ಪ್ರೀತಿ ಹೇಳಿದ್ರೆ ಕೇತನ್ ಬದುಕ್ತಿದ್ದ, ಲವ್ ಉಳಿಸ್ಕೊಳ್ಳೋಕೆ ಹೀಗೇಕ್ ಮಾಡ್ತಾರೆ ಹುಡುಗಿಯರು?

Published : Jun 27, 2026, 10:24 AM IST
Siya Goyal

ಸಾರಾಂಶ

woman psychology : ಅರೆಂಜ್ ಮ್ಯಾರೇಜ್ ಮೇಲೆ ಈಗ ಭಯ ಶುರುವಾಗಿದೆ. ಮದುವೆ ಆಗಿಲ್ಲ ಅಂದ್ರೂ ಪರವಾಗಿಲ್ಲ ಮದುವೆ ಆಗಿ ಕೊಲೆ ಆಗೋದು ಬೇಡ ಎನ್ನುವ ಆತಂಕದಲ್ಲಿ ಹುಡುಗ್ರಿದ್ದಾರೆ. ಸಿಯಾ ಪ್ರಕರಣದ ನಂತ್ರ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಗಂಭೀರ ಚರ್ಚೆ ಆಗ್ತಿದೆ. 

ಇಬ್ಬರ ಪ್ರೀತಿಯಲ್ಲಿ ಅಮಾಯಕನ ಹತ್ಯೆ ಪ್ರಕರಣ ಹೆಚ್ಚಾಗ್ತಿದೆ. ಪ್ರೀತಿ ಮಾಡೋದು ಒಬ್ಬರನ್ನ, ಮದುವೆ ಆಗೋದು ಇನ್ನೊಬ್ಬರನ್ನ. ನಂತ್ರ ಈ ತ್ರಿಕೋನ ಕಥೆ ಹನಿಮೂನ್ ಮರ್ಡರ್ ನಲ್ಲಿ ಆಂಡ್ ಆಗ್ತಿದೆ. ಈಗ ಪುಣೆಯಲ್ಲಿ ನಡೆದ ಕೇತನ್ ಅಗರ್ವಾಲ್ ಹತ್ಯೆ ನಾನಾ ಪ್ರಶ್ನೆ ಹುಟ್ಟುಹಾಕಿದೆ. ಇನ್ನೊಬ್ಬನನ್ನು ಪ್ರೀತಿ ಮಾಡಿದ್ದ ಸಿಯಾ ಗೋಯಲ್, ಮದುವೆ ನಿರಾಕರಿಸ್ಬಹುದಿತ್ತು, ಕೊಲೆ ಯಾಕೆ ಮಾಡ್ಬೇಕಿತ್ತು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡ್ತಿದೆ.

ಹತ್ಯೆ ಹಿಂದಿರೋ ಕಾರಣ ಏನು? 

ಸಿಯಾ ಗೋಯಲ್ ಹಾಗೂ ಚೇತನ್ ಚೌಧರಿ ಪ್ರೀತಿಯಲ್ಲಿದ್ರು. ಆದ್ರೆ ಸಿಯಾ ಮದುವೆ ಕೇತನ್ ಜೊತೆ ನಿಶ್ಚಯವಾಗಿತ್ತು. ಈ ಮದುವೆ ಇಷ್ಟವಿಲ್ಲದ ಸಿಯಾ, ಪೇಮಿ ಜೊತೆ ಸೇರಿ ಕೇತನ್ ಹತ್ಯೆ ಸಂಚು ರೂಪಿಸಿ ಯಶಸ್ವಿಯಾಗಿದ್ದಾಳೆ. ಸಿಯಾ, ಕೇತನ್ ಜೊತೆ ಮದುವೆ ನಿರಾಕರಿಸಿ, ಚೇತನ್ ಮದುವೆ ಆಗ್ಬಹುದಿತ್ತು, ಅಮಾಯಕ ಕೇತನ್ ಹತ್ಯೆ ಯಾಕೆ ಮಾಡ್ಬೇಕಿತ್ತು ಎನ್ನುವ ಪ್ರಶ್ನೆಗೆ ಮಾನಸಿಕ ತಜ್ಞರು ಉತ್ತರ ನೀಡಿದ್ದಾರೆ.

ಅತಿಯಾದ ಪ್ರೀತಿ-ಕುಟುಂಬದ ಒತ್ತಡ ತಪ್ಪು ನಿರ್ಧಾರಕ್ಕೆ ಕಾರಣ !

 ಮನಶ್ಶಾಸ್ತ್ರಜ್ಞ ಡಾ. ಬಿಂದಾ ಸಿಂಗ್ ಪ್ರಕಾರ, ಇಂಥ ಘಟನೆ ಹಿಂದೆ ಹಲವು ಮಾನಸಿಕ ಮತ್ತು ಸಾಮಾಜಿಕ ಕಾರಣಗಳಿರುತ್ತವೆ ಎನ್ನುತ್ತಾರೆ. ಒಂದು ಹುಡುಗಿಗೆ ಕುಟುಂಬ ಮಾತನಾಡುವ ಸ್ವಾತಂತ್ರ್ಯವನ್ನು ನಿರಾಕರಿಸಿದರೆ, ಅವಳ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರಿರುವುದಿಲ್ಲ.ಆಗ ಅವಳು ಬೇರೆ ಸಂಬಂಧ ಹುಡುಕುತ್ತಾರೆ. ಮನೆಯಲ್ಲಿ ಅವಳು ದೀರ್ಘಕಾಲದ ಉಸಿರುಗಟ್ಟುವಿಕೆ ಮತ್ತು ಒತ್ತಡವನ್ನು ಅನುಭವಿಸ್ತಾಳೆ. ಕೆಲವೊಮ್ಮೆ ಪ್ರೀತಿ ಕ್ರಮೇಣ ಗೀಳಾಗಿ ಬದಲಾಗುತ್ತೆ. ಅಂತಹ ಪರಿಸ್ಥಿತಿಯಲ್ಲಿ, ವ್ಯಕ್ತಿ ತನಗೆ ಬೇರೆ ದಾರಿಯಿಲ್ಲ ಎಂದು ಭಾವಿಸುತ್ತಾನೆ. ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವ ಬದಲು ಆತುರದಲ್ಲಿ ನಿರ್ಧಾರ ತೆಗೆದುಕೊಳ್ತಾನೆ. ಸಾಮಾಜಿಕ ಮಾಧ್ಯಮ ಮತ್ತು ವರ್ಚುವಲ್ ಪ್ರಪಂಚ ಜನರನ್ನು ನಿಜ ಜೀವನದಿಂದ ದೂರವಿಡುತ್ತಿದೆ. ಜನರು ತಾವು ಸೃಷ್ಟಿಸಿಕೊಂಡ ಜಗತ್ತಿನಲ್ಲಿ ಎಷ್ಟು ಮುಳುಗಿರ್ತಾರೆ ಅಂದ್ರೆ ವಾಸ್ತವ ಮತ್ತು ಕಲ್ಪನೆಯ ನಡುವಿನ ವ್ಯತ್ಯಾಸ ಅವರ ಅರಿವಿಗೆ ಬರೋದಿಲ್ಲ. ಆದ್ರೆ ಸಂಪೂರ್ಣ ತನಿಖೆಯಿಲ್ಲದೆ ಯಾವುದೇ ಆರೋಪಿಯ ಮಾನಸಿಕ ಸ್ಥಿತಿಯ ಬಗ್ಗೆ ಯಾವುದೇ ದೃಢವಾದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಆಸ್ಟ್ರೇಲಿಯಾ ಸಂಶೋಧನೆ ಹೇಳೋದೇನು?

 ಇಂತಹ ಪ್ರಕರಣಗಳನ್ನು ಅರ್ಥಮಾಡಿಕೊಳ್ಳಲು, ಆಸ್ಟ್ರೇಲಿಯನ್ ಇನ್ಸ್ಟಿಟ್ಯೂಟ್ ಆಫ್ ಕ್ರಿಮಿನಾಲಜಿ (AIC) 2020 ರಲ್ಲಿ ಮಹಿಳೆಯರಿಂದ ನಡೆಯುವ ಆತ್ಮೀಯ ಸಂಗಾತಿಯ ಹತ್ಯೆಯ ಕುರಿತು ಒಂದು ಪ್ರಮುಖ ಅಧ್ಯಯನವನ್ನು ನಡೆಸಿತ್ತು. ಈ ಸಂಶೋಧನೆಯು 2004 ಮತ್ತು 2014 ರ ನಡುವೆ ಆಸ್ಟ್ರೇಲಿಯಾದಲ್ಲಿ ದಾಖಲಾದ 115 ಮಹಿಳಾ ಆರೋಪಿಗಳ ಪ್ರಕರಣಗಳನ್ನು ಆಧರಿಸಿದೆ. ಇದ್ರಲ್ಲಿ ಸರಿಸುಮಾರು ಶೇಕಡಾ 48 ರಷ್ಟು ಕೊಲೆಗಳು ಪೂರ್ವ ಯೋಜಿತವಾಗಿದ್ದವು ಎಂದು ಸಂಶೋಧನೆ ಕಂಡುಹಿಡಿದಿದೆ. ಇದರರ್ಥ ಅವು ಕೋಪದ ಭರದಲ್ಲಿ ಸಂಭವಿಸಿಲ್ಲ, ಮುಂಚಿತವಾಗಿಯೇ ಪ್ಲಾನ್ ಮಾಡಲಾಗಿತ್ತು. ಕೆಲ ಮಹಿಳೆಯರು ಸಂಗಾತಿ ಮಲಗಿದ್ದಾಗ ದಾಳಿ ನಡೆಸಿದ್ರು. ಮತ್ತೊಂದಿಷ್ಟು ಮಂದಿ ತಮ್ಮ ಪ್ರೇಮಿಗಳ ಸಹಾಯ ಪಡೆದು ಹತ್ಯೆ ಮಾಡಿದ್ದರು. ಇದರಲ್ಲಿ ಬಹುತೇಕ ಮಹಿಳೆಯರು ದೀರ್ಘಕಾಲದ ಕೌಟುಂಬಿಕ ಹಿಂಸೆ, ಮಾನಸಿಕ ಅಥವಾ ದೈಹಿಕ ಕಿರುಕುಳವನ್ನು ಅನುಭವಿಸಿದ್ದರು ಎಂದು ಸಂಶೋಧನೆ ಹೇಳಿದೆ. ಕೆಲವು ಸಂದರ್ಭಗಳಲ್ಲಿ, ಆತ್ಮರಕ್ಷಣೆಯೂ ಹೊರಹೊಮ್ಮಿದೆ. ಆದ್ದರಿಂದ, ಎಲ್ಲಾ ಪ್ರಕರಣಗಳನ್ನು ಏಕರೂಪವಾಗಿ ಪರಿಗಣಿಸುವುದು ಸರಿಯಲ್ಲ.

ಮಹಿಳಾ ಆರೋಪಿಗಳ ಮೂರು ವಿಧದ ಪ್ರಕರಣಗಳು 

AIC ವರದಿಯ ಪ್ರಕಾರ, ಮಹಿಳಾ ಆರೋಪಿಗಳ ಪ್ರಕರಣಗಳನ್ನು ವಿಶಾಲವಾಗಿ ಮೂರು ವರ್ಗಗಳಾಗಿ ವರ್ಗೀಕರಿಸಲಾಗಿದೆ. ದೀರ್ಘಕಾಲದ ಕೌಟುಂಬಿಕ ಹಿಂಸೆ ಅಥವಾ ದೌರ್ಜನ್ಯವನ್ನು ಅನುಭವಿಸಿದ ಮಹಿಳೆಯರು. ಘರ್ಷಣೆಗಳು, ಅಸೂಯೆ ಅಥವಾ ವಿಘಟನೆಯಿಂದಾಗಿ ಅಪರಾಧ ಮಾಡಿದ ಮಹಿಳೆಯರು.ಆರ್ಥಿಕ ಕಾರಣಗಳಿಗಾಗಿ, ಹೊಸ ಪ್ರೇಮ ಸಂಬಂಧ ಅಥವಾ ಇತರ ವೈಯಕ್ತಿಕ ಕಾರಣಗಳಿಗಾಗಿ ಕೊಲೆ ಮಾಡಿದ ಮಹಿಳೆಯರು. ಮಹಿಳಾ ಮತ್ತು ಪುರುಷ ಆರೋಪಿಗಳಿಗೆ ಅಪರಾಧಗಳನ್ನು ಮಾಡುವ ವಿಧಾನಗಳು ಹೆಚ್ಚಾಗಿ ಭಿನ್ನವಾಗಿರುತ್ತವೆ ಎಂದು ವರದಿ ಹೇಳುತ್ತದೆ. ಮೂರನೇ ವ್ಯಕ್ತಿಯ ಸಹಾಯವನ್ನು ಪಡೆಯುವುದು, ವಿಷ ಸೇವಿಸುವುದು, ಮಲಗಿರುವಾಗ ದಾಳಿ ಮಾಡುವುದು ಅಥವಾ ಪೂರ್ವಯೋಜಿತ ಯೋಜನೆ ಮುಂತಾದ ಮಾದರಿಗಳನ್ನು ಮಹಿಳೆಯರು ಹೆಚ್ಚು ಬಳಸ್ತಾರೆ. ಆದ್ರೆ ಎಲ್ಲ ಹುಡುಗಿಯರನ್ನು ಒಂದೇ ತಕ್ಕಡಿಯಲ್ಲಿ ತೂಕೋದು ಸೂಕ್ತವಲ್ಲ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

EV vs CNG: ಇವಿ ಮತ್ತು ಸಿಎನ್‌ಜಿ ಕಾರುಗಳಲ್ಲಿ ಯಾವುದು ಬೆಸ್ಟ್? ಯಾವುದು ಖರೀದಿಸಿದರೆ ಹೆಚ್ಚು ಲಾಭ?
ಕರ್ನಾಟಕದ ನಿರ್ಮಾಪಕ ಕೆವಿಎನ್ ತಮಿಳುನಾಡು ವಿಶೇಷ ದೆಹಲಿ ಪ್ರತಿನಿಧಿಯಾಗಿ ನೇಮಕ, ಭಾರಿ ವಿರೋಧ