ಬ್ರೇಕಪ್ ಆದ ಪ್ರೇಮಿಗಳಿಗೆ Valentine's Day ಬಂಪರ್ ಆಫರ್!

Published : Feb 13, 2019, 04:23 PM IST
ಬ್ರೇಕಪ್ ಆದ ಪ್ರೇಮಿಗಳಿಗೆ Valentine's Day ಬಂಪರ್ ಆಫರ್!

ಸಾರಾಂಶ

Valentine's Dayಗೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಪ್ರೇಮಿಗಳೆಲ್ಲಾ ಈ ದಿನವನ್ನು ವಿಭಿನ್ನವಾಗಿ ಆಚರಿಸಲು ಸಜ್ಜಾಗಿದ್ದು, ಉಡುಗೊರೆ ಖರೀದಿ ಆರಂಭವಾಗಿದೆ. ಆದರೆ ಇಲ್ಲೊಂದು ಕಡೆ ಪ್ರೇಮಿಗಳ ದಿನದಂದು ಭಗ್ನ ಪ್ರೇಮಿಗಳಿಗೆ ಆಫರ್ ಬಿಡುಗಡೆ ಮಾಡಲಾಗಿದೆ. ಅಷ್ಟಕ್ಕೂ ಆಫರ್ ಏನು? ಇಲ್ಲಿದೆ ವಿವರ

ನಿಮಗೆಲ್ಲಾ ಕರೀನಾ ಕಪೂರ್ ಖಾನ್ ಹಾಗೂ ಶಾಹಿದ್ ಕಪೂರ್ ನಟನೆಯ ಸೂಪರ್ ಹಿಟ್ ಸಿನಿಮಾ ಜಬ್ ವಿ ಮೆಟ್ ನೆನಪಿರಬಹುದು. ಈ ಸಿನಿಮಾದಲ್ಲಿ ಬರುವ ಒಂದು ದೃಶ್ಯದಲ್ಲಿ ಶಾಹಿದ್ ಕಪೂರ್, ಕರೀನಾ ಕಪೂರ್ ಗೆ ತನ್ನ ಪ್ರಿಯತಮನನ್ನು ಮರೆಯಲು ಅತ್ಯತ್ತಮ ಸಲಹೆಯೊಂದನ್ನು ನೀಡುತ್ತಾ, ಆತನ ಫೋಟೋಗೆ ಬೆಂಕಿ ಹಚ್ಚಿ ಫ್ಲಶ್ ಮಾಡಲು ತಿಳಿಸುತ್ತಾರೆ. ಇದೀಗ Valentine's Day ಸಂದರ್ಭದಲ್ಲಿ ದೆಹಲಿಯ ಬಾರ್ ಒಂದು ಭಗ್ನ ಪ್ರೇಮಿಗಳಿಗೆ ಇಂತಹುದ್ದೇ ಆಫರ್ ಒಂದನ್ನು ನೀಡುತ್ತಿದೆ. ಹಾಗಾದ್ರೆ ಆಫರ್ ಏನು ಗಿಫ್ಟ್ ನೀಡಲಿದೆ? ಇಲ್ಲಿದೆ ವಿವರ.

ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ ನಲ್ಲಿರುವ Gastronomica Kitchen & Bar ಇನ್ನೂ ಸಿಂಗಲ್ ಆಗಿರುವ ಹಾಗೂ ಬ್ರೇಕಪ್ ಆದವರಿಗೆ Valentine's Day ಯಂದು ಉಚಿತವಾಗಿ ಒಂದು ಶಾಟ್ ನೀಡಲಿದೆ. ಅದರೆ ಇದಕ್ಕಾಗಿ ನೀವು 3 ಸರಳ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಮೊದಲನೆಯದಾಗಿ ನಿಮ್ಮ ಮಾಜಿ ಪ್ರೇಮಿಯ ಅತ್ಯಂತ ಕೆಟ್ಟ ಫೋಟೋ ಹುಡಕಬೇಕು. ಎರಡನೆಯದಾಗಿ ಅದನ್ನು ಪ್ರಿಂಟ್ ಮಾಡಿಸಬೇಕು ಹಾಗೂ ಕೊನೆಯದಾಗಿ ಅದನ್ನು ಬೆಂಕಿ ಹಚ್ಚಿ ಸುಡಬೇಕು.

ಇನ್ನು ಈ ಬಾರಿಯ Valentine's Day ಯಂದು ಯಾರೆಲ್ಲಾ ಪಾರ್ಟ್ನರ್ ಗಳನ್ನು ಹೊಂದಿಲ್ಲ ಅವರಿಗೂ ಈ ಆಫರ್ ನೀಡಲಾಗುತ್ತಿದೆ. ಅದೇನಿದ್ದರೂ ಪ್ರೇಮಿಗಳ ದಿನದಂದು ಭಗ್ನ ಪ್ರೇಮಿಗಳಿಗೂ ಆಫರ್ ನೀಡಿದ ಈ ಬಾರ್ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!