ಯುನಿವರ್ಸಿಟಿಗಳ ಫೇಕ್ ಸರ್ಟಿಫಿಕೇಟ್ ಮಾರಾಟ ಮಾಡಿ ಜನರಿಗೆ ಪಂಗನಾಮ ಹಾಕ್ತಾ ಇದ್ದ ಖದೀಮರು ಪೊಲೀಸರ ಬಲೆಗೆ!

By Suvarna Web DeskFirst Published May 5, 2017, 12:08 PM IST
Highlights

ಅದು ಪಂಚ ಪಾಂಡವರ ತಂಡ. ಯಾವುದೇ ಕೋರ್ಸ್ ಮಾಡ್ಬೇಕು ಅಂದ್ರೆ ಯುನಿವರ್ಸಿಟಿಗೆ ಹೋಗಿ ಟೈಂ ವೇಸ್ಟ್ ಮಾಡ್ಬೇಕಾಗಿಲ್ಲ. ಬದಲಿಗೆ ಕೈತುಂಬ ಹಣ ಕೊಟ್ರೆ ಸಾಕು ಯಾವ ಕೋರ್ಸ್ ಕೇಳ್ತೀರೋ, ಯಾವ ಯುನಿವರ್ಸಿಟಿ ಹೆಸರು ಹೇಳ್ತೀರೋ ಆ ಯುನಿವರ್ಸಿಟಿಯ ಸರ್ಟಿಫಿಕೇಟನ್ನ ಪಂಚ ಪಾಂಡವರು ಕ್ಷಣಾರ್ಧದಲ್ಲಿ ಕೊಟ್ಟು ಬಿಡ್ತಾರೆ. ಬಟ್ ಇದೀಗ ನಕಲಿ ಸರ್ಟಿಫಿಕೇಟ್ ಕೊಡ್ತಾ ಇದ್ದವ್ರು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರು (ಮೇ.05): ಅದು ಪಂಚ ಪಾಂಡವರ ತಂಡ. ಯಾವುದೇ ಕೋರ್ಸ್ ಮಾಡ್ಬೇಕು ಅಂದ್ರೆ ಯುನಿವರ್ಸಿಟಿಗೆ ಹೋಗಿ ಟೈಂ ವೇಸ್ಟ್ ಮಾಡ್ಬೇಕಾಗಿಲ್ಲ. ಬದಲಿಗೆ ಕೈತುಂಬ ಹಣ ಕೊಟ್ರೆ ಸಾಕು ಯಾವ ಕೋರ್ಸ್ ಕೇಳ್ತೀರೋ, ಯಾವ ಯುನಿವರ್ಸಿಟಿ ಹೆಸರು ಹೇಳ್ತೀರೋ ಆ ಯುನಿವರ್ಸಿಟಿಯ ಸರ್ಟಿಫಿಕೇಟನ್ನ ಪಂಚ ಪಾಂಡವರು ಕ್ಷಣಾರ್ಧದಲ್ಲಿ ಕೊಟ್ಟು ಬಿಡ್ತಾರೆ. ಬಟ್ ಇದೀಗ ನಕಲಿ ಸರ್ಟಿಫಿಕೇಟ್ ಕೊಡ್ತಾ ಇದ್ದವ್ರು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಈತನ ಹೆಸರು  ಕುನಾಲ್ ಕುಮಾರ್ ಮಂಡಲ್. ಈತ ಬೆಂಗಳೂರು ಮೂಲದವನು. ಇನ್ನೊಬ್ಬನ ಹೆಸರು ದೀಪಾಂಕರ್ ಸೇನ್. ಈತ ಕೂಡ ಬೆಂಗಳೂರು ಮೂಲದವನೇ. ದೆಹಲಿ ಮೂಲದ ಸಂದೇಶ್ ಅಗರ್ ವಾಲ್, ಸೌರಬ್ ಕುಮಾರ್ ಶರ್ಮಾ, ಬೆಂಗಳೂರು ಮೂಲದ ಶ್ರೀಮತಿ ಅರುಣಾ. ಇವ್ರೆಲ್ಲ ಯಾವುದೇ ದೇಶದ ಯುನಿವರ್ಸಿಟಿಯ ಯಾವುದೇ ಕೋರ್ಸ್ ಇರ್ಲಿ ಲಕ್ಷ ಲಕ್ಷ ಹಣ ಕೊಟ್ರೆ ಸರ್ಟಿಫಿಕೇಟ್ ರೆಡಿ ಮಾಡಿ ಕೊಡ್ತಾರೆ.

ಬೆಂಗಳೂರಿನಲ್ಲಿ 2 ವರ್ಷಗಳಿಂದ ಈ ದಂಧೆ ನಡೆಸುತ್ತಿದ್ದು, ಎಂ.ಜಿ ರಸ್ತೆಯಲ್ಲಿರೋ ಮಣಿಪಾಲ್ ಸೆಂಟರ್’ನಲ್ಲಿ ಕಚೇರಿ ಹೊಂದಿದ್ದಾರೆ. ಬೆಂಗಳೂರಿನ ಸಾತ್ವಿಕ್ ಎನ್ನುವವನು ಸರ್ಟಿಫಿಕೇಟ್’ಗಾಗಿ ಹೋದಾಗಲೇ ಸಿಸಿಬಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಈ ಐದು ಜನರನ್ನ ಬಂಧಿಸಿದ್ದಾರೆ. ಈ ಆರೋಪಿಗಳು ಕಾನ್ಪುರದ ಛತ್ರಪತಿ ಶಿವಾಜಿ ಮಹರಾಜಾ ಯುನಿವರ್ಸಿಟಿ, ಅಲಾಹಾಬಾದ್ ವಿಶ್ವವಿದ್ಯಾಲಯ, ಆಗ್ರಾದ ಡಾ. ಭೀಮರಾವ್ ಅಂಬೇಡ್ಕರ್ ಯೂನಿವರ್ಸಿಟಿ, ದೆಹಲಿಯ ಮೊನಾಡ್ ಯುನಿವರ್ಸಿಟಿ ಸೇರಿದಂತೆ 50 ಕ್ಕೂ ಹೆಚ್ಚು ಯುನಿವರ್ಸಿಟಿಯ ಫೇಕ್ ಸರ್ಟಿಫಿಕೇಟ್​ ರೆಡಿ ಮಾಡಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದರು.

ಬಂಧಿತರಿಂದ ಪರೀಕ್ಷಾ ಪ್ರಾಧಿಕಾರಗಳ ಒಟ್ಟು 732 ಮುದ್ರಿತ ಅಂಕಪಟ್ಟಿ ಹಾಗೂ 836 ಖಾಲಿ ಪ್ರತಿಗಳು ಒಟ್ಟು 1568 ನಕಲಿ ಅಂಕಪಟ್ಟಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಆರೋಪಿಗಳು ಮೂರು ವರ್ಷಗಳಲ್ಲಿ ಈಗಾಗಲೇ 1 ಲಕ್ಷ 60 ಸಾವಿರ ನಕಲಿ ಅಂಕಪಟ್ಟಿಗಳನ್ನ ದೇಶಾದ್ಯಂತ ಮಾರಾಟ ಮಾಡಿದ್ದಾರೆ. ಸ್ಪೇಷಲಿ ಎಂಬಿಎ ಹಾಗೂ ಎಂಟೆಕ್ ಪದವಿ ಸರ್ಟಿಫಿಕೇಟ್​'ಗಾಗಿ 1 ಲಕ್ಷ ಚಾರ್ಜ್ ಮಾಡುತ್ತಿದ್ದರು. ಇನ್ನು ಬೇರೆ ಪದವಿಗಳ ಸರ್ಟಿಫಿಕೇಟ್​ಗಾಗಿ 50 ಲಕ್ಷ ಚಾರ್ಜ್ ಮಾಡ್ತಾ ಇದ್ರು. ಫೇಕ್​ ಸರ್ಟಿಫಿಕೇಟ್​ ಮಾಡಿಕೊಡುವ ಜಾಲದಲ್ಲಿ ಕೇವಲ ಈ ಐದು ಜನ ಮಾತ್ರವಲ್ಲ ಬದಲಿಗೆ ಇನ್ನು 50 ಜನ ಏಜೆಂಟರ್ ಗಳು ದೇಶಾದ್ಯಂತ ಇದ್ದಾರೆ. ಹೀಗಾಗಿ ಯಾವುದೇ ರಾಜ್ಯದ ಪೊಲೀಸರು ಮಾಹಿತಿ ಕೇಳಿದ್ದಲ್ಲಿ ನಾವು ಸಹಾಯಕ್ಕಾಗಿ ತಯಾರಾಗಿದ್ದೇವೆ ಅಂತಾರೆ ಬೆಂಗಳೂರು ಪೊಲೀಸರು.

ಆರೋಪಿಗಳು ವಿದ್ಯಾರ್ಥಿಗಳನ್ನ ಸೆಳೆಯೋದಕ್ಕೆ ಪತ್ರಿಕೆಗಳಲ್ಲಿ ಜಾಹೀರಾತು ಕೊಡುತ್ತಿದ್ದರು. ಈ ಜಾಹೀರಾತಿನಲ್ಲಿ ಕೇವಲ ಮೇಲ್ ಐಡಿಗಳನ್ನ ಮಾತ್ರ ಕೊಡುತ್ತಿದ್ದರು. ಸದ್ಯ ಇಂತದೊಂದು ಜಾಲ ಇದೆ ಅನ್ನೋದು ಪೊಲೀಸ್ರಿಗೆ ಗೊತ್ತಾಗಿದ್ದು, ಐದು ಜನ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳ ವಿಚಾರಣೆಯಿಂದ ಈ ಜಾಲದ ಹಿಂದೆ ಯಾರು ಯಾರು ಇದಾರೆ ಅನ್ನೋದು ಗೊತ್ತಾಗಲಿದೆ.

click me!