ರಾಹುಲ್, ಸೋನಿಯಾಗಾಗಿ ಎಸ್ಪಿ-ಬಿಎಸ್‌ಪಿಯಿಂದ ಇದೆಂಥಾ ತ್ಯಾಗ?

By Web DeskFirst Published Jul 19, 2018, 4:39 PM IST
Highlights

ಲೋಕಸಭಾ ಚುನಾವಣೆ ಬಿಸಿ ಇದಾಗಲೆ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಲ್ಲ ವಿಪಕ್ಷಗಳು ಒಂದಾಗಿವೆ. ಲೋಕಸಭಾ ಚುನಾವಣೆಯಲ್ಲಿ ಯಾರು ಯಾರನ್ನು ಬೆಂಬಲಿಸುತ್ತಾರೆ ಎಂಬುದು ಸದ್ಯದ ಪ್ರಶ್ನೆ.

ಲಕ್ನೋ[ಜು.19] ಲೋಕಸಭಾ ಚುನಾವಣೆ ಎಂದ ತಕ್ಷಣ ರಾಹುಲ್ ಮತ್ತು ಸೋನಿಯಾ ಸ್ಪರ್ಧೆ ಮಢುವ ಅಮೇಥಿ ಮತ್ತು ರಾಯ್ ಬರೇಲಿ ಕ್ಷೇತ್ರದ ಬಗ್ಗೆ ಹೇಳಲೇಬೇಕು. ಈಗ ನಾವೆಲ್ಲರೂ ಒಂದೇ ಎಂದು ಹೇಳಿಕೊಳ್ಳುತ್ತಿರುವ ಸಮಾಜವಾದಿ[ಎಸ್ಪಿ] ಮತ್ತು ಬಹುಜನ ಸಮಾಜವಾದಿ[ಬಿಎಸ್‌ ಪಿ]  ಪಕ್ಷಗಳು ಕಾಂಗ್ರೆಸ್ ಬೆನ್ನಿಗೆ ನಿಲ್ಲುತ್ತವೆಯೇ? ಸೋನಿಯಾ ಮತ್ತೆ ರಾಹುಲ್ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸುತ್ತವೆಯೇ? ಎಂಬ ಪ್ರಶ್ನೆಯೂ ಅಷ್ಟೆ ಪ್ರಮುಖವಾಗುತ್ತದೆ.

ಮೂಲಗಳು ಹೇಳುವ ಪ್ರಕಾರ ಈ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡಲು ಎಸ್ ಪಿ ಮತ್ತು ಬಿಎಸ್ ಪಿ ನಿರ್ಧಾರ ಮಾಡಿಕೊಂಡಿವೆ. ಅಖಿಲೇಶ್ ಯಾದವ್ ಮತ್ತು ಮಾಯಾವತಿ ಕಾಂಗ್ರೆಸ್ ಗೆ ಬೆಂಬಲ ಸೂಚಿಸಲು ನಿರ್ಧಾರ ಮಾಡಿದ್ದಾರೆ.

ಕಾಡು ಪ್ರಾಣಿಗಳಿಗೂ ಮೋದಿ ಭಾಷಣ ಕೇಳುವ ಅವಕಾಶ!

ಮಹಾ ಘಟಬಂಧನ ಎಂದು ಕರೆದುಕೊಂಡಿರುವ ಮೈತ್ರಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದು ಮಧ್ಯಪ್ರದೇಶದ ವಿಧಾನಸಭೆ ಚುನಾವಣೆ ವೇಳೆ ಬಹಿರಂಗವಾಗಲಿದೆ. ದೊಡ್ಡ ರಾಜ್ಯಗಳಲ್ಲಿ ಸ್ಥಾನ ಹಂಚಿಕೆ ಮಾಡಿಕೊಳ್ಳುತ್ತಾರೋ? ಅಥವಾ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಾರೋ? ಎನ್ನುವುದರ ಅಂತಿಮ ನಿರ್ಧಾರಕ್ಕೆ ಬರಲು ಇನ್ನು ಅನೇಕ ದಿನ ಬೇಕು.

ಒಂದೆಡೆ ಕಾರ್ಯಕರ್ತರಿಗೆ ಸಂದೇಶ ನೀಡುವುದು, ಇಷ್ಟು ದಿನ ಕಾಪಾಡಿಕೊಂಡು ಬಂದ ಸಿದ್ಧಾಂತಗಳನ್ನು ಬದಲಾಯಿಸಿಲ್ಲ ಎಂದು ಜನರಿಗೆ ಹೇಳುವುದು ಜತೆಗೆ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳುವ ಸವಾಲುಗಳು ಆಯಾ ಪಕ್ಷದ ಮೇಲೆ ಇದೆ. 

click me!