
ಶಾರ್ಜಾ[ನ.02] ನಟ, ನಿರ್ದೇಶಕ ಪ್ರಕಾಶ್ ರಾಜ್ ಬರೆದಿರುವ ‘ಇರುವುದೆಲ್ಲವ ಬಿಟ್ಟು’ ಪುಸ್ತಕದ ಮಲಯಾಳಂ ಅವತರಿಣಿಕೆ ಬಿಡುಗಡೆಯಾಗಲಿದೆ. ಶಾರ್ಜಾ ಎಕ್ಸ್ಪೋ ಸೆಂಟರ್ ನಲ್ಲಿ ಪುಸ್ತಕ ಅನಾವರಣವಾಗಲಿದೆ.
ನಟ ಪ್ರಕಾಶ್ ರಾಜ್ ಅವರೊಂದಿಗೆ ಸಂವಾದ ಸಹ ಏರ್ಪಡಿಸಲಾಗಿದೆ. ಪ್ರಕಾಶ್ ರಾಜ್ ಬರೆದಿರುವ ಮೊದಲ ಕನ್ನಡ ಪುಸ್ತಕ ಇದಾಗಿತ್ತು. ಅದನ್ನೇ ಮಲೆಯಾಳಂಗೆ ಭಾಷಾಂತರ ಮಾಡಲಾಗಿದೆ. ಪ್ರಕಾಶ್ ಇಲ್ಲಿಯವರೆಗೆ ಬರೆದಿರುವ ಅಂಕಣಗಳ ಒಟ್ಟು ರೂಪ ಇಲ್ಲಿದೆ.
‘ಇರುವುದೆಲ್ಲವ ಬಿಟ್ಟು’ ಪ್ರಕಾಶ್ ರಾಜ್ ಅಂಕಣಗಳ ಗುಚ್ಛ
ನವೆಂಬರ್ 3, ಶನಿವಾರ ಎಕ್ಸ್ಪೋ ಸೆಂಟರ್ ನ ಇಂಟಲೆಕ್ಚುವಲ್ ಹಾಲ್ ನಲ್ಲಿ ರಾತ್ರಿ 7 ಗಂಟೆಯಿಂದ 8 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ. ಸಮಾಜದ ನೂರೆಂಟು ಮುಖಗಳು, ಸಿನಿಮಾ ಜಗತ್ತಿನ ಒಳ ಹೊರಗು, ಕಲಾವಿದ ರೂಪುಗೊಳ್ಳುವ ಬಗೆ ಎಲ್ಲವನ್ನು ಪುಸ್ತಕ ಒಳಗೊಂಡಿದ್ದು ಒಂದು ಸಾಹಿತ್ಯದ ಅನುಭವಕ್ಕೆ ಶಾರ್ಜಾ ವೇದಿಕೆಯಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.