ಮಧ್ಯಪ್ರದೇಶದಲ್ಲೂ ಮೈತ್ರಿಗೆ ಸೈ ಎಂದ ಅಖಿಲೇಶ್

First Published Jun 6, 2018, 10:07 PM IST
Highlights

ಮಧ್ಯಪ್ರದೇಶದಲ್ಲಿ ಬಿಜೆಪಿ ಮಣಿಸಲು ಒಂದಾಗ್ತಾವಾ ವಿಪಕ್ಷಗಳು?

ಬಿಜೆಪಿ ವಿರೋಧಿ ಮೈತ್ರಿಕೂಟಕ್ಕೆ ಸೈ ಎಂದ ಅಖಿಲೇಶ್ ಯಾದವ್

ಮೈತ್ರಿಗೆ ಸಮಾಜವಾದಿ ಪಕ್ಷ ಬಾಗಿಲು ತೆರೆದಿದೆ ಎಂದ ಅಖಿಲೇಶ್

ಶಿವರಾಜ್ ಸಿಂಗ್ ಚೌಹಾಣ್ ಆಡಳಿತ ವಿರೋಧಿ ಅಲೆ ಸದ್ಬಳೆಕೆ ಸ್ಕೆಚ್ 

ಲಕ್ನೋ(ಜೂ.6): ವರ್ಷಾಂತ್ಯಕ್ಕೆ ನಡೆಯಲಿರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸುತ್ತಿದ್ದು, ಬಿಜೆಪಿಯನ್ನು ಸೋಲಿಸುವ ಏಕೈಕ ಉದ್ದೇಶದಿಂದ ಮತ್ತೆ ವಿಪಕ್ಷಗಳು ಒಂದಾಗುವ ಎಲ್ಲ ಲಕ್ಷಣ ಗೋಚರಿಸುತ್ತಿದೆ.

ಮಧ್ಯಪ್ರದೇಶದಲ್ಲಿ ಬಿಜೆಪಿ ವಿರೋಧಿ ಮೈತ್ರಿಕೂಟ ರಚನೆಯಾದರೆ ತಮ್ಮ ಪಕ್ಷ ಬೆಂಬಲಿಸಲಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ. ಮಧ್ಯಪ್ರದೇಶದ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಮೈತ್ರಿಕೂಟ ರಚನೆಯಾದರೆ, 2019 ರ ಲೋಕಸಭಾ ಚುನಾವಣೆಗೆ ಸಹಕಾರಿಯಾಗಲಿದೆ. ಒಂದು ವೇಳೆ ಮೈತ್ರಿ ರಚನೆಯಾಗದೇ ಇದ್ದರೆ ತಮ್ಮ ಪಕ್ಷ ರಾಜ್ಯದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತದೆ ಎಂದು ಅಖಿಲೇಶ್ ಸ್ಪಷ್ಟಪಡಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಆಡಳಿತ ವಿರೋಧಿ ಅಲೆ ಇದ್ದು ವಿಪಕ್ಷಗಳಿಗೆ ಗೆಲುವು ಸುಲಭವಾಗಿರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಮತ್ತೊಂದು ಶಾಕ್ ಕೊಡಲು ವಿಪಕ್ಷಗಳು ಒಂದಾಗಿ ಅಬ್ಬರಿಸುವ ಯೋಜನೆ ಸಿದ್ದವಾಗುತ್ತಿದೆ.

click me!