ಸ್ವಿಗ್ಗಿ ಆಹಾರದಲ್ಲಿ ರಕ್ತಸಿಕ್ತ ಬ್ಯಾಂಡೇಜ್‌: ಕ್ಷಮೆಯಾಚಿಸಿದ ಕಂಪನಿ

By Web DeskFirst Published Feb 13, 2019, 1:20 PM IST
Highlights

ಇತ್ತೀಚೆಗೆ ಜೊಮ್ಯಾಟೋ ಡೆಲಿವರಿ ಬಾಯ್ ಆರ್ಡರ್ ಮಾಡಿದ ಆಹಾರವನ್ನು ದಾರಿ ಮಧ್ಯೆಯೇ ಟೇಸ್ಟ್ ನೋಡಿದ್ದ ವೀಡಿಯೋ ವೈರಲ್ ಆಗಿತ್ತು. ಈ ಬೆನ್ನಲ್ಲೇ ಈಗ ಸ್ವಿಗ್ಗಿ ಮೂಲಕ ತರಿಸಿದ ಆಹಾರದಲ್ಲಿ ರಕ್ತಸಿಕ್ತ ಬ್ಯಾಂಡ್ ಏಡ್ ಕಾಣಿಸಿದೆ. ಇದಕ್ಕೆ ಸ್ವಿಗ್ಗಿ ತೆಗೆದುಕೊಂಡು ಕ್ರಮವೇನು?

ಚೆನ್ನೈ: ಆನ್‌ಲೈನ್‌ ಮೂಲಕ ತರಿಸಿದ ಆಹಾರ ಸೇವನೆಗೂ ಮುನ್ನ ಎಚ್ಚರ. ಚೆನ್ನೈನಲ್ಲಿ ವ್ಯಕ್ತಿಯೊಬ್ಬ ಇತ್ತೀಚೆಗೆ ತರಿಸಿದ ಆಹಾರದಲ್ಲಿ ರಕ್ತದ ಕಲೆ ಇರುವ ಬ್ಯಾಂಡೇಜ್‌ವೊಂದು ಪತ್ತೆಯಾಗಿದೆ. 

ಇತ್ತೀಚೆಗಷ್ಟೇ ಜೊಮ್ಯಾಟೋ ಫುಡ್ ಡೆಲಿವರಿ ಬಾಯ್, ಮಾರ್ಗ ಮಧ್ಯೆಯೇ ಪೊಟ್ಟಣದಿಂದ ಆಹಾರ ತಿಂದ ವೀಡಿಯೋ ವೈರಲ್ ಆಗಿತ್ತು. ಈ ಬೆನ್ನಲ್ಲೇ ಇದೀಗ ಸ್ವೀಗ್ಗಿ ಆಹಾರದಲ್ಲಿಯೂ ದೋಷ ಕಂಡು ಬಂದಿದೆ.

ಬಾಲಮುರುಗನ್‌ ದೀನ ದಯಾಳ್‌ ಎಂಬುವವರು ಇತ್ತೀಚೆಗೆ ಆನ್‌ಲೈನ್‌ ಮೂಲಕ ಆಹಾರ ಪೂರೈಸುವ ‘ಸ್ವಿಗ್ಗಿ’ ಫುಡ್ ಆ್ಯಪ್‌ನ ಮೂಲಕ ಸ್ಥಳೀಯ ಹೋಟೆಲ್‌ವೊಂದರಿಂದ ಚಿಕನ್‌ ಶೆಜ್ವಾನ್‌ ಚಾಪ್ಯೂಯಿ ಆರ್ಡರ್‌ ಮಾಡಿದ್ದರು. ಆದರೆ, ಅದನ್ನು ಅರ್ಧ ಖಾಲಿ ಮಾಡಿದ ಬಳಿಕ ರಕ್ತದ ಕಲೆ ಇರುವ ಬ್ಯಾಂಡೇಜ್‌ವೊಂದು ಪತ್ತೆಯಾಗಿದೆ. ಈ ಕುರಿತು ಫೆ.10ರಂದು ಆತ ಫೋಟೋ ಸಮೇತ ಫೋಸ್‌ಬುಕ್‌ನಲ್ಲಿ ಸ್ವಿಗ್ಗಿಯನ್ನು ಟ್ಯಾಗ್‌ ಮಾಡಿ ಪೋಸ್ಟ್‌ ಹಾಕಿದ್ದಾನೆ.

ಆ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ಹೋಟೆಲ್‌ ಹಾಗೂ ಸ್ವಿಗ್ಗಿ ಕಂಪನಿಯ ಬೇಜವಾಬ್ದಾರಿಯುತ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇಂಥದ್ದೊಂದು ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸ್ವಿಗ್ಗಿ ಗ್ರಾಹಕರಲ್ಲಿ ಕ್ಷಮೆಯಾಚಿಸಿದ್ದು, ಇನ್ನು ಮುಂದೆ ಹಾಗಾದಂತೆ ಎಚ್ಚರದಿಂದ ಇರುವ ಭರವಸೆ ನೀಡಿದೆ. ಅಲ್ಲದೇ ಇಂಥ ಆಹಾರ ಪೂರೈಸಿದ ರೆಸ್ಟೋರೆಂಟ್‌ ಅನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
 

click me!