ಕಾರ್ಟೋಸ್ಯಾಟ್-2 ಸೇರಿದಂತೆ ಇಸ್ರೋದಿಂದ 31 ಉಪಗ್ರಹಗಳ ಉಡಾವಣೆ; ಸರ್ಜಿಕಲ್ ಸ್ಟ್ರೈಕ್'ಗೆ ಸಿಗಲಿದೆಯಾ ಪುಷ್ಟಿ?

Published : Jun 23, 2017, 10:42 AM ISTUpdated : Apr 11, 2018, 01:12 PM IST
ಕಾರ್ಟೋಸ್ಯಾಟ್-2 ಸೇರಿದಂತೆ ಇಸ್ರೋದಿಂದ 31 ಉಪಗ್ರಹಗಳ ಉಡಾವಣೆ; ಸರ್ಜಿಕಲ್ ಸ್ಟ್ರೈಕ್'ಗೆ ಸಿಗಲಿದೆಯಾ ಪುಷ್ಟಿ?

ಸಾರಾಂಶ

ಕಳೆದ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ಭಾರತೀಯ ಸೇನಯ ಪಾಕಿಸ್ತಾನದ ಗಡಿಭಾಗದೊಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು ನೆನಪಿರಬಹುದು. ವೈರಿಗಳ ಅಡಗುದಾಣಗಳ ಸ್ಥಳಗಳನ್ನು ನಿಖರವಾಗಿ ಗುರುತಿಸಿ ಸರಿಯಾದ ಸಮಯಕ್ಕೆ ಹೋಗಿ ದಾಳಿ ಮಾಡಿ ವಾಪಸ್ ಬಂದಿದ್ದರು ನಮ್ಮ ಸೈನಿಕರು. ಅಂದಿನ ಕಾರ್ಯಾಚರಣೆಗೆ ನೆರವಾಗಿದ್ದು ಕಾರ್ಟೊಸ್ಯಾಟ್ ಉಪಗ್ರಹದಿಂದ ದೊರೆತ ಡೇಟಾ.

ನವದೆಹಲಿ(ಜೂನ್ 23): ಬಾಹ್ಯಾಕಾಶ ಲೋಕದಲ್ಲಿ ದಿನೇದಿನೇ ಛಾಪು ಮೂಡಿಸುತ್ತಿರುವ ಇಸ್ರೋ ಇಂದು 31 ಸೆಟಿಲೈಟ್'ಗಳನ್ನು ಆಗಸಕ್ಕೆ ಕಳುಹಿಸಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಕೇಂದ್ರದಿಂದ ಪಿಎಸ್'ಎಲ್'ವಿ ಸಿ38 ರಾಕೆಟ್ ಮೂಲಕ ಈ ಎಲ್ಲಾ ಉಪಗ್ರಹಗಳನ್ನು ಉಡಾವಣೆ ಮಾಡಲಾಯಿತು. ಆಕಾಶದಿಂದ ಭೂಪ್ರದೇಶದ ಮೇಲೆ ಕಣ್ಗಾವಲು ಕಾರ್ಯ ನಿರ್ವಹಿಸುವ ಕಾರ್ಟೊಸ್ಯಾಟ್-2 ಉಪಗ್ರಹವೂ ಇದರಲ್ಲಿ ಒಳಗೊಂಡಿದೆ. ಅಮೆರಿಕ, ಚಿಲಿ ಸೇರಿದಂತೆ 15 ರಾಷ್ಟ್ರಗಳಿಗೆ ಸೇರಿದ 29 ಸೆಟಿಲೈಟ್'ಗಳೂ ಇದರಲ್ಲಿವೆ. ಹಾಗೆಯೇ ತಮಿಳುನಾಡಿನ ನೂರುಲ್ ಇಸ್ಲಾಮ್ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಬೆಳೆ ಪರಿಶೀಲನೆ ಮತ್ತು ವಿಪತ್ತು ನಿರ್ವಹಣೆಗೆ ಸಹಾಯಕವಾಗಲೆಂದು ಅಭಿವೃದ್ಧಿಪಡಿಸಿರುವ ಸೆಟಿಲೈಟ್ ಮತ್ತೊಂದಿದೆ.

ಸರ್ಜಿಕಲ್ ಸ್ಟ್ರೈಕ್ ಮತ್ತು ಕಾರ್ಟೊಸ್ಯಾಟ್:
ಕಳೆದ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ಭಾರತೀಯ ಸೇನಯ ಪಾಕಿಸ್ತಾನದ ಗಡಿಭಾಗದೊಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು ನೆನಪಿರಬಹುದು. ವೈರಿಗಳ ಅಡಗುದಾಣಗಳ ಸ್ಥಳಗಳನ್ನು ನಿಖರವಾಗಿ ಗುರುತಿಸಿ ಸರಿಯಾದ ಸಮಯಕ್ಕೆ ಹೋಗಿ ದಾಳಿ ಮಾಡಿ ವಾಪಸ್ ಬಂದಿದ್ದರು ನಮ್ಮ ಸೈನಿಕರು. ಅಂದಿನ ಕಾರ್ಯಾಚರಣೆಗೆ ನೆರವಾಗಿದ್ದು ಕಾರ್ಟೊಸ್ಯಾಟ್ ಉಪಗ್ರಹದಿಂದ ದೊರೆತ ಡೇಟಾ.

ಕಾರ್ಟೊಸ್ಯಾಟ್-2 ವಿಶೇಷತೆ:
ಭಾರತವು ಈಗಾಗಲೇ ಇಂತಹ 5 ಕಾರ್ಟೊಸ್ಯಾಟ್ ಉಪಗ್ರಹಗಳನ್ನು ಆಗಸಕ್ಕೆ ಕಳುಹಿಸಿದೆ. ಈಗ ಮತ್ತೊಂದು ಅಂತಹ ಸ್ಯಾಟಿಲೈಟ್'ನ ಅಗತ್ಯವೇನಿದೆ? ಇವತ್ತು ಆಕಾಶಕ್ಕೆ ಕಳುಹಿಸಲಾಗಿರುವ ಕಾರ್ಟೊಸ್ಯಾಟ್-2 ಸೆಟಿಲೈಟ್ ಹಾಲಿ ಉಪಗ್ರಹಗಳಿಗಿಂತ ಹೆಚ್ಚು ಪ್ರಬಲ ತಂತ್ರಜ್ಞಾನ ಹೊಂದಿದೆ. ಮಿಲಿಟರಿಯ ಜೊತೆಗೆ ಆಂತರಿಕವಾಗಿಯೂ ಅನೇಕ ಚಟುವಟಿಕೆಗಳಿಗೆ ಇದು ನೆರವಾಗಲಿದೆ.

ಭೂಮಿಯಿಂದ 500 ಮೀಟರ್ ಎತ್ತರದ ಕಕ್ಷೆಯಲ್ಲಿ ಸುತ್ತಲಿರುವ ಕಾರ್ಟೋಸ್ಯಾಟ್-2 ಉಪಗ್ರಹವು ಎದುರಾಳಿ ದೇಶಗಳ ಸೇನಾ ಟ್ಯಾಂಕರ್'ಗಳ ಸಂಖ್ಯೆಯನ್ನು ನಿಖರವಾಗಿ ಪತ್ತೆಹಚ್ಚಬಲ್ಲುದು. ಈ ಉಪಗ್ರಹವು ಹೈ ರೆಸಲ್ಯೂಷನ್ ಇಮೇಜ್'ಗಳನ್ನು ಕಳುಹಿಸುತ್ತದೆ. ಇವು ಎಲ್ಲಾ ರೀತಿಯ ಚಟುವಟಿಕೆಗಳಿಗೆ ಸಹಕಾರಿಯಾಗಲಿದೆ. ಬೆಳೆ ಹಾನಿ ಪರಿಶೀಲನೆ, ಪ್ರವಾಹ, ನೆರೆ, ಬರ ಇತ್ಯಾದಿ ಸಂದರ್ಭಗಳಲ್ಲಿ ಈ ಸೆಟಿಲೈಟ್'ನ ಸಹಾಯದಿಂದ ಸರಿಯಾಗಿ ಪರಿಸ್ಥಿತಿಯನ್ನು ಅವಲೋಕಿಸಲು ಸಾಧ್ಯವಿದೆ. ಪ್ರತಿಯೊಂದು ರಾಜ್ಯಗಳಿಗೂ ಈ ಡೇಟಾ ಬೇಕಾಗಿರುವುದರಿಂದ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಟೋಸ್ಯಾಟ್ ಸೆಟಿಲೈಟ್'ಗಳನ್ನು ನಭಕ್ಕೆ ಕಳುಹಿಸುವ ಯೋಜನೆ ಇಸ್ರೋನದ್ದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಿತ್ತೂರು ಕರ್ನಾಟಕಕ್ಕೆ 5 ಸಾವಿರ ಕೋಟಿ ನೀಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ: ಶಾಸಕ ರಾಜು ಕಾಗೆ
ಪುರುಷರಿಗೆ ಮಾತ್ರವಲ್ಲ ಮೊಬೈಲ್‌ ಸೇಫ್ಟಿಗೆ ಬಂದಿದೆ ಕಾಂಡೋಮ್‌, ಏನಿದು USB ಕಾಂಡೋಮ್‌?