ಅನುಮತಿ ಇಲ್ಲದೇ ಇಸ್ರೇಲ್ ಖಾಸಗಿ ಜೆಟ್ ಭೂಸ್ಪರ್ಶ: ಸರ್ಕಾರಕ್ಕೆ ಸಂಕಷ್ಟ!

Published : Oct 28, 2018, 05:51 PM IST
ಅನುಮತಿ ಇಲ್ಲದೇ ಇಸ್ರೇಲ್ ಖಾಸಗಿ ಜೆಟ್ ಭೂಸ್ಪರ್ಶ: ಸರ್ಕಾರಕ್ಕೆ ಸಂಕಷ್ಟ!

ಸಾರಾಂಶ

ತುರ್ತು ಭೂಸ್ಪರ್ಶ ಮಾಡಿದ ಇಸ್ರೇಲ್ ಖಾಸಗಿ ಜೆಟ್! 10 ಗಂಟೆಗಳ ಕಾಲ ಸಂಪರ್ಕಕ್ಕೆ ಬಾರದ ವಾಣಿಜ್ಯ ವಿಮಾನ! ಪಾಕಿಸ್ತಾನದಲ್ಲಿ ಸೃಷ್ಟಿಯಾಗಿದೆ ಕೋಲಾಹಲ! ಜೆಟ್ ಭೂಸ್ಪರ್ಶ ಅಲ್ಲಗಳೆದ ಪಾಕಿಸ್ತಾನ ಸರ್ಕಾರ  

ಇಸ್ಲಾಮಾಬಾದ್(ಅ.28): ಪಾಕಿಸ್ತಾನದಲ್ಲಿ ಇಸ್ರೇಲ್ ನ ಖಾಸಗಿ ಜೆಟ್ ಭೂಸ್ಪರ್ಶ ಮಾಡಿದ್ದು ಕೋಲಾಹಲ ಉಂಟು ಮಾಡಿದೆ.   

ಆದರೆ ಪಾಕ್ ಸರ್ಕಾರ ಮಾತ್ರ ಮಾಧ್ಯಮಗಳಿಗೆ ಇಸ್ರೇಲ್ ಜೆಟ್ ಯಾವುದೂ ತನ್ನ ನೆಲದಲ್ಲಿ ಭೂಸ್ಪರ್ಶ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ಈ ಮಧ್ಯೆ ಇಸ್ರೇಲ್ ನ ಪತ್ರಿಕೆಯ ಆಂಗ್ಲ ಆವೃತ್ತಿಯ ಸಂಪಾದಕರೊಬ್ಬರು ಇಸ್ರೇಲ್ ನ ಜೆಟ್ ಪಾಕಿಸ್ತಾನದಲ್ಲಿ ಭೂಸ್ಪರ್ಶ ಮಾಡಿರುವ ಬಗ್ಗೆ ಟ್ವೀಟ್ ಮಾಡಿದ್ದು ಮಾಹಿತಿಯನ್ನೂ ಬಹಿರಂಗಪಡಿಸಿದ್ದಾರೆ. 

ಪಾಕಿಸ್ತಾನದಲ್ಲಿ ಇಳಿದಿದ್ದ ಇಸ್ರೇಲ್ ವಾಣಿಜ್ಯ ವಿಮಾನವೊಂದು 10 ಗಂಟೆಗಳ ಕಾಲ ಸಂಪರ್ಕದಲ್ಲಿ ಸಿಕ್ಕಿರಲಿಲ್ಲ, ಆ ನಂತರ ವಾಪಸ್ ಟೆಲ್ ಅವೀವ್ ಗೆ ಬಂದಿದೆ ಎಂದು ಇಸ್ರೇಲ್ ನ ಪತ್ರಿಕೆಯ ಸಂಪಾದಕರು ಟ್ವೀಟ್ ಮಾಡಿದ್ದಾರೆ. 

ಪಾಕಿಸ್ತಾನ-ಇಸ್ರೇಲ್ ನಡುವೆ ಹೇಳಿಕೊಳ್ಳುವಂತಹ ದ್ವಿಪಕ್ಷೀಯ ಸಂಬಂಧ ಇಲ್ಲ. ಹೀಗಿದ್ದರೂ ಇಸ್ರೇಲ್ ನ ವಿಮಾನವೊಂದು ಇಸ್ಲಾಮಾಬಾದ್ ನಲ್ಲಿ ಬಂದಿಳಿದು 10 ಗಂಟೆಗಳ ಕಾಲ ಸಂಪರ್ಕಕ್ಕೇ ಸಿಗದೇ ಇತ್ತು ಎಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆಯೇ  ಪಾಕಿಸ್ತಾನದಲಿ ಕೋಲಾಹಲ ಉಂಟಾಗಿದೆ. ಪಾಕಿಸ್ತಾನದ ಸರ್ಕಾರ ಸ್ಪಷ್ಟನೆ ನೀಡಿದ ಬಳಿಕವೂ ಪತ್ರಿಕೆಯ ಸಂಪಾದಕ ತನ್ನ ವಾದವನ್ನು ಮುಂದುವರೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಿತ್ತೂರು ಕರ್ನಾಟಕ ಹೆಸರಲ್ಲಿ ಪ್ರತ್ಯೇಕ ರಾಜ್ಯವಾಗಲಿ: ಶಾಸಕ ರಾಜು ಕಾಗೆ ಆಗ್ರಹ
ಸಿಎಂ ಸಿದ್ದರಾಮಯ್ಯ ಹೇಳಿಕೆಯೇ ನಮಗೆ ಅಂತಿಮ ಮಾರ್ಗದರ್ಶನ: ಸಚಿವ ದಿನೇಶ್ ಗುಂಡೂರಾವ್