
ಕೊಲಂಬೋ[ಏ.25]: ನೆಗೊಂಬಾದ ಸೇಂಟ್ ಸೆಬಾಸ್ಟಿಯನ್ ಚರ್ಚ್ ಗೆ ಆತ್ಮಹತ್ಯಾ ದಾಳಿಕೋರ ಚರ್ಚ್ ಪ್ರವೇಶಿಸುವ ಮುನ್ನ, ರಸ್ತೆಯಲ್ಲಿ ತನಗೆ ಎದುರಾಗಿದ್ದ ಸಣ್ಣ ಬಾಲಕಿಯ ಗಲ್ಲ ಸವರಿ ಮುಂದೆ ಸಾಗಿದ್ದ ಸಂಗತಿ ಬಯಲಾಗಿದೆ.
ದಾಳಿಕೋರ ಸ್ಫೋಟಕ ತುಂಬಿಕೊಂಡಿದ್ದ ಬ್ಯಾಗ್ ಹಾಕಿಕೊಂಡು ಚರ್ಚ್ ನತ್ತ ಸಾಗುತ್ತಿರುತ್ತಾನೆ. ಈ ವೇಳೆ ಸಮೀಪದಲ್ಲೇ ತಂದೆಯೊಂದಿಗೆ ನಡೆದು ಹೋಗುತ್ತಿದ್ದ ಪುಟ್ಟಮಗುವೊಂದು ಎದುರಾಗುತ್ತದೆ. ಈ ವೇಳೆ ದಾಳಿಕೋರ, ಆ ಬಾಲಕಿಯ ಕೆನ್ನೆ ಸವರಿ ಮುಂದೆ ಸಾಗುತ್ತಾನೆ. ಮುಂದೆ ಕೆಲವೇ ನಿಮಿಷಗಳಲ್ಲಿ ಚರ್ಚ್ ನ ಒಳಗೆ ಪ್ರವೇಶಿಸುವ ಆತ, ಪ್ರಾರ್ಥನೆ ವೇಳೆಯೇ ತನ್ನನ್ನು ತಾನು ಸ್ಫೋಟಿಸಿಕೊಂಡು ಹಲವಾರು ಜನರನ್ನು ಬಲಿ ಪಡೆಯುತ್ತಾನೆ.
ಈ ಎಲ್ಲಾ ದೃಶ್ಯಗಳು, ಚರ್ಚ್ ಸಮೀಪ ಮತ್ತು ಚರ್ಚ್ ನಲ್ಲಿ ಅಳವಡಿಸಿದ್ದ ಸಿಸಿಟೀವಿಯಲ್ಲಿ ಸೆರೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.