ಭಾರತದಲ್ಲಿನ ಹಾಲು ಎಷ್ಟು ಸುರಕ್ಷಿತ..?

By Web DeskFirst Published Nov 14, 2018, 11:26 AM IST
Highlights

ನಾವು ನಿತ್ಯ ಉಪಯೋಗಿಸುವ ಹಾಲು ಯಾವ ಪ್ರಮಾಣದಲ್ಲಿ ಸುರಕ್ಷಿತ ಎನ್ನುವ ಪ್ರಶ್ನೆ ಸದಾ ಕಾಡುತ್ತದೆ. ಇದೀಗ ಇದಕ್ಕೆ ಉತ್ತರ ಸಿಕ್ಕಿದ್ದು ಭಾರತದಲ್ಲಿ ತಯಾರಾಗುವ ಹಾಲು ಬಹುತೇಕ ಸುರಕ್ಷಿತ ಎಂದು ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಅಭಯ ನೀಡಿದೆ.

ನವದೆಹಲಿ :  ಹಾಲಿನ ಕಲಬೆರಕೆ ಬಗ್ಗೆ ವ್ಯಾಪಕ ಶಂಕೆಗಳು ವ್ಯಕ್ತವಾಗುತ್ತಿದ್ದರೂ, ‘ಭಾರತದಲ್ಲಿನ ಹಾಲು ಬಹುತೇಕ ಸುರಕ್ಷಿತ. ಗುಣಮಟ್ಟಕ್ಕೆ ಸಂಬಂಧಿಸಿದಂತೆ ದೂರುಗಳು ಇದ್ದರೂ ಕೂಡ ಹೆಚ್ಚಾಗಿ ನಮ್ಮ ದೇಶದ ಹಾಲು ಸುರಕ್ಷಿತವಾಗಿದೆ’ ಎಂದು ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಅಭಯ ನೀಡಿದೆ.

ಪ್ರಾಧಿಕಾರವು ಕೈಗೊಂಡ ‘ರಾಷ್ಟ್ರೀಯ ಕ್ಷೀರ ಗುಣಮಟ್ಟಸಮೀಕ್ಷೆ-2018’ರಲ್ಲಿ ಈ ಅಂಶವು ವ್ಯಕ್ತವಾಗಿದೆ. 6432 ಸ್ಯಾಂಪಲ್‌ಗಳನ್ನು ಸಮೀಕ್ಷೆ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ.

ಒಟ್ಟಾರೆ ನಮೂನೆಗಳಲ್ಲಿ ಶೇ.10ಕ್ಕಿಂತ ಕಡಿಮೆ ನಮೂನೆಗಳು (638) ಕಲಬೆರಕೆಯಿಂದ ಕೂಡಿವೆ. ಇತರ ಶೇ.90ರಷ್ಟುನಮೂನೆಗಳು ಸುರಕ್ಷಿತ ಎಂದು ಸಾಬೀತಾಗಿವೆ ಎಂದು ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪವನ್‌ ಅಗರ್‌ವಾಲ್‌ ಹೇಳಿದ್ದಾರೆ. ಒಟ್ಟಾರೆ ಸ್ಯಾಂಪಲ್‌ಗಳನ್ನು ಗಣನೆಗೆ ತೆಗೆದುಕೊಂಡಾಗ ಕಲಬೆರಕೆ ಪ್ರಮಾಣ ನಗಣ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹಾಲಿನಲ್ಲಿ ಖಾದ್ಯ ಎಣ್ಣೆ, ಗ್ಲೂಕೋಸ್‌, ಯೂರಿಯಾ, ಅಮೋನಿಯಂ ಸಲ್ಫೇಟ್‌- ಸೇರಿದಂತೆ 13 ಅಂಶಗಳನ್ನು ಬರೆಸಲಾಗುತ್ತಿದೆ ಎನ್ನಲಾಗುತ್ತಿದ್ದು, ಇವುಗಳನ್ನು ಪ್ರಾಧಿಕಾರ ಪರಿಶೀಲನೆಗೆ ಒಳಪಡಿಸಿತು. ಒಟ್ಟಾರೆ ಹಾಲಿನ ನಮೂನೆಗಳ ಪೈಕಿ 638ರಲ್ಲಿ ಕಲಬೆರಕೆ ಅಂಶಗಳು ಕಂಡುಬಂದರೂ ಹಾಲಿಗೆ ಹಾಲಿನ ಸುರಕ್ಷತೆಗೇ ಧಕ್ಕೆ ಬರಬಲ್ಲ ನಮೂನೆಗಳು ಪತ್ತೆಯಾಗಿದ್ದು 12 ಮಾತ್ರ ಎಂದು ಅಗರ್‌ವಾಆಲ್‌ ವಿವರಿಸಿದ್ದಾರೆ.

ಆದರೆ ದೇಶದ ಯಾವ ಭಾಗಗಳಲ್ಲಿ ಸಂಗ್ರಹಿಸಿದ ಹಾಲಿನಲ್ಲಿ ಕಲಬೆರಕೆ ಕಂಡುಬಂದಿದೆ ಎಂಬುದರ ಮಾಹಿತಿಯನ್ನು ಅವರು ನೀಡಲಿಲ್ಲ.

click me!