‘ಸುಳ್ಳು ಪತ್ತೆ ಯಂತ್ರದ ಎದುರು ಸೋನಿಯಾ ಕುಳ್ಳಿರಿಸಬೇಕು’

By Web DeskFirst Published Nov 21, 2018, 9:09 PM IST
Highlights

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನ ಮುಗಿದ ಕೆಲವೇ ದಿನದಲ್ಲಿ ಸಿಖ್ ನರಮೇಧದ ವಿಚಾರ ತಲೆ ಎತ್ತಿದೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಇನ್ನೊಮ್ಮೆ ಸುಳ್ಳು ಪತ್ತೆ ಯಂತ್ರದ ಎದಿರು ಕುಳ್ಳಿರಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ನವದೆಹಲಿ[ನ.21]  1984ರ ಸಿಖ್ ನರಮೇಧ ಪ್ರಕರಣಕ್ಕೆ ಸಂಬಂಧಿಸಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಿ ಪ್ರಶ್ನಿಸಬೇಕು ಎಂದು ಪಂಜಾಬಿನ ಮಾಜಿ ಉಪ ಮುಖ್ಯಮಂತ್ರಿ  ಸುಖಬೀರ್‌ ಸಿಂಗ್‌ ಬಾದಲ್‌ ಆಗ್ರಹಿಸಿದ್ದಾರೆ.

ವಿಶೇಷ ತನಿಖಾ ತಂಡ ಸೋನಿಯಾ ಗಾಂಧಿಗೆ ಸಮನ್ಸ್‌ ಜಾರಿ ಮಾಡಬೇಕು. ಸೋನಿಯಾ ಗಾಂಧಿ ಅವರ ಪತಿ (ರಾಜೀವ್‌ ಗಾಂಧಿ) ಅಧಿಕಾರದಲ್ಲಿದ್ದಾಗ ಸೋನಿಯಾ ನಿವಾಸದಲ್ಲೇ 1984ರ ನರಮೇಧದ ಸಂಚು ರೂಪಿಸಲಾಗಿತ್ತು ಎಂಬ ಆರೋಪವನ್ನು ಮಾಡಿದ್ದಾರೆ.

1984ರ ಸಿಖ್ ನರಮೇಧದ ಅಪರಾಧಿಗಳಾದ ಯಶ್‌ಪಾಲ್‌ ಸಿಂಗ್‌ಗೆ ಮರಣ ದಂಡನೆ ಮತ್ತು ನರೇಶ್‌ ಸೆಹರಾವತ್‌ ಗೆ ಜೀವಾವಧಿ ಶಿಕ್ಷೆ ವಿಧಿಸಿ ದಿಲ್ಲಿ ಕೋರ್ಟ್‌ ತೀರ್ಪು ನೀಡಿದ ಮರು ದಿನವೇ ಸುಖಬೀರ್‌ ನೀಡಿರುವ ಹೇಳಿಕೆ ಪ್ರಾಮುಖ್ಯ ಪಡೆದಯಕೊಂಡಿದೆ.

click me!