ಉಗ್ರ ಹಫೀಜ್ ವಿರುದ್ಧ ಧ್ವನಿ ಎತ್ತಿದ ತಂದೆ, ದುಬೈಯಲ್ಲಿರುವ ಮಗನಿಗೆ ಜೀವ ಬೆದರಿಕೆ!

Published : Oct 07, 2016, 03:52 AM ISTUpdated : Apr 11, 2018, 12:39 PM IST
ಉಗ್ರ ಹಫೀಜ್ ವಿರುದ್ಧ ಧ್ವನಿ ಎತ್ತಿದ ತಂದೆ, ದುಬೈಯಲ್ಲಿರುವ ಮಗನಿಗೆ ಜೀವ ಬೆದರಿಕೆ!

ಸಾರಾಂಶ

ಬೀದರ್(ಅ.07): ಬೀದರ್'ನ ವ್ಯಕ್ತಿಯೊಬ್ಬ ಪಾಕಿಸ್ತಾನದ ಉಗ್ರ ಹಫೀಜ್ ಮಹ್ಮದ್ ಸಯೀದ್ ವಿರುದ್ಧ ಮಾತನಾಡಿದ್ದು, ಇದೀಗ ದುಬೈಯಲ್ಲಿರುವ ಆತನ ಮಗನಿಗೆ ಜೀವ ಬೆದರಿಕೆ ಕರೆಗಳು ಬರಲಾರಂಭಿಸಿವೆ.

ಬೀದರ್​​​​ನ ಬದ್ರುದ್ದಿನ್ ಕಾಲೋನಿ ನಿವಾಸಿ ಅಲಿಖಾನ್ ಅವರು ಹಲವಾರು ಜನಪರ ಹೋರಾಟ ನಡೆಸಿಕೊಂಡು ಜನರ ಸಂಕಷ್ಟಗಳಿಗೆ ಧ್ವನಿಯಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಜೆಒಡಿ ಮುಖ್ಯಸ್ಥ ಹಫೀಸ್ ಮಹ್ಮದ್ ಸಯೀದ್ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರು. ಇದರಿಂದ ಆಕ್ರೋಶಿತರಾದ ಬೀದರ್'ನ ಕರ್ನಾಟಕ ಟೈಗರ್ಸ್ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಅಲಿಖಾನ್ ಅವರು ಸಯೀದ್ ಹಾಗೂ ಪಾಕಿಸ್ತಾನ ವಿರುದ್ಧ ಮಾತನಾಡಿದ್ದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದವು. ಇದರ ಪರಿಣಾಮವಾಗಿ ಇದೀಗ ದುಬೈಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಅಲಿಖಾನ್ ಪುತ್ರ ಅಮೀರ್ ಖಾನ್'ಗೆ ದುಬೈನಲ್ಲಿ ನೆಲೆಸಿರುವ ಪಾಕ್ ವಲಸಿಗರಿಂದ ಜೀವ ಬೆದರಿಕೆ ಕರೆಗಳು ಬರಲಾರಂಭಿಸಿವೆ.

ಕರೆ ಹಾಗೂ ವಾಟ್ಸ್'ಆಪ್ ಸಂದೇಶ ಕಳುಹಿಸಿರುವ ಪಾಕ್ ವಲಸಿಗರು 'ನಿಮ್ಮ ತಂದೆ ಹಫೀಜ್ ವಿರುದ್ಧ ಮಾತನಾಡಿದ್ದಾರೆ, ನೀನು ಸಾಯಬೇಕಾಗುತ್ತದೆ.' ಎಂದು ಜೀವ ಬೆದರಿಕೆಯೊಡ್ಡಿದ್ದಾರೆ. ಇದರಿಂದ ಆತಂಕಗೊಂಡಿರುವ ಅಲಿಖಾನ್ ತನ್ನ ಮಗನನ್ನು ರಕ್ಷಿಸುವಂತೆ ಜಿಲ್ಲಾ ವರಿಷ್ಠಾಧಿಕಾರಿಯ ಮೊರೆ ಹೋಗಿದ್ದಾರೆ.

ವೈರಲ್ ಆದ ವಿಡಿಯೋದಲ್ಲಿ ತಂದೆ ಅಲಿಖಾನ್ ಮಾತನಾಡಿರುವುದೇನು?   

'ಹಫೀಜ್​ ಸಯೀದ್ ನೀನು ಅಪ್ಪನಿಗೆ ಹುಟ್ಟಿದ್ದರೆ ಗಡಿ ಬಳಿ ಬಾ, ಇಲಿ ರೀತಿ ಮಾತನಾಡಬೇಡ. ಮೀಡಿಯಾ ಮುಂದೆ ಬಂದು ಮಾತನಾಡು. ನೀನು ಹೆಚ್ಚಿನ ಬುದ್ದಿವಂತಿಕೆ ತೋರಿಸಬೇಡ. ನನಗೆ ಮೋದಿ ಸರ್ಕಾರ ಅನುಮತಿ ಕೊಟ್ಟರೆ ಗಡಿ ಹತ್ತಿರ ಹೋಗಿ  ನಿನ್ನನ್ನು ಸದೆಬಡಿತ್ತೀನಿ. ನೀನು ಭಾರೀ ಬುದ್ಧಿವಂತ ಅಂದು ಕೊಂಡಿದ್ದೀಯಾ? ನಿನ್ನ ಕೈಯಲ್ಲಿ  ಏನೂ ಆಗಲ್ಲ. ನಿನ್ನನ್ನು ಹೊಡೆಯಲು ಸಣ್ಣ ಹುಡುಗ ಸಾಕು. ನಾವು ಜೋರಾಗಿ ಕೆಮ್ಮಿದರೆ ನಿನ್ನ ಹೃದಯ ಸ್ತಬ್ಧವಾಗುತ್ತದೆ' ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ಹಿಂದೂ ರಾಷ್ಟ್ರ, ಇದಕ್ಕೆ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ; ಮೋಹನ್ ಭಾಗವತ್
ಕಲಬುರಗಿ: ಮಠದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಸ್ವಾಮೀಜಿ! ಎಸ್ಕೇಪ್ ಆಗಿದ್ದಾತ ಮರಳಿ ಬಂದು ಕೃತ್ಯ