ಸುವರ್ಣನ್ಯೂಸ್ ಸಹೋದರ ಸಂಸ್ಥೆ mynation.comನ ಮುಖ್ಯ ಸಂಪಾದಕ ಅಭಿಜಿತ್ ಮಜುಮ್ದಾರ್ ಹಾಗೂ ರಕ್ಷಣಾ ವರದಿಗಾರ ಅಜಿತ್ ದುಬೇಗೆ ನೀಡಿರುವ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ದೇಶದ ಭದ್ರತೆ ಹಾಗೂ ಅಂತರಾಷ್ಟ್ರೀಯ ಸಂಬಂಧಗಳ ಕುರಿತು ಸವಿವರವಾಗಿ ಮಾತನಾಡಿದ್ದಾರೆ.
ನವದೆಹಲಿ: ನ.26, ಭಾರತ ಹಾಗೂ ಇಡೀ ವಿಶ್ವವೇ ಬೆಚ್ಚಿ ಬಿದ್ದ ದಿನ. ಪಾಕಿಸ್ತಾನ ಬೆಂಬಲಿತ ಉಗ್ರರು ಮುಂಬೈನಲ್ಲಿ ಅಟ್ಟಹಾಸ ಮೆರೆದು 164 ಅಮಾಯಕ ಜನರು ಮತ್ತು ಭದ್ರತಾ ಸಿಬ್ಬಂದಿಗಳನ್ನು ಬಲಿಪಡೆದಿದ್ದರು . ಆ ಕರಾಳ ದಿನಕ್ಕೆ ಇನ್ನು ನಾಲ್ಕು ದಿನಗಳು ಬಾಕಿಯಿದೆ.
ಈ ಸಂದರ್ಭದಲ್ಲಿ ಸುವರ್ಣನ್ಯೂಸ್ ಸಹೋದರ ಸಂಸ್ಥೆ ಮೈನೇಶನ್.ಕಾಂನ ಮುಖ್ಯ ಸಂಪಾದಕ ಅಭಿಜಿತ್ ಮಜುಮ್ದಾರ್ ಹಾಗೂ ರಕ್ಷಣಾ ವರದಿಗಾರ ಅಜಿತ್ ದುಬೇಗೆ ನೀಡಿರುವ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ದೇಶದ ಭದ್ರತೆ ಹಾಗೂ ಅಂತರಾಷ್ಟ್ರೀಯ ಸಂಬಂಧಗಳ ಕುರಿತು ಸವಿವರವಾಗಿ ಮಾತನಾಡಿದ್ದಾರೆ.
ಕಾಶ್ಮೀರ ಬಿಕ್ಕಟ್ಟು, ಸರ್ಜಿಕಲ್ ದಾಳಿ, ಭಯೋತ್ಪಾದನೆ, ಪಾಕಿಸ್ತಾನ ಸರ್ಕಾರದ ನೀತಿಗಳನ್ನು ವಿಶ್ಲೇಷಿಸಿರುವ ಜನರಲ್ ರಾವತ್, ಸೇನೆಯ ಸನ್ನದ್ಧತೆ, ಕಾರ್ಯವೈಖರಿ ಹಾಗೂ ಇನ್ನಿತರ ಹಲವಾರು ಮಹತ್ವದ ವಿಚಾರಗಳನ್ನು ‘ಫೇಸ್ ದಿ ನೇಶನ್’ ನಲ್ಲಿ ಚರ್ಚಿಸಿದ್ದಾರೆ.
ಪಾಕಿಸ್ತಾನದ ನೂತನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಬಾಯಿಮಾತಿನಲ್ಲಿ ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಬಗ್ಗೆ ಮಾತನಾಡುತ್ತಿರಬಹುದು, ಆದರೆ ಪಾಕಿಸ್ತಾನದ ಸೇನೆಯು ಗಡಿಯಾಚೆ ಭಯೋತ್ಪಾದನೆ ಹಾಗೂ ಭಯೋತ್ಪಾದಕರ ಒಳನುಸುಳುವಿಕೆಯನ್ನು ಮುಂದುವರಿಸಿದೆ, ಎಂದು ಜನರಲ್ ರಾವತ್ ಹೇಳಿದ್ದಾರೆ.
ಇಮ್ರಾನ್ ಖಾನ್ ಪ್ರಧಾನಿಯಾದ ಬಳಿಕ ಪಾಕಿಸ್ತಾನದ ವರ್ತನೆಯಲ್ಲಿ ಹೆಚ್ಚಿಗೇನು ಬದಲಾವಣೆಯಾಗಿಲ್ಲ; ಭಯೋತ್ಪಾದಕರ ಒಳನುಸುಳುವಿಕೆ ಮುಂದುವರಿದಿದೆ. ಪಾಕಿಸ್ತಾನ ಚುನಾವಣೆ ಬಳಿಕವೂ, ನಮ್ಮ ಯೋಧರು ನುಸುಳುಕೋರರನ್ನು ಗಡಿಯಲ್ಲೂ, ಕಣಿವೆಯಲ್ಲೂ ಹೊಡೆದುರುಳಿಸುತ್ತಿದ್ದಾರೆ, ಎಂದು ಜನರಲ್ ರಾವತ್ ವಿವರಿಸಿದ್ದಾರೆ.
ಪಾಕಿಸ್ತಾನದಲ್ಲಿ ಅವಿತಿದ್ದ ಒಸಮಾ ಬಿನ್ ಲಾದೆನ್‌ನನ್ನು ಹುಡುಕಿ ಅಮೆರಿಕಾ ಯಾವ ರೀತಿ ಹತ್ಯೆಗೈತೋ, ಅದೇ ರಿತಿ 26/11ನ ಮಾಸ್ಟರ್ ಮೈಂಡ್‌ಗಳಿಗೆ ಗತಿ ಕಾಣಿಸಲು ಭಾರತಕ್ಕೆ ಸಾಧ್ಯವಿಲ್ಲವೇ ಎಂಬ ಪ್ರಶ್ನೆಗೆ, ನಮಗದರ ಸಾಮರ್ಥ್ಯವಿದೆ, ಆದರೆ ಅಪರಾಧಿಗಳನ್ನು ಶಿಕ್ಷಿಸಲು ಇನ್ನಿತರ ವಿಧಾನಗಳೂ ಇವೆ, ಎಂದು ರಾವತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ .
ಮುಂದುವರಿದು, ಪಾಕಿಸ್ತಾನವು ಇಂದು ಬರೇ ಅಮೆರಿಕಾದಿಂದ ಮಾತ್ರವಲ್ಲ ಜಗತ್ತಿನ ಹಲವಾರು ರಾಷ್ಟ್ರಗಳಿಂದ ಛೀಮಾರಿಗೊಳಗಾಗಿದೆ. ಏಕೆಂದರೆ, ನಾವು ಆ ರೀತಿ ಆಗಬೇಕೆಂದು ಬಯಸಿದ್ದೆವು. ಪಾಕಿಸ್ತಾನವಿಂದು ಜಾಗತಿಕ ಸಮುದಾಯದಿಂದ ಬೇರ್ಪಟ್ಟಿರುವುದಕ್ಕೆ, ಭಾರತದ ರಾಜಕೀಯ ನಾಯಕತ್ವ ಹಾಗೂ ರಾಜತಾಂತ್ರಿಕತೆಯು ಬಹಳ ಮುಖ್ಯ ಪಾತ್ರವನ್ನು ವಹಿಸಿದೆ, ಎಂದು ಜನರಲ್ ರಾವತ್ ಅಭಿಪ್ರಾಯಪಟ್ಟಿದ್ದಾರೆ.
ಮುಂಬೈ ದಾಳಿಯ ಅಪರಾಧಿಗಳನ್ನು ಭಾರತವು ಈವರೆಗೆ ಶಿಕ್ಷಿಸದಿರಬಹುದು, ಆದರೆ ಅಪರಾಧಿಗಳಿಗೆ ಆ ದೇಶದಲ್ಲೇ ಶಿಕ್ಷೆಯಾಗುವಂತೆ ಅಥವಾ ಮುಂದಿನ ಪ್ರಕ್ರಿಯೆಗಾಗಿ ಭಾರತಕ್ಕೆ ಹಸ್ತಾಂತರಿಸುವಂತೆ ಅಂತರಾಷ್ಟ್ರೀಯ ಸಮುದಾಯವು ಖಚಿತಪಡಿಸುತ್ತಿದೆ, ಎಂದು ರಾವತ್ ಭಾರತದ ಪ್ರಯತ್ನಗಳ ಮೇಲೆ ಬೆಳಕುಚೆಲ್ಲಿದ್ದಾರೆ.
ಜನರಲ್ ರಾವತ್ ಪ್ರಕಾರ, ಸಪ್ಟೆಂಬರ್ 2016ರ ಉರಿ ದಾಳಿ ಮತ್ತೊಂದು ದೊಡ್ಡದಾಳಿ. ಅದಕ್ಕೆ ಸೇನೆಯು ಸರ್ಜಿಕಲ್ ದಾಳಿಯ ಮೂಲಕ ಪ್ರತ್ತ್ಯುತ್ತರ ನೀಡಿದೆ. ಆ ಮೂಲಕ, 26/11 ಮಾದರಿಯ ದಾಳಿಗೆ ಭಾರತವು ಯಾವ ರೀತಿ ಪ್ರತಿಕ್ರಯಿಸಬಲ್ಲುದು ಎಂಬುವುದನ್ನು ಕೂಡಾ ಪಾಕಿಸ್ತಾನಕ್ಕೆ ಪಾಠ ಕಲಿಸಿದೆ.
1.3 ಮಿಲಿಯನ್ ಸಿಬ್ಬಂದಿಗಳನ್ನು ಹೊಂದಿರುವ ವಿಶ್ವದ 2ನೇ ಅತೀದೊಡ್ಡ, ಅತೀ ಶಿಸ್ತಿನ ಹಾಗೂ ಅತೀ ಸಮರ್ಥ ಸೇನಾಶಕ್ತಿಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ರ Exclusive ಹಾಗೂ ಸಂಪೂರ್ಣ ಸಂದರ್ಶನ ಇಲ್ಲಿದೆ.
ಮುಂದುವರಿದ ಭಾಗ:
ಮಾಧ್ಯಮಗಳು ಬಿಂಬಿಸಿದ್ದಷ್ಟು ದೊಡ್ಡ ತಪ್ಪು ಮೇಜರ್ ಲೀತುಲ್ ಗೊಗೊಯಿ ಎಸಗಿಲ್ಲ: ಜನರಲ್ ರಾವತ್
ಉಗ್ರರ ಅಂತ್ಯಸಂಸ್ಕಾರದಲ್ಲಿ ಕ್ಷೀಣಿಸುತ್ತಿರುವ ಜನರ ಪಾಲ್ಗೊಳ್ಳುವಿಕೆಯೇ ಫಲಿತಾಂಶದ ಪ್ರತಿಬಿಂಬ: ಜನರಲ್ ರಾವತ್