ದೇಶದ 15 ಉದ್ಯಮಿಗಳ 2.5 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಮೋದಿ.. ?

First Published Jun 7, 2018, 4:26 PM IST
Highlights

ದೇಶದ 15  ಉದ್ಯಮಿಗಳ 2.5 ಲಕ್ಷ ಕೋಟಿ ಸಾಲವನ್ನು ಪ್ರಧಾನಿ ನರೇಂದ್ರ  ಮೋದಿ ಮನ್ನಾ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದು, ವಾಸ್ತವವಾಗಿ ಇದು ಸುಳ್ಳು ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. 

ನವದೆಹಲಿ: ದೇಶದ 15 ಉದ್ಯಮಿಗಳ 2.5 ಲಕ್ಷ ಕೋಟಿ ಸಾಲವನ್ನು ಪ್ರಧಾನಿ ನರೇಂದ್ರ ಮೋದಿ ಮನ್ನಾ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದು, ವಾಸ್ತವವಾಗಿ ಇದು ಸುಳ್ಳು ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಮಂಡಸೌರ್‌ನಲ್ಲಿ ಮಾಡಿದ ಭಾಷಣ ಮತ್ತು ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಮಾಡಿದ ಆರೋಪಗಳಿಗೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಭರ್ಜರಿ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಟ್ವೀಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಜೇಟ್ಲಿ, ‘ಸಂಸತ್ತಿನ ಹೊರಗೆ ಅಥವಾ ಒಳಗೆ ರಾಹುಲ್ ಗಾಂಧಿ ಮಾತುಗಳನ್ನು ಕೇಳುವಾಗ, ನನ್ನಲ್ಲಿ ನಾನು ಇದೇ ಪ್ರಶ್ನೆ ಕೇಳುತ್ತಿರುತ್ತೇನೆ. ಅವರಿಗೆ ಎಷ್ಟು ಗೊತ್ತಿದೆ? ಅವರು ಯಾವಾಗ ಇದನ್ನೆಲ್ಲ ತಿಳಿದುಕೊಳ್ಳುತ್ತಾರೆ? ಮಧ್ಯಪ್ರದೇಶದಲ್ಲಿ ಬುಧವಾರ ಅವರು ಮಾಡಿದ ಭಾಷಣ ಕೇಳಿದ ಮೇಲೆ, ಉತ್ತರಕ್ಕೆ ಸಂಬಂಧಿಸಿದ ನನ್ನ ಕುತೂಹಲಗಳು ಮತ್ತೊಮ್ಮೆ ದೃಢಪಟ್ಟಿವೆ. ಅವರು ಅಸಮರ್ಪಕ ವಿವರಗಳನ್ನು ಹೊಂದಿದ್ದಾರೆಯೇ ಎಂಬ ಪ್ರಶ್ನೆಗಳು ಕಾಡುತ್ತಿವೆ. ಅವರು ಬುಧವಾರದ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಆರು ಮೂಲ ಅಂಶಗಳನ್ನು ಪರಿಗಣಿಸಿ ಉತ್ತರಿಸಿದ್ದೇನೆ. 

 ದೇಶದ 15  ಉದ್ಯಮಿಗಳ 2.5 ಲಕ್ಷ ಕೋಟಿ ಸಾಲವನ್ನು ಮೋದಿ ಮನ್ನಾ ಮಾಡಿದ್ದಾರೆ. 

- ವಾಸ್ತವವಾಗಿ ಇದು ಸಂಪೂರ್ಣ ಸುಳ್ಳು. ಯಾವುದೇ ಉದ್ಯಮಿಯ ಒಂದು ರುಪಾಯಿ ಸಾಲವನ್ನೂ ಸರ್ಕಾರ ಮನ್ನಾ ಮಾಡಿಲ್ಲ. ಬ್ಯಾಂಕ್ ಗಳಿಗೆ ಸಾಲ ಬಾಕಿಯಿರಿಸಿದವರನ್ನು ದಿವಾಳಿಯೆಂದು ಘೋಷಿಸ ಲಾಗಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ರಚಿಸಲ್ಪಟ್ಟ ಐಬಿಸಿಯಿಂದ ಅವರ ಕಂಪೆನಿಗಳನ್ನು ಕೈಬಿಡಲಾಗಿದೆ. ಈ ಸಾಲಗಳನ್ನು ಯುಪಿಎ ಆಡಳಿತಾವಧಿಯಲ್ಲಿ ನೀಡ ಲಾಗಿತ್ತು.

ರೈತರಿಗೆ ಸಾಲ ನೀಡದ ಕೇಂದ್ರ ಸರ್ಕಾರ ಉದ್ಯಮಿಗಳಿಗೆ ಮಾತ್ರ ಸಾಲ ಕೊಡುತ್ತಿದೆ. - ಇದೂ ಸುಳ್ಳು. ಇಂದು ಎನ್‌ಪಿಎಯ ದೊಡ್ಡ ಮೊತ್ತದ ಸಾಲ, ಮುಖ್ಯವಾಗಿ 2008 -14ರ ನಡುವೆ ಯುಪಿಎಯ ಎರಡನೇ ಅವಧಿಯಲ್ಲಿ ನೀಡಲಾಗಿತ್ತು. 2014 ರ ನಂತರ, ಈ ಹಣ ಹಿಂಪಡೆಯಲು ನಾವು ಒಂದರ ಮೇಲೊಂದರಂತೆ ವ್ಯವಸ್ಥಿತವಾಗಿ ಕ್ರಮ ಕೈಗೊಳ್ಳುತ್ತಿದ್ದೇವೆ. 

ಪ್ರಧಾನಿ 35000 ಕೋಟಿ ಸಾಲ ನೀಡಿದ್ದ ವ್ಯಾಪಾರಿಗಳು ವಿದೇಶಕ್ಕೆ ಪರಾರಿಯಾಗಿದ್ದಾರೆ. 

- ಇದು ಸುಳ್ಳು. ಈ ಬ್ಯಾಂಕಿಂಗ್ ವಂಚನೆ 2011 ರಲ್ಲಿ ಆರಂಭವಾಗಿತ್ತು, ಆಗ ಯುಪಿಎ ಅಧಿಕಾರವಿತ್ತು. ಅದನ್ನು ಎನ್‌ಡಿಎ ಅವಧಿಯಲ್ಲಿ ಪತ್ತೆಹಚ್ಚಲಾಗಿದೆ ಮಾತ್ರ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಚೀನಾದಲ್ಲಿ ಉತ್ಪಾದನೆಯಾಗುತ್ತಿರುವ ಮೊಬೈಲ್‌ಗಳು ಭಾರತದಲ್ಲೇ ಉತ್ಪಾದನೆಯಾಗುತ್ತಿದ್ದವು.

- 2014 ರಲ್ಲಿ ಯುಪಿಎ ಅಧಿಕಾರ ಕಳೆದುಕೊಳ್ಳುವ ವೇಳೆ, ಭಾರತದಲ್ಲಿ 2 ಮೊಬೈಲ್ ಫೋನ್ ಉತ್ಪಾದನಾ ಘಟಕಗಳು  ಅಸ್ತಿತ್ವದಲ್ಲಿದ್ದವು. ಈಗ 1,32,000 ಕೋಟಿ ಹೂಡಿಕೆಯೊಂದಿಗೆ, 120 ಇಂಥ ಘಟಕಗಳಿವೆ.

ಮೋದಿ ಸರ್ಕಾರದ ಅವಧಿಯಲ್ಲಿ ಭಾರತದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ 

ಇತ್ತೀಚಿನ ಜಿಡಿಪಿ ಭಾರತ ಜಗತ್ತಿನಲ್ಲಿ ತೀವ್ರಗತಿಯಲ್ಲಿ ಬೆಳೆಯುತ್ತಿರುವ ಆರ್ಥಿಕತೆ ಎಂಬುದು ಮತ್ತೊಮ್ಮೆ ಸಾಬೀತುಪಡಿಸಿದೆ.ನಿರ್ಮಾಣ, ಉತ್ಪಾದನೆ, ಬಂಡವಾಳ ರಚನೆ ಸೇರಿದಂತೆ ವಿವಿಧ ವಲಯಗಳಲ್ಲಿ ಎರಡಂಕಿಗಳ ಪ್ರಗತಿ ಸಾಧಿಸಲ್ಪಟ್ಟಿದೆ. ಇವೆಲ್ಲ ಉದ್ಯೋಗ ಸೃಷ್ಟಿಯಾಗುವ ವಲಯಗಳು. 

ನಾವು ರೈತರು ಮತ್ತು ಗ್ರಾಮಗಳೊಂದಿಗೆ ನಗರಗಳನ್ನು ಬೆಸೆಯುತ್ತೇವೆ 

ಮಧ್ಯಪ್ರದೇಶದಲ್ಲಿ 2003 ರಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವ ಹೊತ್ತಿಗೆ, ರಸ್ತೆಗಳು ಅತ್ಯಂತ ಕೆಟ್ಟದಾಗಿದ್ದವು. ಕಳಪೆ ರಸ್ತೆಗಳೂ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲು ಕಾರಣ. ಆದರೆ, ಶಿವರಾಜ್ ಸಿಂಗ್ ಚೌಹಾಣ್, ಪ್ರಧಾನಿ ಮೋದಿ ಅವಧಿಯಲ್ಲಿ ಗ್ರಾಮೀಣ  ರಸ್ತೆಗಳ ಮೇಲಿನ ಹೂಡಿಕೆ ಮೂರುಪಟ್ಟು ಹೆಚ್ಚಿದೆ. 

 

How Much Does He Know? https://t.co/sCwT77f5Pt

— Arun Jaitley (@arunjaitley)

Shri 's speech in Madhya Pradesh today reaffirmed my curiosity with respect to the question – How much does he know? is he being inadequately briefed or is he being a little too liberal with his facts?

— Arun Jaitley (@arunjaitley)

Measures taken by PM ji for welfare of Farmers, betterment of economy and for benefit of every citizen of India are globally acknowledged. Mr. Rahul Gandhi must check facts before stating the reverse which will only aggravate his party's fallibility.

— Arun Jaitley (@arunjaitley)

Measures taken by PM ji for welfare of Farmers, betterment of economy and for benefit of every citizen of India are globally acknowledged. Mr. Rahul Gandhi must check facts before stating the reverse which will only aggravate his party's fallibility.

— Arun Jaitley (@arunjaitley)

Madhya Pradesh had the worst set of roads in India when the Congress was voted out in 2003. People of MP recognize revolution brought in by the Gram Sadak Yojana under leadership of PM Shri ji & CM ji.

— Arun Jaitley (@arunjaitley)
click me!