ಉಗ್ರ ಹಫೀಜ್ ಸಯೀದ್ ವಿರುದ್ಧ ಮಾತನಾಡಿದ್ದಕ್ಕೆ ಪುತ್ರನಿಗೆ ಜೀವ ಬೆದರಿಕೆ!

Published : Oct 07, 2016, 03:33 AM ISTUpdated : Apr 11, 2018, 12:39 PM IST
ಉಗ್ರ ಹಫೀಜ್ ಸಯೀದ್ ವಿರುದ್ಧ ಮಾತನಾಡಿದ್ದಕ್ಕೆ ಪುತ್ರನಿಗೆ ಜೀವ ಬೆದರಿಕೆ!

ಸಾರಾಂಶ

ಪಾಕಿಸ್ತಾನ ಉಗ್ರ ಹಫೀಜ್​​ ಸಯೀದ್​​ ವಿರುದ್ಧ ಮಾತನಾಡಿದ್ದಕ್ಕೆ ಪುತ್ರನಿಗೆ ಜೀವ ಬೆದರಿಕೆ ಬೀದರ್​​​ನ ಕರ್ನಾಟಕ ಟೈಗರ್ಸ್​​​ ಹೋರಾಟ ಸಮಿತಿ ರಾಜ್ಯಾಧ್ಯಕ್ಷನ ಪುತ್ರನಿಗೆ ಸಂಕಷ್ಟ ಹಫೀಜ್ ಮಹ್ಮದ್ ಸಯೀದ್ ವಿರುದ್ಧ  ಮಾತನಾಡಿರುವ ವಿಡಿಯೋ ವೈರಲ್​ ದುಬೈನಲ್ಲಿ ಕೆಲಸ ಮಾಡುತ್ತಿರುವ ಅಲಿಖಾನ್​​ ಪುತ್ರನಿಗೆ ಜೀವ ಬೆದರಿಕೆ

ಬೀದರ್ (ಅ.07): ಪಾಕಿಸ್ತಾನ ಉಗ್ರ ಹಫೀಜ್​​ ಮಹಮ್ಮದ ಸಯೀದ್​​​​ ವಿರುದ್ಧ ಮಾತನಾಡಿದ್ದಕ್ಕೆ ಪುತ್ರನಿಗೆ ಜೀವ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿದೆ.

ಬೀದರ್​​​ನ ಕರ್ನಾಟಕ ಟೈಗರ್ಸ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಅಲಿ ಖಾನ್ ಅವರು ಸಾಮಾಜಿಕ ಜಾಲ ತಾಣದಲ್ಲಿ ಜೆಯುಡಿ ಮುಖ್ಯಸ್ಥ ಹಫೀಜ್ ಮಹ್ಮದ್ ಸಯೀದ್ ವಿರುದ್ಧ  ಮಾತನಾಡಿದ್ದ  ವಿಡಿಯೋ ವೈರಲ್​ ಆಗಿದೆ.

ಇದಕ್ಕೆ ಪ್ರತೀಕಾರವೆಂಬಂತೆ ದುಬೈನಲ್ಲಿ ಕೆಲಸ ಮಾಡುವ ಅಲಿಖಾನ್​​ ಪುತ್ರ ಅಮೀರ್​​​ ಖಾನ್​​ ಜೀವಕ್ಕೆ ಕುತ್ತು ಬಂದಿದೆ.

ಬೀದರ್​​​​ನ ಬದ್ರುದ್ದಿನ್ ಕಾಲೋನಿ ನಿವಾಸಿ ಅಲಿಖಾನ್ ಅವರು ಹಲವಾರು ಜನಪರ ಹೋರಾಟ ನಡೆಸಿಕೊಂಡು ಜನರ ಸಂಕಷ್ಟಗಳಿಗೆ ಧ್ವನಿಯಾಗಿದ್ದಾರೆ.

ದೇಶದ ಬಗ್ಗೆ ಹಫೀಜ್​ ಸಯೀದ್​​ ಪ್ರಚೋದನಾತ್ಮಕ ಹೇಳಿಕ್ಕೆ ನೀಡಿದ್ದಕ್ಕೆ ಆಕ್ರೋಶಗೊಂಡು, ಅಲಿಖಾನ್ ಹಫೀಜ್  ಹಾಗೂ ಪಾಕಿಸ್ತಾನ  ವಿರುದ್ಧ ಮಾತನಾಡಿದ್ದಾರೆ. ಅಲಿಖಾನ್ ಮಗ ಆಮಿರ ಖಾನ್ ದುಬೈಲ್ ನಲ್ಲಿ ಇಂಜಿನಿಯರ್ ಕೆಲಸ ಮಾಡುತ್ತಿದ್ದು, ತಂದೆ ಹೇಳಿಕೆಯನ್ನು ದುಬೈನಲ್ಲಿ ನೆಲೆಸಿರುವ ಪಾಕಿಸ್ತಾನ ವಲಸಿಗರು ನೋಡಿದ್ದಾರೆ.

ನಿಮ್ಮ ತಂದೆ ಹಫೀಜ್​ ವಿರುದ್ಧ ಮಾತಾಡಿದ್ದಾರೆ, ನೀನು ಸಾಯಬೇಕಾಗುತ್ತೆ ಅಂತ ಎಚ್ಚರಿಕೆ ಇರುವ ಆಡಿಯೋ ಕ್ಲೀಪ್​​ ಅನ್ನು ಅಮೀರ್​​ಗೆ ಪಾಕಿಸ್ತಾನಿ ಉಗ್ರ ಸಂಘಟನೆ ಕಳುಹಿಸಿದೆ.

ಮಗನ ಬೆದರಿಕೆಯಿಂದ ಆತಂಕಗೊಂಡಿರುವ ಅಲಿಖಾನ್​​, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊರೆ ಹೋಗಿದ್ದಾರೆ. ಇದಷ್ಟೆ ಅಲ್ಲ ಅಲಿಖಾನ್ ಅವರಿಗೂ ಕೂಡ ದೂರವಾಣಿ ಮೂಲಕ  ಜೀವ ಬೇದರಿಕೆ ಒಡ್ಡಿದ್ದಾರೆಂದು ಹೇಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ಕೇಂದ್ರದಲ್ಲಿ ಏರ್‌ಟ್ಯಾಕ್ಸಿ ಪರೀಕ್ಷೆ ಆರಂಭಿಸಿದ ಸರ್ಲಾ ಏವಿಯೇಷನ್‌, 2028ಕ್ಕೆ ಲಾಂಚ್‌
ದುಬೈ ಮರುಭೂಮಿಯಲ್ಲಿ ನಿಗೂಢ ಜೀವಿ ಪತ್ತೆ: ಪ್ರವಾಸಿ ಮಹಿಳೆ ಹಂಚಿಕೊಂಡ ವಿಡಿಯೋ ಭಾರೀ ವೈರಲ್!