವುದಾಗಿ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮ ನೂರು ಶಿವಶಂಕರಪ್ಪ ಎಚ್ಚರಿಸಿದರು.
ಅಭಿನವ ರೇಣುಕಾ ಮಂದಿರದಲ್ಲಿ ಭಾನುವಾರ ವೀರಶೈವ ಪಂಚಮಸಾಲಿ ಸಮಾಜ ಮತ್ತು ಹರ ಸೇವಾ ಸಂಸ್ಥೆ ಹಮ್ಮಿಕೊಂಡಿದ್ದ 14ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಹಾಗೂ ಸಮಾಜದ ಗಣ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ರಾಜ್ಯದ ಬಹುಸಂಖ್ಯಾತ ಸಮಾಜವಾದ ವೀರಶೈವ ಲಿಂಗಾಯತರನ್ನು ವ್ಯವಸ್ಥಿತವಾಗಿ ತುಳಿಯುವ ಹುನ್ನಾರ ನಡೆದಿದೆ. ಇದರ ವಿರುದ್ಧ ವೀರಶೈವ ಮಹಾಸಭಾದ ಮೂಲಕ ರಾಜ್ಯ ಮಟ್ಟದ ಹೋರಾಟ ನಡೆಸುವ ಮೂಲಕ ಸರ್ಕಾರಕ್ಕೆ ಚುರುಕು ಮುಟ್ಟಿಸಲಾಗುವುದು ಎಂದರು.
ಇಡೀ ರಾಜ್ಯದಲ್ಲಿ ಶೇ.16-17ರಷ್ಟುಇರುವ ವೀರಶೈವ ಸಮುದಾಯವನ್ನು ಜಾತಿ ಗಣತಿಯಲ್ಲಿ ಕೇವಲ ಶೇ.5-6ರಷ್ಟುಮಾತ್ರ ಎಂಬುದಾಗಿ ತೋರಿಸಲಾಗಿದೆ. ಈ ಮೂಲಕ ಸಮಾಜಕ್ಕೆ ಸಿಗಬೇಕಾದ ಹಕ್ಕು, ಸೌಲಭ್ಯಗಳನ್ನು ತಪ್ಪಿಸುವ ಹುನ್ನಾರ ನಡೆದಿದೆ. ಇಂತಹದ್ದನ್ನೆಲ್ಲ ಮಹಾಸಭಾ ಎಂದಿಗೂ ಸಹಿಸದು ಎಂದು ಹೇಳಿದರು.
ರಾಜ್ಯದ ಪ್ರತಿಯೊಬ್ಬ ವೀರಶೈವ ಸಮುದಾಯ ಬಾಂಧವರು ಅಂದಿನ ಹೋರಾಟದಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳುವ ಮೂಲಕ ಸಮಾಜಕ್ಕೆ ಆದ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಪಕ್ಷಾತೀತವಾಗಿ ನಡೆಯುವ ಹೋರಾಟದ ನೇತೃತ್ವವನ್ನು ಅಖಿಲ ಭಾರತ ವೀರಶೈವ ಮಹಾಸಭಾ ವಹಿಸಲಿದೆ ಎಂದು ತಿಳಿಸಿದರು.
ವಿಜಯಪುರ ಜಿಲ್ಲೆ ಗುರುಪಾದೇಶ್ವರ ಮಠದ ಡಾ.ಮಹಾದೇವ ಶಿವಾಚಾರ್ಯ ಸ್ವಾಮೀಜಿ, ಮನಗೂಳಿ ಹಿರೇಮಠದ ಅಭಿನವ ಸಂಗನ ಬಸವ ಸ್ವಾಮೀಜಿ, ಮೀರಜ್ ತಾ. ತಾಕಲಿಯ ಗುರುದೇವ ತಪೋವನದ ಶಿವದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕುರಿ ಸತ್ತರೇಕೆ 10 ಸಾವಿರ
ಕುರಿಗಳು ಸತ್ತರೆ 10 ಸಾವಿರ ರೂ. ಪರಿಹಾರ ನೀಡುವ ಸರ್ಕಾರ ಸರಳ ಸಾಮೂಹಿಕ ವಿವಾಹಕ್ಕೆ ಪ್ರೋತ್ಸಾಹಿಸಲು ಕೇವಲ 5 ಸಾವಿರ ರೂ. ನೀಡುವುದು ಯಾವ ನ್ಯಾಯ? ಸಾಮೂಹಿಕ ವಿವಾಹಕ್ಕೆ ಕನಿಷ್ಠ .50 ಸಾವಿರ ನೀಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.