
ಬೆಂಗಳೂರು[ಅ.28] ಮದ್ಯ ತರಾರಿಕೆಯಲ್ಲಿ ಹೆಸರು ಮಾಡಿರುವ ವಿಶಬೋನ್ ಬ್ರೂವರಿ ಬಿಯರ್ ಕಂಪನಿ ಇತ್ತೀಚೆಗೆ ತನ್ನ ಹೊಸ ಬಿಯರ್ಗೆ 'ಗಣೇಶ' ಎಂದು ಹೆಸರಿಟ್ಟಿದ್ದು ವಿವಾದ ಹುಟ್ಟುಹಾಕಿತ್ತು. ಆದರೆ ಸೋಶಿಯಲ್ ಮೀಡಿಯಾ ಒತ್ತಡಕ್ಕೆ ಮಣಿದು ಹಿಂದಕ್ಕೆ ಪಡೆದಿದೆ.
ಮ್ಯಾಂಚೆಸ್ಟರ್ನಲ್ಲಿ ನಡೆದ ಬಿಯರ್ ಉತ್ಸವದಲ್ಲಿ ಭಾರತೀಯ ಮದ್ಯಪಾನಿಯರನ್ನು ಆಕರ್ಷಿಸಲು ಕಂಪನಿಯು ವಿಶೇಷ ಬಿಯರ್ ತಯಾರಿಸಿತ್ತು. ನಿಂಬೆ, ಕೊತ್ತಂಬರಿ ಮತ್ತು ದ್ರಾಕ್ಷಿ ರಸವನ್ನು ಬಳಸಿ ತಯಾರಿಸಿದ್ದಕ್ಕೆ ಗಣೇಶ ಎಂಬ ಹೆಸರು ನೀಡಿದ್ದರು. ಹಿಂದೂ ದೇವರ ಹೆಸರನ್ನು ಮದ್ಯಕ್ಕೆ ಇಟ್ಟಿದ್ದಕ್ಕೆ ವ್ಯಾಪಕ ವಿರೋಧ ಎಲ್ಲಡೆಯಿಂದ ವ್ಯಕ್ತವಾಗಿತ್ತು.
ತಮಾಷೆಯಲ್ಲ ಇದು ಸುಂದರಿಯರ ಗುಪ್ತಾಂಗದಿಂದ ತಯಾರಿಸಿದ ಬಿಯರ್!
ಅಮೆರಿಕ ಮತ್ತು ಇಂಗ್ಲೆಂಡಿನಲ್ಲಿರುವ ಹಿಂದೂ ಸಂಘಟನೆಗಳು ಇದನ್ನು ವಿರೋಧಿಸಿದ್ದವು. ಕಾನೂನು ಹೋರಾಟಕ್ಕೆ ಮುಂದಾಗುವ ಎಚ್ಚರಿಕೆಯನ್ನು ನೀಡಿದ್ದರು. ಇದೆಲ್ಲರ ನಡುವೆ ಸಂಸ್ಥೆ ಹೆಸರು ಕೈಬಿಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.