ಮೊದಲ ಬಾದಾಮಿ ಭೇಟಿಯಲ್ಲೇ ಸಿದ್ದರಾಮಯ್ಯಗೆ ತಟ್ಟಿದ ಅಸಮಾಧಾನದ ಬಿಸಿ

First Published Jun 7, 2018, 4:49 PM IST
Highlights
  • ಬಾದಾಮಿಯಿಂದ ಶಾಸಕರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿದ ಮಾಜಿ ಸಿಎಂ 
  • ಸಿದ್ದರಾಮಯ್ಯರಿಂದ ದೂರ ಉಳಿದ ಅವರ ಆಪ್ತ ಮತ್ತು ಗೆಲುವಿನ ರೂವಾರಿ ಎಸ್‌.ಆರ್‌.ಪಾಟೀಲ್
  • ಸಚಿವ ಸಂಪುಟದಲ್ಲಿ ಸ್ಥಾನ ಸಿಗದ್ದಕ್ಕೆ ಅಸಮಾಧಾನಗೊಂಡಿದ್ದಾರಾ ಎಸ್‌.ಆರ್‌. ಪಾಟೀಲ್?

ಬಾದಾಮಿ: ಮಾಜಿ ಸಿಎಂ ಹಾಗೂ ಹಾಲಿ ಬಾದಾಮಿ ಶಾಸಕರಾಗಿರುವ ಸಿದ್ದರಾಮಯ್ಯ ಗುರುವಾರ ಸ್ವಕ್ಷೇತ್ರಕ್ಕೆ ನೀಡಿದ್ದು, ಅವರ ಮೊದಲ ಭೇಟಿಗೆ ಅಸಮಾಧಾನದ ಬಿಸಿ ತಟ್ಟಿದೆ.    

ಸಿದ್ಧರಾಮಯ್ಯ ಮೇಲೆ ಎಸ್.ಆರ್.ಪಾಟೀಲ್‌ ಮುನಿಸಿಕೊಂಡಿದ್ದಾರಾ ಎಂಬ ಪ್ರಶ್ನೆಗಳು ಎದ್ದಿವೆ. ಗುರುವಾರ ಬಾದಾಮಿಗೆ ಸಿದ್ಧರಾಮಯ್ಯ ಆಗಮಿಸಿದ್ದು, ಚುನಾವಣೆಯಲ್ಲಿ ಅವರ ಗೆಲುವಿನ ರುವಾರಿಯಾಗಿದ್ದ ಎಸ್.ಆರ್ ಪಾಟೀಲ್ ದೂರನೇ ಉಳಿದಿದ್ದಾರೆ.

ಗೆಲ್ಲಿಸಿಕೊಂಡು ಬರ್ತೇವೆ ಎಂದು ಸಿದ್ದರಾಮಯ್ಯರನ್ನು ಬಾದಾಮಿಗೆ ಕರೆತಂದಿದ್ದ ಎಸ್. ಆರ್.ಪಾಟೀಲ್, ನೂತನ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿದ್ದಕ್ಕೆ‌ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಬಾಗಲಕೋಟೆ ಜಿಲ್ಲೆಗೆ ಸಿದ್ದರಾಮಯ್ಯ ಬಂದ್ರೂ ಅವರ ಜೊತೆಗೆ ಬಾರದ ಎಸ್.ಆರ್.ಪಾಟೀಲರ ನಡೆ ಅವರೊಳಗಿರುವ ಅಸಮಾಧಾನವನ್ನು ಬಹಿರಂಗಪಡಿಸಿದೆ.

ಎಸ್.ಆರ್.ಪಾಟೀಲ್ ಈಗಾಗಲೇ ಕೆಪಿಸಿಸಿ ಕಾಯಾ೯ಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. 

ಬಾದಾಮಿಗೆ ಆಗಮಿಸಿದ ಸಿದ್ದರಾಮಯ್ಯ ಬನಶಂಕರಿ ದೇವಿ ಆಶಿವಾ೯ದ ಪಡೆದಿದ್ದಾರೆ. ಶಾಸಕರಾಗಿ ಆಯ್ಕೆ ಆದ ಮೇಲೆ‌ ಇದೆ‌ ಮೊದಲ ಬಾರಿ ಬಾದಾಮಿ ಕ್ಷೇತ್ರಕ್ಕೆ‌ ಭೇಟಿ ನೀಡಿರುವ ಸಿದ್ದರಾಮಯ್ಯ. ಮೃತ ರೈತನ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ಹಾಗೂ ವೈಯಕ್ತಿಕ 1 ಲಕ್ಷ ಪರಿಹಾರ ಚೆಕ್ ನೀಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಹಾಗೂ ಬಾಗಲಕೋಟೆಯ ಬಾದಾಮಿಯಿಂದ ಸಿದ್ದರಾಮಯ್ಯ ಸ್ಪರ್ಧಿಸಿದ್ದರು. ಚಾಮುಂಡೇಶ್ವರಿಯಲ್ಲಿ ಜೆಡಿಎಸ್‌ನ ಜಿ.ಟಿ. ದೇವೇಗೌಡ ಮುಂದೆ ಪರಾಭವಗೊಂಡರೆ, ಬಾದಮಿಯಲ್ಲಿ ಬಿಜೆಪಿಯ ಶ್ರೀರಾಮುಲುರನ್ನು ಸೋಲಿಸಿದ್ದರು. 

click me!