ಕಾಶ್ಮೀರದಲ್ಲಿ ನಿರ್ಬಂಧ ವಾಪಸ್‌; ಶ್ರೀನಗರ ಡಿಸಿ ಏನ್ ಹೇಳ್ತಾರೆ ಓದಿ!

By Kannadaprabha News  |  First Published Aug 30, 2019, 5:17 PM IST

ಜಮ್ಮು ಕಾಶ್ಮೀರದಲ್ಲಿ ಹಲವಾರು ವರ್ಷಗಳಿಂದ ಹಿಂಸಾಚಾರಗಳು, ಸಾವು ನೋವುಗಳು ಸಂಭವಿಸಿವೆ. ಆದರೆ, ಈಗ ನಿರ್ಬಂಧ ವಿಧಿಸಿದ ನಂತರ ಒಂದೇ ಒಂದು ಸಾವು ಅಥವಾ ಗಾಯಗೊಂಡ ಪ್ರಕರಣಗಳು ನಡೆದಿಲ್ಲ. ನಿರ್ಬಂಧದ ಹಿಂದಿನ ಉದ್ದೇಶವೂ ಇದೇ. ಈ ನಿರ್ಬಂಧ ಶಾಶ್ವತವಲ್ಲ. 


ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್‌ 370 ರದ್ದತಿ ಬಳಿಕ ಅಶಾಂತಿ ಉಂಟಾಗಬಾರದೆಂಬ ಕಾರಣಕ್ಕೆ ಕೇಂದ್ರ ಸರ್ಕಾರ ಅಲ್ಲಿ ನಿರ್ಬಂಧ ಹೇರಿದೆ. ಈ ಬಗ್ಗೆ ಬೇರೆ ಬೇರೆ ಮಾಧ್ಯಮಗಳಲ್ಲಿ ಬೇರೆ ಬೇರೆ ರೀತಿಯ ವರದಿಗಳು ಕಾಣಿಸುತ್ತಿವೆ. ಈ ಹಿನ್ನೆಲೆಯಲ್ಲಿ ಅಲ್ಲಿ ನಿಜಕ್ಕೂ ಏನಾಗುತ್ತಿದೆ, ಅಲ್ಲಿನ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ರಾಜಧಾನಿ ಶ್ರೀನಗರದ ಜಿಲ್ಲಾಧಿಕಾರಿ ಇಂಡಿಯನ್‌ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.

ಜಮ್ಮು ಕಾಶ್ಮೀರ ಮತ್ತು ಶ್ರೀನಗರದ ಸದ್ಯದ ಸ್ಥಿತಿ ಹೇಗಿದೆ?

Tap to resize

Latest Videos

ಸದ್ಯ ನಾನು ಶ್ರೀನಗರ ಜಿಲ್ಲಾಧಿಕಾರಿಯಾಗಿ ಆ ವ್ಯಾಪ್ತಿಯಲ್ಲಿ ಮಾತ್ರ ಕಾರ‍್ಯನಿರ್ವಹಿಸುತ್ತಿದ್ದೇನೆ. ಕಾಶ್ಮೀರದ ಬಗ್ಗೆ ಹೇಳುವುದಾದರೆ ಇಲ್ಲಿ ನಿರ್ಬಂಧ ವಿಧಿಸಿದ್ದ ಉದ್ದೇಶ ಜೀವ ರಕ್ಷಣೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವುದಾಗಿದೆ. ಏನೆಲ್ಲಾ ಹಾನಿಯಾಗಿದೆ ಎಂದು ಲೆಕ್ಕ ಹಾಕುತ್ತಾ ಕೂರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಸುಮಾರು ವರ್ಷಗಳಿಂದ ಅಂಥಹ ಹಿಂಸಾಚಾರಗಳನ್ನು ನಾವಿಲ್ಲಿ ನೋಡುತ್ತಲೇ ಬಂದಿದ್ದೇವೆ. ಆದರೆ ಈ ಬಾರಿ ಒಂದೇ ಒಂದು ಸಾವು ಅಥವಾ ಗಾಯಗೊಂಡ ಪ್ರಕರಣಗಳು ನಡೆದಿಲ್ಲ.

ರಾಜೀನಾಮೆ ಅಂಗೀಕಾರವಾಗಿಲ್ಲ, ಕೂಡಲೇ ಕರ್ತವ್ಯಕ್ಕೆ ಹಾಜರಾಗಿ: IAS ಅಧಿಕಾರಿಗೆ ಆದೇಶ!

ಬಹುಶಃ ನಿರ್ಬಂಧದ ಹಿಂದಿನ ಉದ್ದೇಶವೂ ಇದೆ. ಮೂರು ವಾರಗಳ ನಿರ್ಬಂಧ ಹೇರಲಾಗಿತ್ತು. ಸದ್ಯ ಪರಿಸ್ಥಿತಿ ಸುಧಾರಿಸಿದೆ. ಹಾಗಾಗಿ ಹಲವು ಪ್ರದೇಶಗಳ ನಿರ್ಬಂಧವನ್ನು ವಾಪಸ್‌ ಪಡೆಯಲಾಗಿದೆ. ಪರಿಸ್ಥಿತಿ ತಹಬದಿಗೆ ಬರುತ್ತಿದೆ. ನಿಬಂರ್‍ಧವನ್ನು ಹಿಂಪಡೆದಾಗೆಲ್ಲಾ ಪ್ರತಿಕ್ರಿಯೆ ಭಿನ್ನವಾಗಿರುತ್ತಿತ್ತು. ಅಲ್ಲಲ್ಲಿ ವಿರಳವಾಗಿ ಪ್ರತಿಭಟನೆಗಳೂ ನಡೆದವು. ಆದರೆ ಯಾವುದೇ ಅನಾಹುತಗಳು ನಡೆದಿಲ್ಲ.

ಇತ್ತೀಚೆಗೆ ಕೆಲ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಪ್ರಾಥಮಿಕ ಶಾಲೆಗಳನ್ನು ತೆರೆಯಲಾಗಿದೆ. ಆದರೆ ಕೆಲ ಶಾಲೆಗಳು ತೆರೆದೇ ಇಲ್ಲ, ತೆರೆದರೂ ಮಕ್ಕಳ ಹಾಜರಾತಿ ತೀರಾ ಕಡಿಮೆ ಇದೆ ಎಂಬ ವರದಿ ಬಂದಿದೆ. ಜನರ ವಿಶ್ವಾಸವನ್ನು ಮತ್ತೆ ಗಳಿಸಲು ನಿಮ್ಮ ಪ್ಲಾನ್‌ ಏನು?

ಶಾಲೆಗಳನ್ನು ತೆರೆಯುವ ಮೂಲಕ ಸರ್ಕಾರ, ಕಾಶ್ಮೀರದ ಸರ್ಕಾರವು ಸ್ಥಿತಿ ಸಹಜವಾಗಿದೆ ಎಂದು ಬಿಂಬಿಸಲು ಹೊರಟಿದೆ ಎಂದು ಕೆಲ ಮಾಧ್ಯಮಗಳಲ್ಲಿ ಚರ್ಚೆ ನಡೆದಿತ್ತು. 2016 ಮತ್ತು 2010ರಲ್ಲಿ ಅಂಥದ್ದೇ ಘಟನೆಗಳು ನಡೆದಿದ್ದವು. ಆದರೆ ಈಗಿನದು ಅದಕ್ಕೆ ಹೋಲಿಕೆಯಾಗದು. ಶ್ರೀನಗರ ಬಗ್ಗೆ ಮಾತನಾಡೋಣ. ಶ್ರೀನಗರದಲ್ಲಿ 930 ಶಾಲೆಗಳಿವೆ. 196 ಶಾಲೆಗಳನ್ನು ಮರು ಆರಂಭಿಸಲಾಗಿದೆ.

ಭದ್ರತೆಯ ಕುರಿತಂತೆ ಸಲಹೆಗಳೂ ಬಂದವು. ಹಾಗಾಗಿ ಶಾಲೆಯ ಮುಖ್ಯಸ್ಥರು ಮತ್ತು ಶಿಕ್ಷಕರೊಂದಿಗೆ ಸಭೆ ನಡೆಸಿ ಆನಂತರವಷ್ಟೇ ಶಾಲೆ ತೆರೆಯಲು ನಿರ್ಧಾರ ಮಾಡಿದೆವು. 196 ಶಾಲೆಗಳ ಪೈಕಿ 160-170 ಶಾಲೆಗಳಿಗೆ ಮಾತ್ರ ಶಿಕ್ಷಕರು ತೆರಳಲು ಸಾಧ್ಯವಿದೆ. ಮೊದಲ ದಿನ ಗರಿಷ್ಠ 10 ಮಕ್ಕಳು ಬಂದಿದ್ದರಷ್ಟೆ.

ಕಾಶ್ಮೀರ ಭಾರತದ ಆಂತರಿಕ ವಿಚಾರ, ಹಿಂಸಾಚಾರಕ್ಕೆ ಪಾಕ್ ಕುಮ್ಮಕ್ಕು ಕಾರಣ: ರಾಹುಲ್ ಗಾಂಧಿ

ಜಿಲ್ಲೆಯಾದ್ಯಂತ ಕೇವಲ 65 ಮಕ್ಕಳು ಶಾಲೆಗೆ ಹಾಜರಾಗಿದ್ದರು. ಶಾಲೆ ತೆರೆದು ಮಕ್ಕಳಿಗೆ ಭದ್ರತೆ ಒದಗಿಸುವುದು ನಮ್ಮ ಜವಾಬ್ದಾರಿ. ಮಕ್ಕಳನ್ನು ಶಾಲೆಗೆ ಕಳಿಸಬೇಕೇ ಬೇಡವೇ ಎನ್ನುವುದು ಪೋಷಕರಿಗೆ ಬಿಟ್ಟವಿಚಾರ. ಆದರೆ ಮಕ್ಕಳ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ನಾನು ಅವರಿಗೆ ಭರವಸೆ ಕೊಡುತ್ತಿದ್ದೇನೆ.

ನಿರ್ಬಂಧದ ಸಂಪೂರ್ಣ ವಾಪಸಾತಿ ಯಾವಾಗ?

ನಿರ್ದಿಷ್ಟಟೈಮ್‌ಲೈನ್‌ ಕೊಡುವುದು ಕಷ್ಟ. ಅದು ನಾಳೆಯೇ ಆಗಬಹುದು ಅಥವಾ ಇನ್ನೂ ಒಂದು ವಾರ ನಿರ್ಬಂಧ ಇರಬಹುದು. ಅಲ್ಲಿನ ಪರಿಸ್ಥಿತಿಯ ಆಧಾರದ ಮೇಲೆ ಅದು ನಿರ್ಧಾರವಾಗುತ್ತದೆ. ನಾನೊಂದು ಉದಾಹರಣೆ ನೀಡಬಲ್ಲೆ; ಕಾಶ್ಮೀರದ ಹಲವು ಭಾಗಗಳಲ್ಲಿ ಅದರಲ್ಲೂ ಶ್ರೀನಗರದಲ್ಲಿ ಪ್ರಮುಖ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಅಲ್ಲಿನ ಪರಿಸ್ಥಿತಿಯೂ ಶಾಂತವಾಗಿದೆ. ಆದರೆ ಕೆಲ ಗಲಭೆಗಳು ನಡೆದವು, ಅದು ಪುನಃ ನಿರ್ಬಂಧ ಹೇರುವಿಕೆ ಬಗ್ಗೆ ಮರು ಚಿಂತನೆ ಮಾಡುವಂತೆ ಮಾಡಿತು.

ನಿರ್ಬಂಧ ಸಡಿಲಿಸಬೇಕೇ ಅಥವಾ ಮತ್ತೊಮ್ಮೆ ನಿರ್ಬಂಧ ಜಾರಿ ಮಾಡಬೇಕೇ ಎನ್ನುವುದನ್ನು ಎಕ್ಸಿಕ್ಯೂಟಿವ್‌ ಮ್ಯಾಜಿಸ್ಪ್ರೇಟ್‌, ಎಸ್‌ಎಚ್‌ಒಗಳು ಮತ್ತು ಪೊಲೀಸ್‌ ಅಧಿಕಾರಿಗಳು ನಿರ್ಧಾರ ಮಾಡುತ್ತಾರೆ. ಪರಿಸ್ಥಿತಿ ಸುಧಾರಿಸಿದ ಕಡೆಗಳಲ್ಲಿ ನಿಬಂರ್‍ಧವನ್ನು ಸಡಿಲಿಸಲಾಗಿದೆ. ದಕ್ಷಿಣ ಕಾಶ್ಮೀರದ ಕುಪ್ವಾರಾದಲ್ಲಿ ಮಾರ್ಕೆಟ್‌ಗಳು ತೆರೆದಿವೆ, ಶಾಲೆಗಳು ಆರಂಭವಾಗಿವೆ. ಇದೇ ರೀತಿ ಪರಿಸ್ಥಿತಿ ಶಾಂತವಾಗುತ್ತಿದ್ದಂತೆಯೇ ಎಲ್ಲಾ ನಿರ್ಬಂಧವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ.

ನಿರ್ಬಂಧ ವಾಪಸಾತಿಗೆ ಒಂದು ದಿನ ಅಥವಾ ಒಂದು ವಾರವೂ ಬೇಕಾಬಹುದು ಎಂದಿರಿ. ತಿಂಗಳುಗಳೂ ಹಿಡಿಯುತ್ತಾ?

ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ.

ಸದ್ಯದ ಪರಿಸ್ಥಿತಿಯ ಸ್ಪಷ್ಟಅರಿವು ನಿಮಗಿದೆ. ನಿರ್ಬಂಧ ತೆಗೆದು ಹಾಕಿದ ಬಳಿಕ ಜನರ ಪ್ರತಿಕ್ರಿಯೆ ಹೇಗಿರುತ್ತದೆಂದು ನೀವು ಭಾವಿಸಿದ್ದೀರಿ ಮತ್ತು ಅದಕ್ಕೆ ಹೇಗೆ ಸಿದ್ಧತೆ ಮಾಡಿಕೊಂಡಿದ್ದೀರಿ?

ನನ್ನ ಪ್ರಕಾರ ಈ ಪ್ರಕರಣದಲ್ಲಿ ಸಂವಹನ ತುಂಬಾ ಮುಖ್ಯ. ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನದ ಬಗ್ಗೆ ಹಲವು ದಶಕಗಳಿಂದಲೂ ಚರ್ಚೆಗಳು ನಡೆಯುತ್ತಿದ್ದವು. ಈ ಬಗ್ಗೆ ಅಲ್ಲಿನ ಜನರ ಅಭಿಪ್ರಾಯ ಕಲೆಹಾಕಬೇಕಾಗುತ್ತದೆ. ಅಲ್ಲಿ ರದ್ದತಿಗೆ ವಿರೋಧ ಇದ್ದಲ್ಲಿ ಸರ್ಕಾರ ತನ್ನ ನಿರ್ಣಯದ ಹಿಂದಿನ ಉದ್ದೇಶ ಏನೆಂಬುದನ್ನು ಸ್ಪಷ್ಟಪಡಿಸಬೇಕು, ಮನವರಿಕೆ ಮಾಡುವ ಪ್ರಯತ್ನ ಮಾಡಬೇಕು. ಹಾಗಾಗಿ ಸಂವಹನ ಇಲ್ಲಿ ಮುಖ್ಯ.

ಇನ್ನು ಪಿಒಕೆ ನಮ್ಮ ಬಳಿ ಉಳಿಯೋದು ಕಷ್ಟ: ಬಿಲಾವಲ್‌ ಭುಟ್ಟೋ

ಎಲ್ಲಾ ರಾಜಕೀಯ ನಾಯಕರು ಬಂಧನದಲ್ಲಿದ್ದಾರೆ. 500-800 ರಾಜಕೀಯ ಕಾರ‍್ಯಕರ್ತರು ಬಂಧನದಲ್ಲಿದ್ದಾರೆಂಬ ವರದಿ ಇದೆ. ರಾಜಕಾರಣಿಗಳು ಮತ್ತು ಕಾರ‍್ಯಕರ್ತರ ಬಂಧನ ಎಲ್ಲಿಯವರೆಗೆ ಮುಂದುವರೆಯಲಿದೆ?

ಇಂತಿಷ್ಟೇ ಜನರ ಬಂಧನ ಎಂದು ಹೇಳಲು ಬರುವುದಿಲ್ಲ. ಕೆಲವು ಮಾಧ್ಯಮಗಳಲ್ಲಿ ಈ ಬಗ್ಗೆ ವಿಧವಿಧದ ವರದಿ ಮಾಡಲಾಗುತ್ತಿದೆ. ಅಲ್ಲದೆ ಇವರುಗಳ ಬಂಧನ ಶಾಶ್ವತವಲ್ಲ. ಕೆಲವರನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಭದ್ರತಾ ದೃಷ್ಟಿಯಿಂದ ಸ್ಥಳೀಯ ರಾಜಕೀಯ ನಾಯಕರನ್ನು ಬಂಧಿಸಲಾಗಿದೆಯಷ್ಟೆ.

ನಿರ್ಬಂಧ ವಾಪಸಾತಿ ಬಳಿಕ ರಾಜಕೀಯ ಕಾರ‍್ಯಕರ್ತರು ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತಾರೆ ಅನ್ನಿಸುತ್ತಾ?

ನಿರ್ಬಂಧ ತಾತ್ಕಾಲಿಕ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇಲ್ಲಿ ಯಾವುದೇ ನಿರ್ಬಂಧ ಇಲ್ಲ. ರಾಜಕೀಯ ಪ್ರತಿಭಟನೆಗಳಿಗೂ ನಿರ್ಬಂಧ ಇಲ್ಲ. ಆದರೆ ಹಿಂಸಾತ್ಮಕ ಕೃತ್ಯಗಳನ್ನು ಖಂಡಿಸುತ್ತೇವೆ.

ಆರ್ಟಿಕಲ್‌ 370 ರದ್ದತಿ ಘೋಷಣೆಗೂ ಮುಂಚೆ ಜನರು ಭಯಭೀತರಾಗಬೇಕಿಲ್ಲ ಎಂದು ಟ್ವೀಟ್‌ ಮಾಡಿದ್ದಿರಿ. ಅಂದರೆ ಕೇಂದ್ರ ಸರ್ಕಾರ ಇಂಥದ್ದೊಂದು ದೊಡ್ಡ ನಿರ್ಧಾರ ಕೈಗೊಳ್ಳುತ್ತದೆ ಎಂಬುದು ಮೊದಲೇ ನಿಮಗೆ ಗೊತ್ತಿತ್ತೇ?

ಸಂಸತ್ತು, ವಿಧಾನಸಭೆ ಅಥವಾ ಯಾವುದೇ ಅಧಿಕಾರಿಗಳಿಂದ ಯಾವ ಆದೇಶ ಬರಬಹುದು ಎಂದು ಊಹಿಸಿಕೊಂಡು ನಾವು ಮೊದಲೇ ನಿರ್ಧಾರ ಮಾಡಲು ಸಾಧ್ಯವಿಲ್ಲ. ಅದು ನಮ್ಮ ಕಾರ‍್ಯವ್ಯಾಪ್ತಿಗೆ ಒಳಪಟ್ಟಿಲ್ಲ, ಅದು ನಮ್ಮ ಕೆಲಸವೂ ಅಲ್ಲ. ಭಯಭೀತರಾಗುವ ಅವಶ್ಯಕತೆ ಇಲ್ಲ ಎಂದರೆ ಮುಂದೇನಾಗುತ್ತದೆಂದು ನನಗೆ ತಿಳಿದಿತ್ತು ಎಂದರ್ಥವಲ್ಲ. ಸಾಕಷ್ಟುಇಂಧನ ಲಭ್ಯವಿದೆ, ಆಹಾರ ಲಭ್ಯವಿದೆ, ಮೆಡಿಸಿನ್‌ಗಳು ನಮ್ಮಲ್ಲಿವೆ.

ಹಾಗಾಗಿ ಭಯಪಡಬೇಡಿ ಎಂಬುದಷ್ಟೇ ನನ್ನ ಅಭಯದ ಹಿಂದಿನ ಅರ್ಥವಾಗಿತ್ತು. ನಿಮಗೆ ಗೊತ್ತಾ, ಕಳೆದ 3 ವಾರದಲ್ಲಿ ವಿದ್ಯುತ್‌ ಕಡಿತಗೊಂಡಿಲ್ಲ, ನೀರಿನ ಸಪ್ಲೈ ನಿಂತಿಲ್ಲ, ಎಲ್‌ಪಿಜಿ ಅಥವಾ ಬೇರಾವುದೇ ಸೇವೆಗಳು ನಿಂತಿಲ್ಲ. ಈ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಸರ್ಕಾರದ ಕೆಲವು ಪ್ರತಿಕ್ರಿಯೆಗಳು ಒಂದಕ್ಕೊಂದು ಹೋಲಿಕೆಯಾಗುತ್ತಿಲ್ಲ. ಶ್ರೀನಗರದಲ್ಲಿ ಪ್ರತಿಭಟನೆ ನಡೆದಿದೆ ಎನ್ನುವುದನ್ನೇ ಮೊದಲಿಗೆ ಸರ್ಕಾರ ನಿರಾಕರಿಸಿತ್ತು. ಅನಂತರ 1000-1500 ಜನರಿದ್ದರು ಎಂದಿತು. ಅನಂತರ ಗೃಹ ಇಲಾಖೆಯು 20 ಜನರಿಗಿಂತ ಹೆಚ್ಚಿರುವ ಯಾವ ಪ್ರತಿಭಟನೆಗಳೂ ನಡೆದಿಲ್ಲ ಎಂದಿತು. ಇದೇಕೆ?

ನಿರ್ದಿಷ್ಟಘಟನೆ ಬಗ್ಗೆ ಹೇಳುತ್ತಿದ್ದೀರಿ. ಸರ್ಕಾರದಲ್ಲಿ ನಿರ್ದಿಷ್ಟವರದಿಗಾರಿಕೆ ವ್ಯವಸ್ಥೆ ಇದೆ. ಬರವಣಿಗೆ ರೂಪದ, ಸಹಿ ಮತ್ತು ಸ್ಟ್ಯಾಂಪ್‌ ಹೊಂದಿರುವ ಪತ್ರದೊಂದಿಗೆ ನಮ್ಮ ಸಂವಹನ ನಡೆಯುತ್ತದೆ. ಹಾಗಾಗಿ ತಳಮಟ್ಟದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಸಂವಹನ ಕೊರತೆಯೂ ಇರುತ್ತದೆ. ಆದರೆ ಮಾಧ್ಯಮಗಳು ಸರ್ಕಾರದ ವತಿಯಿಂದ ಸ್ಪಷ್ಟಮಾಹಿತಿ ಕ್ರೋಢೀಕರಿಸದೆ ಭಾವಪರವಶವಾಗಿ ವರದಿ ಮಾಡುತ್ತಿವೆ.

- ಶಾಹಿದ್‌ ಇಕ್ಬಾಲ್‌ ಚೌದರಿ, ಶ್ರೀನಗರ ಜಿಲ್ಲಾಧಿಕಾರಿ

 

click me!