ಅಂತಿಮವಾದ ಕೆಪಿಸಿಸಿ ಅಧ್ಯಕ್ಷರ ಹೆಸರು: ಪಟ್ಟಿಯಲ್ಲಿಲ್ಲ ಡಿಕೆಶಿ ಹೆಸರು !

Published : May 05, 2017, 02:06 PM ISTUpdated : Apr 11, 2018, 12:58 PM IST
ಅಂತಿಮವಾದ ಕೆಪಿಸಿಸಿ ಅಧ್ಯಕ್ಷರ ಹೆಸರು: ಪಟ್ಟಿಯಲ್ಲಿಲ್ಲ ಡಿಕೆಶಿ ಹೆಸರು !

ಸಾರಾಂಶ

ಶಿವಕುಮಾರಂತೂ ಒಂದು ಹೆಜ್ಜೆ ಮುಂದೆ ಹೋಗಿ ಬಿಬಿಎಂಪಿ ಮೇಯರ್ ಪದ್ಮಾವತಿ ಮತ್ತು ಕಾರ್ಪೊರೇಟ್ಸ್ ಗಳ ಮೂಲಕವೂ ಹೈಕಮಾಂಡ್ ಮೇಲೆ ಒತ್ತಡ ತಂದಿದ್ದರು. ಆದರೂ ವರ್ಕೌಟ್ ಆಗಿಲ್ಲ ಎನ್ನಲಾಗಿದೆ.

ಬೆಂಗಳೂರು(ಮೇ.05): ಕೆಪಿಸಿಸಿಗೆ ನೂತನ ಸಾರಥಿ ಯಾರಾಗ್ತಾರೆ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೂತನ ಸಾರಥಿ ಯಾರು ? ಗದ್ದುಗೆ ಗುದ್ದಾಟದಲ್ಲಿ ಗೆದ್ದೋರು ಯಾರು. ಬಿದ್ದೋರು ಯಾರು ? ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಾಕಷ್ಟು ಆಕಾಂಕ್ಷಿಗಳ ನಡುವೆ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಕೊನೆಗೂ ಅಧ್ಯಕ್ಷ ಸ್ಥಾನ ಪಡೆದುಕೊಳ್ಳಲು ಸಕ್ಸಸ್ ಆಗಿದ್ದಾರೆ ಎಂದು ಹೇಳಬಹುದು. ಉತ್ತರ ಕರ್ನಾಟಕ ಭಾಗ ಮತ್ತು ಲಿಂಗಾಯತ ಸಮುದಾಯಕ್ಕೆ ಅಧ್ಯಕ್ಷ ಸ್ಥಾನವನ್ನ ನೀಡಬೇಕು ಅನ್ನೋ ಸಿಎಂ ಸಿದ್ದರಾಮಯ್ಯ ಮಾತಿಗೆ ಹೈಕಮಾಂಡ್ ಒಪ್ಪಿದೆ ಎನ್ನಲಾಗಿದೆ.

ಇಂಧನ ಸಚಿವ ಡಿ ಕೆ ಶಿವಕುಮಾರ್, ಎಸ್.ಆರ್. ಪಾಟೀಲ್, ಮುನಿಯಪ್ಪ ಇವರು ಕೂಡಾ ಅಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್ ಮೇಲೆ ಸಾಕಷ್ಟು ಒತ್ತಡ ಹೇರಿದ್ದರು. ಶಿವಕುಮಾರಂತೂ ಒಂದು ಹೆಜ್ಜೆ ಮುಂದೆ ಹೋಗಿ ಬಿಬಿಎಂಪಿ ಮೇಯರ್ ಪದ್ಮಾವತಿ ಮತ್ತು ಕಾರ್ಪೊರೇಟ್ಸ್ ಗಳ ಮೂಲಕವೂ ಹೈಕಮಾಂಡ್ ಮೇಲೆ ಒತ್ತಡ ತಂದಿದ್ದರು. ಆದರೂ ವರ್ಕೌಟ್ ಆಗಿಲ್ಲ ಎನ್ನಲಾಗಿದೆ.

ಆದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಚಿವ ಎಂ ಬಿ ಪಾಟೀಲ್ ಹೆಸರು ಫೈನಲ್ಲಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಎನ್ನಲಾಗಿದೆ. ಸೋಮವಾರ ರಾಜ್ಯ ಕಾಂಗ್ರೆಸ್ ನೂತನ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮೂರು ದಿನಗಳ ಕಾಲ ವಿವಿಧ ಮುಖಂಡರ ಸಭೆ ನಡೆಸಲಿದ್ದು, ನೂತನ ಅಧ್ಯಕ್ಷರ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎನ್ನಲಾಗಿದೆ. ಬಳಿಕ  ಸಮನ್ವಯ ಸಮಿತಿ ಸಭೆ ನಡೆಸಿ, ಆ ಸಭೆಯಲ್ಲಿ ಅಧ್ಯಕ್ಷರ ಹೆಸರನ್ನು ಘೋಷಣೆ ಮಾಡ್ತಾರೆ ಎನ್ನಲಾಗಿದೆ. ಆ ಮೂಲಕ ಬಹಳ ದಿನದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರು ಅನ್ನೋ ಕುತೂಹಲಕ್ಕೆ ಬ್ರೇಕ್ ಬೀಳಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೆಲ್ಫಿ& ಶೇಕ್‌ಹ್ಯಾಂಡ್‌ಗೆ 10 ಲಕ್ಷ : ಇಂಡಿಯಾ ಟೂರ್ ಮಾಡಿದ ಮೆಸ್ಸಿಗೆ ಆಯೋಜಕರು ಕೊಟ್ಟಿದ್ದು ಎಷ್ಟು ಕೋಟಿ
ರೈಲು ಪ್ರಯಾಣಿಕರಿಗೆ ಶಾಕ್, ಡಿಸೆಂಬರ್ 26ರಿಂದ ಟಿಕೆಟ್ ದರ ಹೆಚ್ಚಳ ಘೋಷಿಸಿದ ಭಾರತೀಯ ರೈಲ್ವೇ