ಚಂದ್ರಬಾಬು ನಾಯ್ಡು ಲಂಡನ್ ನಲ್ಲಿ, 4 TDP ಎಂಪಿಗಳು ಬಿಜೆಪಿ ತೆಕ್ಕೆಯಲ್ಲಿ!

Published : Jun 20, 2019, 08:07 PM ISTUpdated : Jun 20, 2019, 08:22 PM IST
ಚಂದ್ರಬಾಬು ನಾಯ್ಡು ಲಂಡನ್ ನಲ್ಲಿ, 4 TDP ಎಂಪಿಗಳು ಬಿಜೆಪಿ ತೆಕ್ಕೆಯಲ್ಲಿ!

ಸಾರಾಂಶ

ಸರಣಿ ಹಿನ್ನಡೆಗಳಿಂದ ಆಘಾತಕ್ಕೆ ಒಳಗಾಗಿರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು , ಮಾನಸಿಕ ನೆಮ್ಮದಿಗಾಗಿ ಕುಟುಂಬದವರೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಆದ್ರೆ ಇತ್ತ  ಟಿಡಿಪಿಯ ನಾಲ್ವರು ರಾಜ್ಯಸಭಾ ಸದಸ್ಯರು ಬಿಗ್ ಶಾಕ್ ನೀಡಿದ್ದಾರೆ. 

ನವದೆಹಲಿ, [ಜೂ.20]: ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯ ಸೋಲಿನ  ಶಾಕ್ ನಲ್ಲೇ ಇದ್ದ ಆಂಧ್ರಪ್ರದೇಶದ ಮಾಜಿ ಸಿಎಂ  ಚಂದ್ರಬಾಬು ನಾಯ್ಡುಗೆ ಟಿಡಿಪಿ ನಾಲ್ವರು ರಾಜ್ಯಸಭಾ ಸದಸ್ಯರು ಬಿಗ್ ಶಾಕ್ ನೀಡಿದ್ದಾರೆ. 

ಇಂದು [ಗುರುವಾರ] ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದರು.ರಾಜೀನಾಮೆ ಸಲ್ಲಿಸಿದ್ದ ತಡ ನೇರವಾಗಿ ನವದೆಹಲಿ ಹೋಗಿ ಬಿಜೆಪಿ ಸೇರ್ಪಡೆಯಾದರು.

ಜಗನ್, ಕೆಸಿಆರ್ ಪ್ರಧಾನಿ ಮೋದಿಯ ಸಾಕುನಾಯಿಗಳು: ನಾಯ್ಡು!

ಟಿಡಿಪಿ ರಾಜ್ಯಸಭಾ ಸದಸ್ಯರಾದ ವೈ.ಎಸ್‌. ಚೌಧರಿ, ಟಿಜಿ ವೆಂಕಟೇಶ್‌, ಸಿ. ಎಂ ರಮೇಶ್‌ ಹಾಗೂ ಟಿ.ಜಿ ವೆಂಕಟೇಶ್, ಬಿಜೆಪಿ ನೂತನ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಅವರ ನೇತೃತ್ವದಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದರು. ಈ ಮೂಲಕ 245 ಸದಸ್ಯರ ಪೈಕಿ ಬಿಜೆಪಿ 71 ಸ್ಥಾನಗಳೊಂದಿಗೆ ರಾಜ್ಯಸಭೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ.

ಕಳೆದ ಲೋಕಸಭೆಯಲ್ಲಿ ಮೋದಿಯನ್ನ ಸೋಲಿಸ್ತೀನಿ ಎಂದು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಚಂದ್ರಬಾಬು ನಾಯ್ಡು ದೇಶ ಸುತ್ತಿದ್ದರು. ಆದ್ರೆ ತವರು ರಾಜ್ಯದಲ್ಲೇ ವಿಧಾನಸಭೆ, ಲೋಕಸಭೆಯಲ್ಲೂ ಟಿಡಿಪಿ ಹೀನಾಯವಾಗಿ ಸೋತಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!