ಶಿವಾಜಿನಗರದ IMA ಚಿನ್ನದಂಗಡಿಯಲ್ಲಿ ಪರಿಶೀಲನೆ ಅಂತ್ಯ: 20 ಟ್ರಂಕ್ ಚಿನ್ನಾಭರಣ ಪತ್ತೆ..!

By Web Desk  |  First Published Jun 20, 2019, 9:48 PM IST

ಐಎಂಎ ಬಹುಕೋಟಿ ಹಣ ಹೂಡಿಕೆ ಪ್ರಕರಣ| ಬೆಂಗಳೂರಿನ ಶಿವಾಜಿನಗರದಲ್ಲಿರುವ ಐಎಂಎ ಮುಖ್ಯ ಕಛೇರಿಯಲ್ಲಿ ಎಸ್ ಐಟಿ ಪರಿಶೀಲನೆ ಅಂತ್ಯ| 30 ಕೆಜಿ ಚಿನ್ನ, 450 ಕೆಜಿ ಬೆಳ್ಳಿ ಹಾಗೂ  2630 ಕ್ಯಾರೆಟ್ ವಜ್ರ ಸೇರಿದಂತೆ ಕೆಲ ಆಸ್ತಿ ಪತ್ರಗಳು ಪತ್ತೆ.


ಬೆಂಗಳೂರು, [ಜೂ. 20]: ಐಎಂಎ ವಂಚನೆ ಪ್ರಕರಣವನ್ನು ಕೈಗೆತ್ತಿಕೊಂಡಿರುವ ರಾಜ್ಯ ಎಸ್‌ಐಟಿ (ವಿಶೇಷ ತನಿಖಾ ತಂಡ)ವು ಇಂದೂ ಸಹ ಐಎಂಎ ಆಭರಣ ಮಳಿಗೆಗಳ ಮೇಲೆ ದಾಳಿ ಮುಂದುವರೆಸಿತ್ತು.

ಇಂದು [ಗುರುವಾರ] ವಿಶೇಷ ತನಿಖಾ ತಂಡ ಬೆಂಗಳೂರಿನ ಶಿವಾಜಿನಗರದ ಐಎಂಎ ಚಿನ್ನಾಭರಣ ಅಂಗಡಿ ಮೇಲೆ ನಡೆಸಿದ್ದು, ಭಾರೀ ಪ್ರಮಾಣದ ಚಿನ್ನಾಭರಣವನ್ನು ವಶಪಡಿಸಿಕೊಂಡಿದೆ. 

Tap to resize

Latest Videos

ಐಎಂಎ ಜುವೆಲ್ಸ್ ಪರಿಶೀಲನೆ: ಎಷ್ಟು ಸಿಗಬಹುದು ಚಿನ್ನಾಭರಣ?

ಬೀಗ ಹಾಕಿದ್ದ ಶಿವಾಜಿನಗರದ ಐಎಂಎ ಚಿನ್ನಾಭರಣ ಅಂಗಡಿಯ ಬೀಗ ಮುರಿದು ಒಳ ಪ್ರವೇಶಿಸಿದ ಎಸ್‌ಐಟಿ ತಂಡವು, ಷೋಕೋಸಿನಲ್ಲಿಟ್ಟದ್ದ ಚಿನ್ನದ ಜತೆಗೆ ದಾಸ್ತಾನು ಮಾಡಿಡಲಾಗಿದ್ದ ಚಿನ್ನವನ್ನೂ ವಶಪಡಿಸಿಕೊಂಡಿದ್ದಾರೆ.

ಅರಬ್ ದೇಶಗಳಲ್ಲೂ IMA ಮಹಾ ವಂಚನೆ ಬೆಳಕಿಗೆ

30 ಕೆಜಿ ಚಿನ್ನ, 450 ಕೆಜಿ ಬೆಳ್ಳಿ ಹಾಗೂ 2630 ಕ್ಯಾರೆಟ್ ವಜ್ರ ಸೇರಿದಂತೆ ಕೆಲ ಆಸ್ತಿ ಪತ್ರಗಳು ಸಿಕ್ಕಿವೆ. ಇದರ ಅಂದಾಜು ಮೌಲ್ಯ 20 ಕೋಟಿ ರು.ಎಂದು ತಿಳಿದುಬಂದಿದೆ.

ಕಚೇರಿಯಲ್ಲಿ ದೊರೆತ ವಸ್ತುಗಳನ್ನು ಪಂಚನಾಮೆ ನಡೆಸಿದ ಅಧಿಕಾರಿಗಳು, 20 ಟ್ರಂಕ್ ಗಳಲ್ಲಿ ಚಿನ್ನಾಭರಣಗಳನ್ನು ತುಂಬಿಕೊಂಡು ತೆರಳಿ ವಿಧಾನಸೌದದಲ್ಲಿರುವ ಟ್ರಜರಿಯಲ್ಲಿ ಭದ್ರಗೊಳಿಸಿದ್ದಾರೆ.

click me!