ಡಿಸೆಂಬರ್ ತಿಂಗಳಲ್ಲಿ 86,703 ಕೋಟಿ ರು. ಜಿಎಸ್’ಟಿ ಸಂಗ್ರಹ

By Suvarna Web DeskFirst Published Jan 26, 2018, 8:07 AM IST
Highlights

ಎರಡು ತಿಂಗಳ ಇಳಿಕೆಯ ಹಾದಿಯ ಬಳಿಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ಏರಿಕೆ ಹಾದಿಗೆ ಮರಳಿದ್ದು, ಡಿಸೆಂಬರ್’ನಲ್ಲಿ 86,703 ಕೋಟಿ ರು. ಸಂಗ್ರಹವಾಗಿದೆ.

ನವದೆಹಲಿ: ಎರಡು ತಿಂಗಳ ಇಳಿಕೆಯ ಹಾದಿಯ ಬಳಿಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ಏರಿಕೆ ಹಾದಿಗೆ ಮರಳಿದ್ದು, ಡಿಸೆಂಬರ್’ನಲ್ಲಿ 86,703 ಕೋಟಿ ರು. ಸಂಗ್ರಹವಾಗಿದೆ.

2017ರ ಡಿ.ನಿಂದ ಜ.24ರವರೆಗೆ ಜಿಎಸ್‌ಟಿ 86,703 ರು. ಸಂಗ್ರಹವಾಗಿದೆ. ಡಿಸೆಂಬರ್‌ನಲ್ಲಿ 56.30 ಲಕ್ಷ ಜಿಎಸ್‌ಟಿಆರ್ 3 ಬಿ ರಿಟರ್ನ್ಸ್‌ಗಳು ಸಲ್ಲಿಕೆಯಾಗಿವೆ ಎಂದು ಹಣಕಾಸು ಸಚಿವಾಲಯ ಟ್ವೀಟ್ ಮಾಡಿದೆ.

ಸೆಪ್ಟೆಂಬರ್ ನಲ್ಲಿ ಸಂಗ್ರಹವಾದ 92,150 ಕೋಟಿ ರು. ಜಿಎಸ್‌ಟಿಗೆ ಹೋಲಿಸಿದರೆ, ನವೆಂಬರ್‌ನಲ್ಲಿ 80,808 ಕೋಟಿ ರು. ಮತ್ತು ಅಕ್ಟೋಬರ್‌ನಲ್ಲಿ 83,000 ಕೋಟಿ ರು. ಜಿಎಸ್‌ಟಿ ಸಂಗ್ರಹವಾಗುವ ಮೂಲಕ ಇಳಿಕೆ ಕಂಡಿತ್ತು.

click me!