ಸ್ಪೀಕರ್ ರಮೇಶ್ ಕುಮಾರ್ ಶಾಸಕರಿಗೆ ಪಾಠ ಮಾಡಿದ್ದು ಯಾಕೆ?

First Published Jul 2, 2018, 8:40 PM IST
Highlights

ವಿಧಾನಸೌಧದಲ್ಲಿಯೂ ಶಿಸ್ತು ತರಲು ಮುಂದಾಗಿರುವ ಸ್ಪೀಕರ್ ರಮೇಶ್ ಕುಮಾರ್ ಬಜೆಟ್ ಅಧಿವೇಶನದ ಆರಂಭದ ದಿನ ಪಕ್ಕಾ ಮೇಸ್ಟ್ರಾಗಿದ್ದರು. ಶಾಸಕರಿಗೆ ಪಾಠ ಮಾಡಿದ ರಮೇಶ್ ಕುಮಾರ್ ಸದನದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂದು ತಿಳಿಹೇಳಿದರು.

ಬೆಂಗಳೂರು[ಜು.2]  ಶಾಸಕರಲ್ಲಿ ಶಿಸ್ತು ತರಲು ಸ್ಪೀಕರ್ ರಮೇಶ್ ಕುಮಾರ್ ಮುಂದಾಗಿದ್ದಾರೆ, ಮೈತ್ರಿ ಸರ್ಕಾರದ ಜಂಟಿ ಅಧಿವೇಶನ ದ ಮೊದಲ ದಿನವೇ ಶಾಸಕರಿಗೆ ಹೆಡ್ ಮಾಸ್ಟರ್ ರೀತಿಯಲ್ಲಿ ಪಾಠ ಮಾಡಿದ್ದಾರೆ.

ಅಧಿವೇಶನ ಆರಂಭವಾಗುವ ಸಮಯಕ್ಕೆ ಸರಿಯಾಗಿ ಎಲ್ಲ ಶಾಸಕರು ಹಾಜರಿರಬೇಕು, ಸಾಕಷ್ಟು ಜನ ಹೊಸದಾಗಿ ಆಯ್ಕೆ ಆಗಿದ್ದೀರಿ. ಹಾಗಾಗಿ ಈಗ ಮನವಿ ಮಾಡ್ತಿದ್ದೇನೆ, ನಂತರ ಆದೇಶ ಮಾಡಬೇಕಾಗುತ್ತದೆ ಎಂದು ರಮೇಶ್ ಕಮಾರ್ ಪಕ್ಕಾ ಮೇಸ್ಟ್ರಂತೆ ಪಾಠ ಮಾಡಿದರು.

ಸದನ ನಡೆಯುವ ವೇಳೆಯಲ್ಲಿ ಮುಖ್ಯಮಂತ್ರಿಗಳ ಬಳಿ ಬಂದು ಅರ್ಜಿ ಹಿಡಿದು ನಿಲ್ಲಬೇಡಿ. ಇದರಿಂದ ಮುಖ್ಯಮಂತ್ರಿಗಳು ಮುಜುಗರಕ್ಕೆ ಒಳಗಾಗುತ್ತಾರೆ, ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಇಂತಹ ಸನ್ನಿವೇಶ ನಡೆಯುತ್ತಿದ್ದುದ್ದನ್ನು ನೋಡಿದ್ದೇನೆ. ಇಂಥ ವಿಚಾರಗಳು ಪುನರಾವರ್ತನೆಯಾದರೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

click me!