ಜನರಿಗೆ ಒಳ್ಳೆಯದಾಗುವುದಿದ್ದರೆ ರಾಜಕೀಯಕ್ಕೆ

Published : Jan 04, 2018, 10:12 PM ISTUpdated : Apr 11, 2018, 12:48 PM IST
ಜನರಿಗೆ ಒಳ್ಳೆಯದಾಗುವುದಿದ್ದರೆ ರಾಜಕೀಯಕ್ಕೆ

ಸಾರಾಂಶ

ನಾಮಕರಣಕ್ಕೆ ದೇಶದ ವಿವಿಧ ರಾಜಮನೆತನಗಳನ್ನು ಕರೆಸುವ ಬಗ್ಗೆಯೂ ಚಿಂತಿಸಲಾಗುತ್ತಿದೆ

ಮೈಸೂರು(ಜ.04): ಮುಂದಿನ ಎರಡ್ಮೂರು ತಿಂಗಳೊಳಗೆ ಮಗುವಿಗೆ ಸೂಕ್ತ ಹೆಸರಿಡಲಾಗುವುದು. ಅದಕ್ಕಾಗಿ ಈಗ ಹುಡುಕಾಟ ನಡೆಸಲಾಗುತ್ತಿದೆ ಎಂದು ಮೈಸೂರು ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಮಕರಣ ಕಾರ್ಯಕ್ರಮವನ್ನು ಮೈಸೂರು ಅರಮನೆ ಅಥವಾ ಬೇರೆಡೆ ನಡೆಸಬೇಕೇ ಎಂಬ ಬಗ್ಗೆ ಕುಟುಂಬದೊಂದಿಗೆ ಕುಳಿತು ಚರ್ಚಿಸಿ ನಂತರ ಹೇಳುತ್ತೇವೆ. ನಾಮಕರಣಕ್ಕೆ ದೇಶದ ವಿವಿಧ ರಾಜಮನೆತನಗಳನ್ನು ಕರೆಸುವ ಬಗ್ಗೆಯೂ ಚಿಂತಿಸಲಾಗುತ್ತಿದೆ ಎಂದರು. ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯಕ್ಕೆ ಬರುವ ಉದ್ದೇಶವಿಲ್ಲ. ಯಾವುದೇ ಪಕ್ಷಗಳು ರಾಜಕೀಯ ಬನ್ನಿ ಎಂದು ಆಹ್ವಾನ ನೀಡಿಲ್ಲ. ಹಾಗಂತ ರಾಜಕೀಯಕ್ಕೆ ಬರುವುದೇ ಇಲ್ಲ ಎಂದಂತಲ್ಲ.  ಯಾವುದೇ ವಿಚಾರವನ್ನು ಊಹಿಸಿ ಹೇಳಲು ಸಾಧ್ಯವಿಲ್ಲ. ನನ್ನ ರಾಜಕೀಯ ಪ್ರವೇಶದಿಂದ ಜನರಿಗೆ ಒಳಿತಾಗಲಿದೆ ಎಂದರೆ ಮಾತ್ರ ಪ್ರವೇಶಿಸುತ್ತೇನೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಖ್ಯಮಂತ್ರಿ ಅಧಿಕಾರ ಹಸ್ತಾಂತರದ ಬಗ್ಗೆ ನಮಗೆ ಏನೂ ಗೊತ್ತಿಲ್ಲ: ಸಚಿವ ರಾಮಲಿಂಗಾರೆಡ್ಡಿ
ಡಿಕೆ ಶಿವಕುಮಾರ್‌ಗೆ ಕೇಂದ್ರ ನಾಯಕತ್ವ ಸ್ಥಾನ : ಕಾಂಗ್ರೆಸ್‌ನಲ್ಲಿ ಕೂಗು