ಟ್ರಬಲ್ ಶೂಟರ್ ಗೆ ಟ್ರಬಲ್ , ಮುಂದಿದೆ ಭಾರೀ ಗಂಡಾಂತರ!

By Web DeskFirst Published Jun 25, 2019, 6:00 PM IST
Highlights

ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರಿಗೆ ನ್ಯಾಯಾಲಯದ ಆದೇಶ ಶಾಕ್ ನೀಡಿದೆ.  ಹವಾಲ, ಹೈಕಮಾಂಡ್ ಕಪ್ಪ, ತೆರಿಗೆ ವಂಚನೆ ಆರೋಪದಿಂದ‌ ಕೈಬಿಡುವಂತೆ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ  ವಜಾ ಮಾಡಿದೆ.

ಬೆಂಗಳೂರು[ಜೂ. 25] ಜಲಸಂಪನ್ಮೂಲ ಸಚಿವ, ಕರ್ನಾಟಕ ದೋಸ್ತಿ ಸರಕಾರದ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರಿಗೆ ಟ್ರಬಲ್ ಶುರುವಾಗಿದೆ.

ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮಂಗಳವಾರದ ಆದೇಶ ಡಿಕೆಶಿ ಆತಂಕಕ್ಕೆ ಮೂಲ ಕಾರಣ. ಹವಾಲ, ಹೈಕಮಾಂಡ್ ಕಪ್ಪ, ತೆರಿಗೆ ವಂಚನೆ ಆರೋಪದಿಂದ‌ ತಮ್ಮನ್ನು ಕೈಬಿಡುವಂತೆ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ  ವಜಾ ಮಾಡಿದೆ.

'ಡಿಕೆಶಿ ಎಲ್ಲಿದ್ದೀಯಪ್ಪಾ ಎನ್ನುತ್ತಾರೆ ಬಳ್ಳಾರಿ ಜನ'

ಯಾವ ಪ್ರಕರಣ?: 3 ಪ್ರಕರಣಗಳಿಂದ ಮುಕ್ತರಾಗಿದ್ದ ಡಿಕೆಶಿಗೆ 4ನೇ ಪ್ರಕರಣದಲ್ಲಿ ಸಂಕಷ್ಟ ಎದುರಾಗಿದೆ. ಪ್ರಕರಣದಿಂದ ಡಿಕೆಶಿ ಹೆಸರು ಕೈಬಿಡಲು ನ್ಯಾಯಾಧೀಶ ರಾಮಚಂದ್ರ ಹುದ್ದರ್ ನಿರಾಕರಿಸಿದ್ದಾರೆ. ಹಾಗಾಗಿ ಡಿಕೆಶಿ ಮೇಲಿನ ಪ್ರಕರಣದ ವಿಚಾರಣೆ ಮುಂದುವರಿಯಲಿದೆ.

ಡಿ.ಕೆ.ಶಿವಕುಮಾರ್ ದೆಹಲಿ ಫ್ಲ್ಯಾಟ್ ನಲ್ಲಿ ಸಿಕ್ಕಿದ್ದ ಹಣ ಸಂಕಷ್ಟ ತಂದಿದೆ.  ಐಟಿ ಇಲಾಖೆ ದಾಖಲಿಸಿದ್ದ ನಾಲ್ಕನೇ ಪ್ರಕರಣ ಡಿಕೆಶಿಗೆ ಸುತ್ತಿಕೊಂಡಿದೆ. ಆಗಸ್ಟ್ 2017 ರಲ್ಲಿ ಡಿಕೆಶಿಗೆ ಸಂಬಂಧಿಸಿದ್ದ ವಿವಿಧ ಆಸ್ತಿಗಳ  ಮೇಲೆ  ದಾಳಿ ನಡೆಸಿದ್ದ ಐಟಿ ಇಲಾಖೆ ಪ್ರಕರಣ ದಾಖಲಿಸಿಕೊಂಡಿತ್ತು.

click me!