ಮೈಸೂರಿನಲ್ಲಿ ಒಮ್ಮೆಯೂ ಜೆಡಿಎಸ್ ಗೆದ್ದಿಲ್ಲ, ಸಿದ್ದರಾಮಯ್ಯ ಮಾತಿನ ಹಿಂದಿನ ಮರ್ಮವೇನು?

By Web DeskFirst Published Mar 2, 2019, 9:43 AM IST
Highlights

ಮೈಸೂರು ಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಬೇಕೆಂದು ಸಚಿವ ಜಿ.ಟಿ.ದೇವೇಗೌಡ ಮಾತಿಗೆ ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.

ಮೈಸೂರು,[ಮಾ.2]: ಮೈಸೂರು-ಕೊಡಗು ಕ್ಷೇತ್ರವನ್ನ ಒಮ್ಮೆಯೂ ಜೆಡಿಎಸ್ ಗೆದ್ದಿಲ್ಲ, ನಾನು ಜೆಡಿಎಸ್​​ನಲ್ಲಿ ಇದ್ದಾಗಲೂ ಗೆದ್ದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ‌ಅವರು ಪರೋಕ್ಷವಾಗಿ ಜೆಡಿಎಸ್ ಕಾಲೆಳೆದಿದ್ದಾರೆ. 

ಮೈಸೂರು ಟಿಕೇಟ್ ಅನ್ನು ನಿಖಿಲ್ ಕುಮಾರಸ್ವಾಮಿ ಅವರಿಗೆ ನೀಡಬೇಕೆಂದು ನಿನ್ನೆ [ಶುಕ್ರವಾರ] ಬಹಿರಂಗ ಸಭೆಯಲ್ಲಿ ಸಚಿವ ಜಿ.ಟಿ.ದೇವೇಗೌಡ ಪ್ರಸ್ತಾಪಿಸಿದರು. ಅಂದ್ರೆ ಮೈಸೂರು ಕ್ಷೇತ್ರವನ್ನು ಜೆಡಿಎಸ್ ಗೆ ನೀಡಬೇಕೆನ್ನುವ ಅರ್ಥದಲ್ಲಿ ಹೇಳಿದ್ದರು. 

ಲೋಕಸಭಾ ಎಲೆಕ್ಷನ್: ಪ್ರತಾಪ್ ಸಿಂಹ ವಿರುದ್ಧ JDSನಿಂದ ನಿಖಿಲ್ ಹೆಸ್ರು ಪ್ರಸ್ತಾಪ

ಇನ್ನು ಈ ಬಗ್ಗೆ ಮೈಸೂರಿನ‌ಲ್ಲಿ ಕಾಂಗ್ರೆಸ್​  ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮೈಸೂರು-ಕೊಡಗು ಕ್ಷೇತ್ರದ ಸಂಸದ ಅಭ್ಯರ್ಥಿ ಯಾರೆಂಬುವುದನ್ನ ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ. 

ಈ ಕ್ಷೇತ್ರದಲ್ಲಿ 16 ಬಾರಿ ಚುನಾವಣೆ ನಡೆದಿದ್ದು, 13 ಬಾರಿ ಕಾಂಗ್ರೆಸ್, 3 ಮೂರಿ ಬಾರಿ ಬಿಜೆಪಿ ಗೆದ್ದಿದ್ದೆ. ಈ ಭಾಗದ ಸಂಸದ ಪ್ರತಾಪ್ ಸಿಂಹ ಮಾಹಾ ಸುಳ್ಳುಗಾರ. ಆತ, ಪ್ರಧಾನಿ ನರೇಂದ್ರ ಮೋದಿಗಿಂತಲೂ ಹೆಚ್ಚು ಸುಳ್ಳು ಹೇಳ್ತಾನೆ. ಹೀಗಾಗಿ ಪ್ರತಾಪ್ ಸಿಂಹನನ್ನು ಈ ಬಾರಿ ಸೋಲಿಸಬೇಕು ಎಂದು ಹೇಳಿದರು.

ಕೆಲವರು ನನ್ನನ್ನು ಸಂಸತ್​ ಚುನಾವಣೆಗೆ  ಸ್ಪರ್ಧೆ ಮಾಡಿ ಅಂತಿದ್ದಾರೆ. ಆದ್ರೆ ನಾನು ಇನ್ನು ಮುಂದೆ ಎಂ ಎಲ್ಎಗೂ ನಿಲ್ಲೋಲ್ಲ, ಎಂಪಿಗೂ ನಿಲ್ಲೋಲ್ಲ. ಚಾಮುಂಡೇಶ್ವರಿಯಲ್ಲೂ ನಿಲ್ಲೋಲ್ಲ, ಬದಾಮಿಯಲ್ಲೂ ಸ್ಪರ್ಧೆ ಮಾಡೋಲ್ಲ. ಆದ್ರೆ ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಂಡಿರ್ತಿನಿ. ರಾಜಕೀಯ ಬಿಟ್ಟು ನಾನು ಓಡಿ ಹೋಗುವುದಿಲ್ಲ ಎಂದರು.

click me!