ಸೀತೆ ಅಪಹರಣ ಮಾಡಿದ್ದು ರಾಮ!: ಗುಜರಾತ್‌ ಸಂಸ್ಕೃತ ಪಠ್ಯ ಪುಸ್ತದಲ್ಲಿ ಪ್ರಮಾದ

First Published Jun 2, 2018, 8:51 AM IST
Highlights

ರಾಮಾಯಣದಲ್ಲಿ ಬರುವ ಪೌರಾಣಿಕ ಪಾತ್ರಗಳಲ್ಲಿ ಸೀತೆಯನ್ನು ಅಪಹರಣ ಮಾಡಿದ್ದು ಯಾರು ಎಂಬ ಬಗ್ಗೆ ಬಹುಶಃ ಚಿಕ್ಕ ಮಕ್ಕಳೂ ಸರಿಯಾದ ಉತ್ತರ ನೀಡುತ್ತಾರೆ. ಆದರೆ ಗುಜರಾತಿನ 12ನೇ ತರಗತಿ ಸಂಸ್ಕೃತ ಪಠ್ಯ ಪುಸ್ತಕದಲ್ಲಿ ಸೀತೆಯನ್ನು ಅಪಹರಿಸಿದ್ದು ರಾಮ ಎಂದು ಹೇಳಲಾಗಿದೆ.

ಅಹ್ಮದಾಬಾದ್‌: ರಾಮಾಯಣದಲ್ಲಿ ಬರುವ ಪೌರಾಣಿಕ ಪಾತ್ರಗಳಲ್ಲಿ ಸೀತೆಯನ್ನು ಅಪಹರಣ ಮಾಡಿದ್ದು ಯಾರು ಎಂಬ ಬಗ್ಗೆ ಬಹುಶಃ ಚಿಕ್ಕ ಮಕ್ಕಳೂ ಸರಿಯಾದ ಉತ್ತರ ನೀಡುತ್ತಾರೆ. ಆದರೆ ಗುಜರಾತಿನ 12ನೇ ತರಗತಿ ಸಂಸ್ಕೃತ ಪಠ್ಯ ಪುಸ್ತಕದಲ್ಲಿ ಸೀತೆಯನ್ನು ಅಪಹರಿಸಿದ್ದು ರಾಮ ಎಂದು ಹೇಳಲಾಗಿದೆ.

‘ಸಂಸ್ಕೃತ ಸಾಹಿತ್ಯ ಪೀಠಿಕೆ’ ಎಂಬ ಪುಸ್ತಕದ 106ನೇ ಪುಟದಲ್ಲಿ, ‘ಇಲ್ಲಿ ಲೇಖಕರು ರಾಮನ ಮೂಲ ಆಲೋಚನೆಗಳನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ‘ರಾಮ’ ಸೀತೆಯನ್ನು ಅಪಹರಣ ಮಾಡಿದ ಸಂದರ್ಭದಲ್ಲಿ ಲಕ್ಷ್ಮಣ ರಾಮನಿಗೆ ಹೇಳುವ ಸಂದೇಶ ಹೃದಯ ಸ್ಪರ್ಶಿಯಾಗಿದೆ’ ಎಂದು ಹೇಳಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಗುಜರಾತ್‌ ರಾಜ್ಯ ಶಾಲಾ ಮಂಡಳಿ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ನಿತಿನ್‌ ‘ ಇದು ಅನುವಾದದ ಪ್ರಮಾದವಾಗಿದ್ದು, ರಾವಣ ಎಂದು ಬರೆಯುವ ಬದಲಾಗಿ ರಾಮ ಎನ್ನಲಾಗಿದೆ’ ಎಂದು ಹೇಳಿದ್ದಾರೆ.

click me!