ಟರ್ಕಿ ನೋಟಿನ ಮೂಲ ಇನ್ನೂ ರಹಸ್ಯ

By Suvarna Web DeskFirst Published Jun 23, 2017, 11:21 AM IST
Highlights

ಕಳೆದ ಎರಡು ವರ್ಷಗಳಿಂದ ತೆಲಂಗಾಣ ರಾಜ್ಯದ ಜಮೀನ್ದಾರ ಚನ್ನಕೇಶವ ರೆಡ್ಡಿಯ ‘ಟರ್ಕಿ ದೇಶದ ಕರೆನ್ಸಿಯ ಕಪ್ಪು, ಬಳಿ ದಂಧೆ' ಮೂಲವು ರಹಸ್ಯವಾಗಿ ಉಳಿದಿದ್ದು, ಈಗ ‘ರೆಡ್ಡಿ ಕೋಟೆ' ಭೇದಿಸಲು ಹಿರಿಯೂರು ಹಾಗೂ ಬೆಂಗಳೂರು ಪೊಲೀಸರು ಕರಸತ್ತು ನಡೆಸಿದ್ದಾರೆ.

ಬೆಂಗಳೂರು: ಕಳೆದ ಎರಡು ವರ್ಷಗಳಿಂದ ತೆಲಂಗಾಣ ರಾಜ್ಯದ ಜಮೀನ್ದಾರ ಚನ್ನಕೇಶವ ರೆಡ್ಡಿಯ ‘ಟರ್ಕಿ ದೇಶದ ಕರೆನ್ಸಿಯ ಕಪ್ಪು, ಬಳಿ ದಂಧೆ' ಮೂಲವು ರಹಸ್ಯವಾಗಿ ಉಳಿದಿದ್ದು, ಈಗ ‘ರೆಡ್ಡಿ ಕೋಟೆ' ಭೇದಿಸಲು ಹಿರಿಯೂರು ಹಾಗೂ ಬೆಂಗಳೂರು ಪೊಲೀಸರು ಕರಸತ್ತು ನಡೆಸಿದ್ದಾರೆ.

ಟರ್ಕಿ ದೇಶದ ನಿಷೇಧಿತ 5 ಲಕ್ಷ ಲಿರಾ ಮುಖಬೆಲೆಯ ನೋಟುಗಳನ್ನು ಅಕ್ರಮವಾಗಿ ಭಾರತೀಯ ರುಪಾಯಿಗೆ ಬದಲಾಯಿಸುವ ಜಾಲದಲ್ಲಿ ರೆಡ್ಡಿ ನಿರಂತನಾಗಿದ್ದು, 2016ರಲ್ಲೇ ಬೆಂಗಳೂರು ಪೊಲೀಸರು ಅವನನ್ನು ಬಂಧಿಸಿದ್ದರು. ಅದೇ ವರ್ಷ ಮತ್ತೆ ಹಿರಿಯೂರಿನಲ್ಲಿ ನೋಟು ಬದಲಾವಣೆ ಯತ್ನದಲ್ಲಿದ್ದಾಗ ಸ್ಥಳೀಯ ಪೊಲೀಸರಿಗೆ ಬಲೆಗೆ ಬಿದ್ದಿದ್ದ. ಆದರೆ ವಿಚಾರಣೆ ವೇಳೆ ತನಗೆ ಲಿರಾ ನೋಟುಗಳು ಲಭ್ಯವಾದ ಕುರಿತು ರೆಡ್ಡಿ ಸ್ಪಷ್ಟಮಾಹಿತಿ ನೀಡಲಿಲ್ಲ ಎಂದು ಚಿತ್ರದುರ್ಗ ಪೊಲೀಸರು ‘ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.

2016ರ ಅಕ್ಟೋಬರ್‌ನಲ್ಲಿ ಚಿತ್ರದುರ್ಗದ ಹಿರಿಯೂರು ಪಟ್ಟಣದ ಲಾಡ್ಜ್‌ನಲ್ಲಿ ತನ್ನ ಮೂವರು ಸ್ನೇಹಿತರ ಜತೆ ಚನ್ನಕೇಶವ ರೆಡ್ಡಿ ಕೊಠಡಿ ಬಾಡಿಗೆ ಪಡೆದು ವಾಸ್ತವ್ಯ ಹೂಡಿದ್ದ. ಈ ತಂಡವು, ಅಂದು ಹೋಟೆಲ್‌ನಲ್ಲಿ ಕುಳಿತು ಹಣ ಬದಲಾವಣೆ ಕುರಿತು ಯಾರೊಂದಿಗೆ ಚರ್ಚಿಸುತ್ತಿತ್ತು. ಆಗ ಬಾತ್ಮೀದಾರರಿಂದ ಲಭ್ಯವಾದ ಮಾಹಿತಿ ಮೇರೆಗೆ ಹೋಟೆಲ್‌ ಮೇಲೆ ದಾಳಿ ನಡೆಸಿ ಚನ್ನಕೇಶವ ರೆಡ್ಡಿನನ್ನು ಬಂಧಿಸಿ, ಟರ್ಕಿ ದೇಶದ 96 ಕರೆನ್ಸಿ ನೋಟುಗಳನ್ನು (ಭಾರತೀಯ ರುಪಾಯಿ ಮೌಲ್ಯ 87.69 ಕೋಟಿ) ಜಪ್ತಿ ಮಾಡಿದ್ದೆವು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ತನ್ನೂರಿನಲ್ಲಿ ತಾನು ಕೃಷಿಕನಾಗಿದ್ದೇನೆ. ನನಗೆ ಸ್ನೇಹಿತ ಯಶೋಧರಾ ಎಂಬಾತನಿಂದ ಟರ್ಕಿ ನೋಟು ಬದಲಾವಣೆ ವ್ಯವಹಾರ ತಿಳಿಯಿತು. ಆದರೆ ಹಣದಾಸೆಗೆ ಈ ನೋಟು ಬದಲಾವಣೆ ದಂಧೆಗಿಳಿದ್ದೆ ಎಂದು ವಿಚಾರಣೆ ವೇಳೆ ರೆಡ್ಡಿ ಹೇಳಿಕೆ ನೀಡಿದ್ದ. ಆದರೆ ತನೆಗೆ ಹೇಗೆ ಟರ್ಕಿ ನಿಷೇಧಿತ ಕರೆನ್ಸಿ ಸಿಕ್ಕಿತು ಎಂಬ ಬಗ್ಗೆ ಖಚಿತ ಮಾಹಿತಿ ನೀಡಲಿಲ್ಲ. ಹೀಗಾಗಿ ಈ ದಂಧೆಯಲ್ಲಿ ಹಣದಾಸೆಗೆ ಆತ ಸಹ ಮಧ್ಯವರ್ತಿ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

click me!