
ಹೈದ್ರಾಬಾದ್ : ದೇಶದ ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಚುನಾವಣಾ ಕಣಗಳು ರಂಗೇರುತ್ತಿವೆ. ತೆಲಂಗಾಣದಲ್ಲಿಯೂ ಕೂಡ ಚುನಾವಣೆ ನಡೆಯುತ್ತಿದ್ದು ಈ ನಿಟ್ಟಿನಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟ ಮಾಡಿದೆ.
ಈ ವೇಳೆ ಅನೇಕ ಮುಖಂಡರಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಮುಖಂಡರು ಪಕ್ಷದಿಂದ ಹೊರ ನಡೆಯುವ ತೀರ್ಮಾನ ಮಾಡಿದ್ದಾರೆ. ಅಲ್ಲದೇ ಇವರೆಲ್ಲರೂ ಕೂಡ ಬಂಡಾಯವಾಗಿ ಸ್ಪರ್ಧೆ ಮಾಡುವತ್ತ ನಿರ್ಧಾರ ಮಾಡುತ್ತಿದ್ದಾರೆ.
ಕಾಂಗ್ರೆಸ್ ಈಗಾಗಲೇ ಕೆಲ ಪಕ್ಷಗಳೊಂದಿಗೆ ಮೖತ್ರಿ ಮಾಡಿಕೊಂಡು ಅಧಿಕಾರಿ ಹಿಡಿಯಲೇಬೇಕು ಎನ್ನುವ ಛಲವನ್ನು ಹೊಂದಿದ್ದು ಇದೇ ವೇಳೆ ಅನೇಕ ಮುಖಂಡರು ಬಂಡಾಯ ಎದ್ದಿದ್ದು ಒಂದು ರೀತಿ ಶಾಕ್ ನೀಡಿದಂತಾಗಿದೆ.
ಈ ರೀತಿ ಪಕ್ಷದಿಂದ ಹೊರ ನಡೆದವರ ಬಗ್ಗೆ ಮೊದಲೇ ನಮಗೆ ಸುಳಿವಿದ್ದು ಇದರಿಂದ ಪಕ್ಷದ ಮೇಲೆ ಯಾವುದೇ ಪರಿಣಾಮ ಉಂಟಾಗಲು ಸಾಧ್ಯವಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ.
ಡಿಸೆಂಬರ್ 7 ರಂದು ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದ್ದು, 11 ರಂದು ಫಲಿತಾಂಶ ಪ್ರಕಟಗೊಳ್ಳುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ