ಮಧ್ಯ ಪ್ರದೇಶದ ಶಾಲಾ ಮಕ್ಕಳಿಗೆ ಸ್ಮೈಲಿ ಗ್ರೇಡ್

By Suvarna Web DeskFirst Published Jan 26, 2018, 8:14 AM IST
Highlights

ಮಕ್ಕಳ ಮೇಲಿನ ಓದಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಮತ್ತು ಅಂಕಗಳ ವ್ಯತ್ಯಾಸ ಅವರಲ್ಲಿ ಮೂಡಿಸುವ ನಿರಾಸೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮಧ್ಯಪ್ರದೇಶ ಸರ್ಕಾರ ಹೊಸ ಯೋಜನೆ ಜಾರಿಗೆ ಮುಂದಾಗಿದೆ.

ಭೋಪಾಲ್: ಮಕ್ಕಳ ಮೇಲಿನ ಓದಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಮತ್ತು ಅಂಕಗಳ ವ್ಯತ್ಯಾಸ ಅವರಲ್ಲಿ ಮೂಡಿಸುವ ನಿರಾಸೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮಧ್ಯಪ್ರದೇಶ ಸರ್ಕಾರ ಹೊಸ ಯೋಜನೆ ಜಾರಿಗೆ ಮುಂದಾಗಿದೆ.

ಇದರನ್ವಯ, 1 ಮತ್ತು 2ನೇ ತರಗತಿ ಮಕ್ಕಳಿಗೆ ಪರೀಕ್ಷೆಯಲ್ಲಿ ಅವರ ಸಾಧನೆಯನ್ನು ಆಧರಿಸಿ ಅಂಕ ನೀಡುವ ಬದಲು ಸ್ಮೈಲಿ (ನಗುವ ಚಿಹ್ನೆ) ಗ್ರೇಡ್ ನೀಡಲಾಗುವುದು.

ಅಂದರೆ ಉತ್ತಮ ಸಾಧನೆ ಮಾಡಿದ ಮಕ್ಕಳಿಗೆ 3 ಸ್ಮೈಲಿ, ಮಗು ಇನ್ನೂ ಕಲಿಯುವ ಹಂತದಲ್ಲಿದ್ದರೆ 2 ಸ್ಮೈಲಿ, ಮಗು ಕಲಿಕೆಯಲ್ಲಿ ಸಾಕಷ್ಟು ಸುಧಾರಣೆ ಆಗಬೇಕು ಎಂದಿದ್ದಲ್ಲಿ 1 ಸ್ಮೈಲಿ ನೀಡಲಾಗುವುದು.

click me!